ಬಾಲಿವುಡ್

ಬಾಲಿವುಡ್ ನಟ ಸಂಜಯ್ ದತ್ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್!

Srinivasamurthy VN

ಮುಂಬೈ: ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಸಂಜಯ್​ ದತ್ ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಳೆದ ವಾರ ನಟ ಸಂಜಯ್ ದತ್ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಸೇರಿಸಿದ ನಂತರ ಅಲ್ಲೇ ರ‍್ಯಾಪಿಡ್​ ಆ್ಯಂಟಿಜನ್​ ಟೆಸ್ಟ್ ಮಾಡಲಾಗಿ ಅದರ ವರದಿ ನೆಗೆಟಿವ್​ ಬಂದಿತ್ತು. ಬಳಿಕ ಸಂಜಯ್ ದತ್ ಅವರ ಸ್ವಾಬ್ ಪರೀಕ್ಷೆಯಲ್ಲೂ ಅವರಿಗೆ ನೆಗೆಟಿವ್ ಬಂದಿತ್ತು. 

ಹೀಗಾಗಿ ಅವರನ್ನು ಸಾಮಾನ್ಯ ವಿಶೇಷ ಕೊಠಡಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

SCROLL FOR NEXT