ಬಾಲಿವುಡ್

ನಿರ್ಮಾಪಕನಿಗೆ ಕೋಟಿ ಕೋಟಿ ಪಂಗನಾಮ: ಬಾಲಿವುಡ್ ನಟಿ ಅಮಿಷಾ ಪಟೇಲ್‌ಗೆ ಸಂಕಷ್ಟ!

Vishwanath S
ರಾಂಚಿ: ಬಾಲಿವುಡ್ ಹಾಟ್ ನಟಿ ಅಮಿಷಾ ಪಟೇಲ್ ನಿರ್ಮಾಪಕರೊಬ್ಬರಿಗೆ ಕೋಟಿ ಕೋಟಿ ಪಂಗನಾಮ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಈ ಸಂಬಂಧ ನಟಿ ವಿರುದ್ಧ ದೂರು ದಾಖಲಾಗಿದೆ.
ದೇಸಿ ಮ್ಯಾಜಿಕ್ ಚಿತ್ರದ ನಿರ್ಮಾಪಕ ಅಜಯ ಕುಮಾರ್ ಸಿಂಗ್ ಅವರಿಗೆ ಅಮಿಷಾ ಪಟೇಲ್ 2.5 ಕೋಟಿ ರುಪಾಯಿ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ. ರಾಂಚಿಯಲ್ಲಿ ಅಮಿಷಾ ತನ್ನ ಬ್ಯುಸಿನೆಸ್ ಪಾರ್ಟನರ್ ಕುನಾಲ್ ಗೂಮರ್ ಜತೆ ಅಜಯ್ ಅವರನ್ನು ಭೇಟಿ ಮಾಡಿದ್ದರಂತೆ. ಈ ವೇಳೆ ದೇಸಿ ಮ್ಯಾಜಿಕ್ ಚಿತ್ರದ ಚಿತ್ರೀಕರಣ ಹಣಕಾಸಿನ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು ನೀವು ಫೈನಾನ್ಸ್ ಮಾಡಿ ಎಂದು ಕೇಳಿಕೊಂಡಿದ್ದರು. 
ಅಮಿಷಾ ಮಾತಿನಂತೆ ಅಜಯ್ 2.5 ಕೋಟಿ ರುಪಾಯಿ ಕೊಟ್ಟಿದ್ದಾರೆ. ಆದರೆ ಸಿನಿಮಾ ಇನ್ನೂ ತೆರೆಗೆ ಬಂದಿಲ್ಲ. ಇತ್ತ ಅಜಯ್ ಸಿಂಗ್ ಅವರ ಹಣ ಕೂಡ ವಾಪಸ್ ಆಗಿಲ್ಲ. ಇದರಿಂದ ಕಂಗಲಾದ ಅಜಯ್ ಅಮಿಷಾಗೆ ಕರೆ ಮಾಡಿ ವಿಚಾರಿಸಿದ್ದಾರೆ.
ಒಂದೆರಡು ತಿಂಗಳು ಕಾಲಾವಕಾಶ ಕೇಳಿದ ಅವರು, ಅಸಲು ಬಡ್ಡಿ ಸೇರಿ 3 ಕೋಟಿ ರುಪಾಯಿ ಚೆಕ್ ಅಜಯ್ ಕೈಗೆ ಇಟ್ಟಿದ್ದರಂತೆ. ಇದರೆ ಈ ಚೆಕ್ ಕೂಡ ಬೌನ್ಸ್ ಆಗಿದೆ. ಕೊನೆಗೆ ಅಜಯ್ ರಾಂಚಿ ಕೋರ್ಟ್ ನಲ್ಲಿ ದೂರು ನೀಡಿದ್ದಾನೆ.
SCROLL FOR NEXT