ಸನ್ನಿ ಹಿಂದೂಸ್ತಾನಿ 
ಬಾಲಿವುಡ್

ಶೂ ಪಾಲಿಶ್ ಮಾಡ್ತಿದ್ದ ಯುವಕನೀಗ ಇಂಡಿಯನ್ ಐಡಲ್! ತಾಯಿಯೇ ವಿರೋಧಿಸಿದ್ರೂ ಶೋಗೆ ಬಂದು ಇತಿಹಾಸ ಬರೆದ ಗಾಯನ ಪ್ರತಿಭೆ

ಖಾಸಗಿ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ ಪ್ರಸಿದ್ದ ರಿಯಾಲಿಟಿ ಶೋ  ಇಂಡಿಯನ್ ಐಡಲ್ 11 ಇತ್ತೀಚೆಗೆ ಮುಕ್ತಾಯಗೊಂಡಿದ್ದು ಸನ್ನಿ ಹಿಂದೂಸ್ತಾನಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ವಿಶೇಷವೆಂದರೆ ಈತ ಈ ಮುನ್ನ ಶೂ ಪಾಲಿಶ್ ಮಾಡಿಕೊಂಡು ಜೀವನ ನಡೆಸುತ್ತಿದ್ದ! ಪಂಜಾಬ್‍ನ ಭಟಿಂಡಾದ  ನಿವಾಸಿಯಾದ ಸನ್ನಿ  ಇದೀಗ ಇಂಡಿಯನ್ ಐಡಲ್ ಆಗುವ ಮೂಲಕ

ಖಾಸಗಿ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ ಪ್ರಸಿದ್ದ ರಿಯಾಲಿಟಿ ಶೋ  ಇಂಡಿಯನ್ ಐಡಲ್ 11 ಇತ್ತೀಚೆಗೆ ಮುಕ್ತಾಯಗೊಂಡಿದ್ದು ಸನ್ನಿ ಹಿಂದೂಸ್ತಾನಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ವಿಶೇಷವೆಂದರೆ ಈತ ಈ ಮುನ್ನ ಶೂ ಪಾಲಿಶ್ ಮಾಡಿಕೊಂಡು ಜೀವನ ನಡೆಸುತ್ತಿದ್ದ! ಪಂಜಾಬ್‍ನ ಭಟಿಂಡಾದ  ನಿವಾಸಿಯಾದ ಸನ್ನಿ  ಇದೀಗ ಇಂಡಿಯನ್ ಐಡಲ್ ಆಗುವ ಮೂಲಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

ಶೂ ಪಾಲಿಶ್ ಮಾಡಿಕೊಂಡಿದ್ದ ಸನ್ನಿ  ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿದ್ದ ಕುಟುಂಬದವರಲ್ಲ. ಮಾದ್ಯಮ ವರದಿಗಳ ಪ್ರಕಾರ ಅವರು  ಇಂಡಿಯನ್ ಐಡಲ್ 11 ರ ಆಡಿಷನ್ ನೀಡುವ ಸಲುವಾಗಿ ಬೇರೊಬ್ಬರಿಂದ ಹಣವನ್ನು ಎರವಲು ಪಡೆದು ಬಂದಿದ್ದರು.

ಇಂಡಿಯನ್ ಐಡಲ್ 11 ರ ಆಡಿಷನ್ ನೀಡಲು ಬಂದಾಗ, ಈ ಪ್ರದರ್ಶನವು ಇಷ್ಟು ದೊಡ್ಡ ಮಟ್ಟದಲ್ಲಿರಲಿದೆ ಎಂಬ ಎಣಿಕೆ ಸನ್ನಿ ಅವರಿಗೆ ಇರಲಿಲ್ಲ. ಮೇಲಾಗಿ ಅವರು ಜೀವನದಲ್ಲಿ ಎಲ್ಲಾ ಭರವಸೆಗಳನ್ನು ಕಳೆದುಕೊಂಡ ನಂತರ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು."ನಾನಿಲ್ಲಿಗೆ ಬರುವುದಾಗಿ ಎಂದಿಗೂ ಯೋಚಿಸಿರಲಿಲ್ಲ ಎರಡೂ ಆಡಿಷನ್ ಸುತ್ತುಗಳಲ್ಲಿ ಗೋಲ್ಡನ್ ಮೈಕ್ಸ್ಸ್ವೀಕರಿಸಿದ್ದು ನನಗೆ ನಿಜಕ್ಕೂ ಅಚ್ಚರಿ ತಂದಿತ್ತು." ಅವರು ಹೇಳಿದ್ದಾರೆ.

