ಬಾಲಿವುಡ್

ಸೌಂದರ್ಯವೇ ಮುಳುವಾಯಿತೆ? ಮೇಕಪ್ ಇಲ್ಲದ ಫೋಟೋ ಶೇರ್ ಮಾಡಿದ ಕಾಜಲ್ ಅಗರವಾಲ್!

Vishwanath S
ಮುಂಬೈ: ಮಗಧೀರ ಚಿತ್ರದ ನಟಿ ಕಾಜಲ್ ಅಗರವಾಲ್ ಅವರ ಮೇಕಪ್ ಇಲ್ಲದ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕಾಜಲ್ ಅವರು ಮೇಕಪ್ ಇಲ್ಲದ ಫೋಟೋವನ್ನು ಅಪ್ಲೋಡ್ ಮಾಡಿದ್ದು ಅದರಲ್ಲಿ ಸಂದೇಶವೊಂದನ್ನು ಬರೆದಿದ್ದಾರೆ. ಜನರು ಹೆಚ್ಚಾಗಿ ತೋರಿಕೆಯ ಸೌಂದರ್ಯವನ್ನು ಇಷ್ಟಪಡುತ್ತಾರೆ. ಅದಕ್ಕೆ ಸಮಾಜದಲ್ಲಿ ಹೆಚ್ಚು ಬೆಲೆ. ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಜನರು ಹೆಚ್ಚಾಗಿ ಕಾಸ್ ಮೆಟಿಕ್ಸ್ ಹಾಗೂ ಸೌಂದರ್ಯದ ಉತ್ಪನ್ನಗಳಿಗೆ ಹೆಚ್ಚು ಖರ್ಚು ಮಾಡುತ್ತಾರೆ.
ಮೇಕಪ್ ನಿಂದಾಗಿ ದೇಹದ ಸೌಂದರ್ಯ ಹೆಚ್ಚುತ್ತದೆ ಹೊರತು ನಾವು ಯಾರು? ನಮ್ಮ ವ್ಯಕ್ತಿತ್ವ ಏನು ಎಂಬುದನ್ನು ತೋರಿಸುವುದಿಲ್ಲ. ನಾವು ನೋಡಲು ಹೇಗೆ ಇದ್ದಿವೋ ಹಾಗೆ ಪ್ರೀತಿಸಿದರೆ ಅದೇ ನಮ್ಮ ನಿಜವಾದ ಸೌಂದರ್ಯ ಎಂದು ಕಾಜಲ್ ಅಗರವಾಲ್ ಬರೆದುಕೊಂಡಿದ್ದಾರೆ. 
SCROLL FOR NEXT