ಬಾಲಿವುಡ್

ಹಿಂದೂಗಳ ಭಾವನೆಗಳಿಗೆ ಧಕ್ಕೆ: ದಬಾಂಗ್ -3 ಚಲನಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡದಂತೆ ಆಗ್ರಹ

Nagaraja AB

ಬೆಂಗಳೂರು: ಮುಂದಿನ ತಿಂಗಳ 20ರಂದು ಪ್ರದರ್ಶನಗೊಳ್ಳಲು ಸಿದ್ಧವಾಗಿರುವ ಬಾಲಿವುಡ್ ನ ಬ್ಯಾಡ್ ಬಾಯ್ ಎಂದೇ ಖ್ಯಾತಿ ಪಡೆದಿರುವ 'ಸಲ್ಮಾನ್ ಖಾನ್' ಅಭಿನಯದ 'ದಬಾಂಗ್-3' ಚಲನಚಿತ್ರದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ದೃಶ್ಯಗಳು ಹಾಡುಗಳಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡದಂತೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಇತ್ತೀಚೆಗೆ ಈ  ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದರಲ್ಲಿ ‘ಹುಡ್-ಹುಡ್ ದಬಾಂಗ್-ದಬಾಂಗ್’ ಹಾಡಿನಲ್ಲಿ ಹಿಂದೂಗಳ ಸಾಧು, ಅದೇ ರೀತಿ ಭಗವಾನ ಶಿವ, ಶ್ರೀರಾಮ ಹಾಗೂ ಶ್ರೀಕೃಷ್ಣ ದೇವರುಗಳಿಗೆ ಅವಮಾನಿಸಲಾಗಿದೆ. ಸಲ್ಮಾನ ಖಾನ್ ನೊಂದಿಗೆ ಸಾಧುಗಳು ಪಾಶ್ಚಾತ್ಯರಂತೆ ಅಶ್ಲೀಲ ಹಾವಭಾವದಲ್ಲಿ ಕುಣಿಯುತ್ತಿರುವಂತೆ ತೋರಿಸಲಾಗಿದೆ. ಇದರಿಂದ ಸಮಸ್ತ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ನೋವಾಗಿದೆ. ಸಲ್ಮಾನ ಖಾನ್ ಹಿಂದೂ ಸಾಧುಗಳನ್ನು ಅವಮಾನಿಸಿದ್ದಾರೆ ಎಂದು ಸಮಿತಿಯ ಮುಖಂಡ ಮೋಹನ್‌ಗೌಡ ಹೇಳಿದ್ದಾರೆ.

ಸಲ್ಮಾನ್ ಖಾನ್ ಚಿತ್ರದಲ್ಲಿ ಬರೀ ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದು, ಮುಲ್ಲಾ-ಮೌಲ್ವಿ ಅಥವಾ ಫಾದರ್-ಬಿಷಪ್ ಅವರನ್ನು ಕುಣಿಯುತ್ತಿರುಸುವಂತೆ ತೋರಿಸುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದ ಅವರು,  ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮುಂಬೈನ ಕೇಂದ್ರೀಯ ಚಲನಚಿತ್ರ ಪರಿವೀಕ್ಷಣ ಮಂಡಳಿಗೆ ‘ದಬಾಂಗ್ 3 ಈ ಚಲನಚಿತ್ರದಿಂದ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವಂತಹ ಪ್ರಸಂಗವನ್ನು ತೆಗೆಯಬೇಕು ಹಾಗೂ ಅಲ್ಲಿಯ ವರೆಗೆ ಈ ಚಲನಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಬಾರದು, ಎಂದು ಮನವಿ ಮೂಲಕ ಆಗ್ರಹಿಸಿದೆ ಎಂದರು.

SCROLL FOR NEXT