ಸನ್ನಿ ಅವರ ತಾಯಿ ಅವರಿಗೆ ಎಂದಿಗೂ ಬೆಂಬಲವಾಗಿರುತ್ತಾರೆ. ಆದರೆ ಅದೇ ವೇಳೆ ಅವರ ಕನಸುಗಳ ಬಗೆಗೆ ತಾಯಿಗೆ ಹೆಚ್ಚಿನ ಭರವಸೆಗಳಿಲ್ಲ. ಸನ್ನಿ ಇಂಡಿಯನ್ ಐಡಲ್ ಕಾರ್ಯಕ್ರಮಕ್ಕೆ ಬರುವಾಗಲೂ ತಾಯಿಯೊಡನೆ ತುಸು ವಾಗ್ವಾದಗಳಾಗಿದ್ದವು.ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ವೇಳೆ ಮಗ ಎಲ್ಲವನ್ನೂ ಬಿಟ್ಟು ಹಾಡು ಹೇಳುವ ಕಾರ್ಯಕ್ರಮಕ್ಕೆ ಹೋಗುತ್ತೇನೆಂದದ್ದು ಅವರ ತಾಯಿಗೆ ಇಷ್ಟವಾಗಿರಲಿಲ್ಲ. ಮತ್ತು ಮಗನ ನಿರ್ಧಾರವನ್ನು ಆಕೆ ವಿರೋಧಿಸಿದ್ದರು."ಇಂಡಿಯನ್ ಐಡಲ್ 11 ರಲ್ಲಿ ತನಗೆ ಹೆಚ್ಚು ಸುತ್ತುಗಳನ್ನು ಮುಂದುವರಿಯಲು ಆಗಲ್ಲವೆಂದು ನನ್ನ ತಾಯಿ ಭಾವಿಸಿದ್ದಳು. ಏಕೆಂದರೆ ಆಕೆ ಈ ಎಲ್ಲವಕ್ಕೂ ನನಗೆ ಹೆಚ್ಚು ಹೆಚ್ಚು ಹಣದ ಅಗತ್ಯವಿರಲಿದೆ ಎಂದು ಅವಳು ಕಲ್ಪಿಸಿಕೊಂಡಿದ್ದಳು"

ಅದಾಗ್ಯೂ ಸನ್ನಿಯವರ ಇಚ್ಚಾಶಕ್ತಿ ಮತ್ತು ಉತ್ಸಾಹವು ಇಂದು ಅವರು ಇಂಡಿಯನ್ ಐಡಲ್ ಆಗಿ ಹೊರಹೊಮ್ಮುವುದಕ್ಕೆ ಕಾರಣವಾಗಿದೆ. ಆಡಿಷನ್ ಸುತ್ತಿನಿಂದಲೇ ಅವರನ್ನು ಹೊರಹಾಕಲಾಗುತ್ತದೆ ಎಂದು ಅವರು ಭಾವಿಸಿದ್ದರು."ನಾನು ಆಡಿಷನ್ ಸುತ್ತಿನಿಂದಲೇ ಹೊರಹೋಗುತ್ತೇನೆ ಎಂದು ಭಾವಿಸಿದ್ದೆ. ಆದರೆ ಇಂಡಿಯನ್ ಐಡಲ್ 11 ರ ವಿಜೇತರಾಗಿ ಹೊರಹೊಮ್ಮುತ್ತೇನೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT