ರಿಯಾ ಚಕ್ರವರ್ತಿ 
ಬಾಲಿವುಡ್

ಸುಶಾಂತ್ ಸಿಂಗ್ ರಜ್ಪೂತ್ ಸಾವು ಪ್ರಕರಣ: ರೆಹಾ ಚಕ್ರವರ್ತಿ ವಾಟ್ಸ್ ಆಪ್ ಚಾಟ್ ನಲ್ಲಿ ಡ್ರಗ್ಸ್ ಸಂಪರ್ಕ ಬಯಲು! 

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್ಪೂತ್ ಸಾವಿನ ಪ್ರಕರಣದಲ್ಲಿ ಮಹತ್ವದ ಸುಳಿವು ದೊರೆತಿದೆ. 

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್ಪೂತ್ ಸಾವಿನ ಪ್ರಕರಣದಲ್ಲಿ ಮಹತ್ವದ ಸುಳಿವು ದೊರೆತಿದೆ. 

ಸುಶಾಂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅವರ ವಿಚಾರಣೆ ವೇಳೆ ಅವರ ವಾಟ್ಸ್ ಆಪ್ ಚಾಟ್ ಹಿಸ್ಟರಿಯಲ್ಲಿ ಡ್ರಗ್ಸ್ ಸಂಪರ್ಕ ಇರುವುದು ಬಹಿರಂಗಗೊಂಡಿದೆ. ಜ್ಹೀ ನ್ಯೂಸ್ ಪ್ರಕಟಿಸಿರುವ ವರದಿಯ ಪ್ರಕಾರ ಪ್ರಕರಣದಲ್ಲಿ ಡ್ರಗ್ಸ್ ಕಾನ್ಸ್ಪಿರೆಸಿ ತೆರೆದುಕೊಳ್ಳುತ್ತಿದೆ. ವಾಟ್ಸ್ ಆಪ್ ಚಾಟ್ ನಲ್ಲಿ ರಿಯಾ ಚಕ್ರವರ್ತಿ ಡ್ರಗ್ಸ್ ಬಗ್ಗೆ ಮಾತನಾಡಿದ್ದಾರೆ. 

ರಿಯಾ ಚಕ್ರವರ್ತಿ ಹಲವು ಚಾಟ್ ಗಳನ್ನು ಡಿಲೀಟ್ ಮಾಡಿದ್ದರು. ಇವುಗಳನ್ನು ಪುನಃ ಪಡೆಯಲಾಗಿದೆ. ಮೊದಲ ಚಾಟ್ ನಲ್ಲಿ ರಿಯಾ ಚಕ್ರವರ್ತಿ ಹಾಗೂ ಡ್ರಗ್ ಡೀಲರ್ ಎಂದು ಹೇಳಲಾಗುತ್ತಿರುವ ಗೌರವ್ ಆರ್ಯ ನಡುವೆ ನಡೆದಿದೆ. ನಾವು ಹಾರ್ಡ್ ಡ್ರಗ್ಸ್ ಬಗ್ಗೆ ಮಾತನಾಡುವುದಾದರೆ ನಾನು ಹೆಚ್ಚಿನ ಡ್ರಗ್ಸ್ ನ್ನು ಬಳಕೆ ಮಾಡಿಲ್ಲ ಎಂದು ಗೌರವ್ ಗೆ ರಿಯಾ ಚಕ್ರವರ್ತಿ ಮಾ.08, 2017 ರಲ್ಲಿ ಮೆಸೇಜ್ ಕಳಿಸಿದ್ದಾರೆ. 

ಮತ್ತೊಂದು ಸಂಭಾಷಣೆಯಲ್ಲಿ ಸಾಮ್ಯುಯಲ್ ಮಿರಾಂಡ ಎಂಬ ವ್ಯಕ್ತಿಯೊಂದಿಗೆ ಮಾತನಾಡಿದಾಗ ಆತ Hi Rhea, the stuff is almost over ಎಂಬ ಸಂದೇಶ ರವಾನೆ ಮಾಡಿದ್ದು ಡ್ರಗ್ಸ್ ನಂಟು ಇರುವ ಶಂಕೆ ವ್ಯಕ್ತವಾಗತೊಡಗಿದೆ. 

ಇದಕ್ಕೂ ಮುನ್ನ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಸುಶಾಂತ್ ಸಾವಿನ ಪ್ರಕರಣದ ಬಗ್ಗೆ ಮಾತನಾಡಿ, ಸಾವಿಗೂ ಮುನ್ನ ಸುಶಾಂತ್ ದುಬೈ ಮೂಲದ ಡ್ರಗ್ ಡೀಲರ್ ನ್ನು ಭೇಟಿ ಮಾಡಿದ್ದರು ಎಂಬ ಅಚ್ಚರಿಯ ಹೇಳಿಕೆ ನೀಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT