ಮುಂಬೈ: ಕೊರೋನಾವೈರಸ್ ಸಾಂಕ್ರಾಮಿಕದ ವೇಳೆ ಬದುಕಿನ ಮೂಲವನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ದುರ್ಬಲ ಜನರಿಗೆ ಇ- ರಿಕ್ಷಾ ಒದಗಿಸುವ ನೂತನ ಕಾರ್ಯಕ್ರಮವೊಂದನ್ನು ಬಾಲಿವುಡ್ ನಟ ಸೋನು ಸೂದ್ ಚಾಲನೆ ನೀಡಿದ್ದಾರೆ.
'ದಬಾಂಗ್' 'ಜೋಧಾ ಅಕ್ಬರ್' ಮತ್ತು 'ಸಿಂಬಾ' ಚಿತ್ರಗಳ ಮೂಲಕ ಹೆಸರಾಗಿರುವ ಸೋನು ಸೂದ್, ಈ ವರ್ಷದ ಆರಂಭದಲ್ಲಿ ಕೊರೋನಾವೈರಸ್ ಕಾಣಿಸಿಕೊಂಡ ನಂತರ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ತಲುಪಲು ಪರಿತಪಿಸುತ್ತಿದ್ದ ವಲಸೆ ಜನರು ತಮ್ಮೂರಿಗೆ ಮರಳಲು ಸೋನ್ ಸೂದ್ ತಮ್ಮ ಸ್ವಂತ ಹಣದಲ್ಲಿ ಬಸ್ ಗಳ ವ್ಯವಸ್ಥೆ ಮಾಡಿದ್ದರು.
'ಖುದ್ ಕಮಾವೊ ಘರ್ ಚಲಾವೊ' ಎಂಬ ಹೆಸರಿನ ಈ ಕಾರ್ಯಕ್ರಮ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು 47 ವರ್ಷದ ಸೋನ್ ಸೂದ್ ಹೇಳಿದ್ದಾರೆ.
ಏನನ್ನಾದರೂ ನೀಡುವುದಕ್ಕಿಂತಲೂ ಉದ್ಯೋಗ ಒದಗಿಸುವುದು ಪ್ರಮುಖವಾದದ್ದು ಎಂಬುದರಲ್ಲಿ ನಂಬಿಕೆ ಹೊಂದಿದ್ದು, ಈ ಕಾರ್ಯಕ್ರಮ ಅವರನ್ನು ಸ್ವಾವಲಂಬಿಗಳನ್ನಾ ಮಾಡುವ ಮೂಲಕ ಮತ್ತೆ ತಮ್ಮ ಕಾಲುಗಳ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ಇರುವುದಾಗಿ ಸೂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಂಕ್ರಾಮಿಕದ ವೇಳೆ ಉದ್ಯೋಗ ಕಳೆದುಕೊಂಡವರನ್ನು ಕಂಪನಿಗಳಿಗೆ ಸಂಪರ್ಕಿಸುವುದು ಮತ್ತು ಅವರ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಈ ಹಿಂದೆ ಪ್ರವಾಸಿ ರೋಜ್ಗಾರ್ ಆ್ಯಪ್ ನ್ನು ಸಹ ಸೋನು ಸೂದ್ ಪ್ರಾರಂಭಿಸಿದ್ದರು.