ಬಾಲಿವುಡ್

ಸುಶಾಂತ್ ಸಿಂಗ್ ರಜಪೂತ್ ಸ್ನೇಹಿತ ಸಂದೀಪ್ ಸಿಂಗ್ ಬಿಜೆಪಿ ಕಚೇರಿಗೆ 53 ಸಲ ಕರೆ ಮಾಡಿದ್ದಾರೆ:ಕಾಂಗ್ರೆಸ್ 

Sumana Upadhyaya

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೀವನ ಚರಿತ್ರೆ ಸಿನೆಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಸಂದೀಪ್ ಎಸ್ ಸಿಂಗ್ ಅವರ ಹೆಸರು ಡ್ರಗ್ ಕೇಸಿನಲ್ಲಿ ಕೇಳಿಬರುತ್ತಿದ್ದು ಅವರು ಬಿಜೆಪಿ ಜೊತೆ ಹೊಂದಿರುವ ಸಂಬಂಧವನ್ನು ತನಿಖೆ ಮಾಡಬೇಕೆಂದು ಕಾಂಗ್ರೆಸ್ ನಿನ್ನೆ ಒತ್ತಾಯಿಸಿದೆ.

ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಬಿಜೆಪಿಯಲ್ಲಿರುವವರು ಯಾರು ಸಂದೀಪ್ ಸಿಂಗ್ ನ್ನು ರಕ್ಷಿಸಲು ನೋಡುತ್ತಿದ್ದಾರೆ, ಸುಶಾಂತ್ ಸಿಂಗ್ ರಜಪೂತ್ ಅವರ ನಿಕಟವರ್ತಿಯಾಗಿದ್ದ ಸಂದೀಪ್ ಸಿಂಗ್ ಕಳೆದ ಕೆಲ ತಿಂಗಳಿನಿಂದ ಮಹಾರಾಷ್ಟ್ರ ಬಿಜೆಪಿ ಕಚೇರಿಗೆ 53 ಸಲ ಕರೆ ಮಾಡಿದ್ದಾರೆ. ತಮ್ಮನ್ನು ಡ್ರಗ್ ಕೇಸಿನಿಂದ ರಕ್ಷಿಸಿಕೊಳ್ಳಲು ಅವರು ನೋಡುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಬಾಲಿವುಡ್ ವಿಷಯಗಳಿಗೆ ರಾಜಕೀಯ ಪಕ್ಷಗಳು ತಲೆ ಹಾಕುವುದಿಲ್ಲ. ಆದರೆ ಶಂಕಿತ ವ್ಯಕ್ತಿ ಆಡಳಿತ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಗೊತ್ತಾದರೆ ಜನರು ಆತ ಯಾರ ಜೊತೆ ಸಂಪರ್ಕ ಹೊಂದಿದ್ದಾನೆ, ಬಿಜೆಪಿಯಲ್ಲಿ ಯಾರು ಸಂದೀಪ್ ಸಿಂಗ್ ನ್ನು ರಕ್ಷಿಸಲು ನೋಡುತ್ತಿದ್ದಾರೆ ಎಂದು ತಿಳಿಯಬೇಕಾಗಿದೆ, ಸುಶಾಂತ್ ಸಿಂಗ್ ಕೇಸನ್ನು ಸಿಬಿಐಗೆ ವಹಿಸಲು ಸಂದೀಪ್ ಸಿಂಗ್ ಕಾರಣವೇ, ಇಂತಹ ಜನರೇಕೆ ಬಿಜೆಪಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಅಭಿಷೇಕ್ ಸಿಂಘ್ವಿ ಪ್ರಶ್ನಿಸಿದ್ದಾರೆ.

SCROLL FOR NEXT