ಬಾಲಿವುಡ್

ರಾಮಾಯಣ, ಮಹಾಭಾರತ ನಂತರ ಡಿಡಿ ನ್ಯಾಷನಲ್ ನಲ್ಲಿ 'ಶ್ರೀ ಕೃಷ್ಣ' ನೋಡುವ ಸೌಭಾಗ್ಯ ಪ್ರೇಕ್ಷಕರದ್ದು

Sumana Upadhyaya

ಮುಂಬೈ: ಲಾಕ್ ಡೌನ್ ಸಮಯದಲ್ಲಿ ಪ್ರೇಕ್ಷಕರಿಗೆ ಪೌರಾಣಿಕ ಧಾರಾವಾಹಿಗಳನ್ನು ನೋಡುವ ಸಮಯವಿದು. ರಾಮಾಯಣ, ಮಹಾಭಾರತಗಳ ನಂತರ ಇದೀಗ ದೂರದರ್ಶನದಲ್ಲಿ ಶ್ರೀ ಕೃಷ್ಣ ಪೌರಾಣಿಕ ಧಾರಾವಾಹಿ ನೋಡುವ ಸೌಭಾಗ್ಯ.

20 ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾದ ಧಾರಾವಾಹಿ ಇದು. ಇದನ್ನು ಸಹ ರಮಾನಂದ ಸಾಗರ ಅವರೇ ನಿರ್ದೇಶಿಸಿದ್ದು. 1993ರಲ್ಲಿ ಡಿಡಿ ಮೆಟ್ರೊ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಶ್ರೀ ಕೃಷ್ಣ ಧಾರಾವಾಹಿ ನಂತರ 1996ರಲ್ಲಿ ಡಿಡಿ ನ್ಯಾಷನಲ್ ನಲ್ಲಿ ಮರು ಪ್ರಸಾರವಾಯಿತು. ಇದೀಗ ಲಾಕ್ ಡೌನ್ ಸಮಯದಲ್ಲಿ ಮತ್ತೆ ಮರು ಪ್ರಸಾರ ಕಾಣಲಿದೆ.

ವಯಸ್ಕ ಕೃಷ್ಣನ ಪಾತ್ರದಲ್ಲಿ ಸರ್ವದಮನ್ ಡಿ ಬ್ಯಾನರ್ಜಿ, ಪ್ರೌಢಾವಸ್ಥೆಯ ಕೃಷ್ಣನ ಪಾತ್ರದಲ್ಲಿ ಸ್ವಪ್ನಿಲ್ ಜೋಷಿ ನಟಿಸಿದ್ದರು.

SCROLL FOR NEXT