ಬಾಲಿವುಡ್

ತನಗೆ 2 ಬಾರಿ ಗರ್ಭಪಾತವಾಗಿತ್ತು: ಅಜಯ್ ದೇವ್‌ಗನ್ ಜತೆಗಿನ ದಾಂಪತ್ಯದ ಕಥೆ ಹಂಚಿಕೊಂಡ ಕಾಜೋಲ್

ಬಾಲಿವುಡ್ ನಟಿ ಕಾಜೋಲ್ ಮತ್ತು ಅಜಯ್ ದೇವ್‌ಗನ್ ಪರದೆಯ ಮೇಲೆ ಹಾಗೂ ಪರದೆಯಾಚೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದು ಅತ್ಯುತ್ತಮ ಜೋಡಿ ಎನಿಸಿಕೊಂಡಿದ್ದಾರೆ. ಇದಾಗಲೇ ಇವರ ವಿವಾಹವಾಗಿ 21 ವಸಂತಗಳು ಸಂದಿದೆ. ಕಾಜೋಲ್ ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆಯೊಂದಿಗಿನ ಸಂವಾದದಲ್ಲಿ ತಮ್ಮ ಪತಿ ಅಜಯ್ ದೇವ್‌ಗನ್ ಅವರೊಂದಿಗೆ ತನ್ನ ಜೀವನವನ್ನು ತೆರೆದಿಟ್ಟಿದ್ದರು.

ಬಾಲಿವುಡ್ ನಟಿ ಕಾಜೋಲ್ ಮತ್ತು ಅಜಯ್ ದೇವ್‌ಗನ್ ಪರದೆಯ ಮೇಲೆ ಹಾಗೂ ಪರದೆಯಾಚೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದು ಅತ್ಯುತ್ತಮ ಜೋಡಿ ಎನಿಸಿಕೊಂಡಿದ್ದಾರೆ. ಇದಾಗಲೇ ಇವರ ವಿವಾಹವಾಗಿ 21 ವಸಂತಗಳು ಸಂದಿದೆ. ಕಾಜೋಲ್ ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆಯೊಂದಿಗಿನ ಸಂವಾದದಲ್ಲಿ ತಮ್ಮ ಪತಿ ಅಜಯ್ ದೇವ್‌ಗನ್ ಅವರೊಂದಿಗೆ ತನ್ನ ಜೀವನವನ್ನು ತೆರೆದಿಟ್ಟಿದ್ದರು.

ಹಲ್ಚಲ್ ಸೆಟ್ ನಲ್ಲಿ ಮೊದಲ ಬಾರಿಗೆ ಭೇಟಿಯಾದಾಗಲೇ ತಮ್ಮಲ್ಲಿ ಪ್ರೇಮಾಂಕುರವಾಗಿತ್ತು ಎಂದಿರುವ ಕಾಜೋಲ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅವರ ಜೀವನದ ಕಥೆಯನ್ನು ಭಾವನಾತ್ಮಕ ಪದಗಳಲ್ಲಿ ವರ್ಣಿಸಿದ್ದಾರೆ. ಜತೆಗೆ ತಾವಿಬ್ಬರೂ ಒಟ್ಟಾಗಿ ಎದುರಿಸಿದ್ದ ಕಷ್ಟದ ಸಮಯಗಳನ್ನು ಸಹ ಅವರು ಮೆಲುಕು ಹಾಕಿದ್ದಾರೆ.

"ನಾವು 25 ವರ್ಷಗಳ ಹಿಂದೆ ಭೇಟಿಯಾದೆವು. ಹಲ್ಚಲ್ ಸೆಟ್‌ಗಳಲ್ಲಿ ಶಾಟ್‌ಗೆ ಸಿದ್ಧವಾಗಿದ್ದಾಗ ನಾನು ನನ್ನ ನಾಯಕನೆಲ್ಲಿ ಎಂದು ಕೇಳಿದೆ  ಆಗ ಯಾರೋ ಒಬ್ಬರು ಅವರು ಆ ಮೂಲೆಯಲ್ಲಿ ಕುಳಿತಿದ್ದಾರೆ ಎಂದರು. ದ್ದೆ. ನಾವು ಸೆಟ್ ನಲ್ಲಿ ಮಾತನಾಡಲು ಪ್ರಾರಂಭಿಸಿದೆವು ಮತ್ತು ಸ್ನೇಹಿತರಾದೆವು.  ನಾವಾಗ ಇಬ್ಬರೂ ಬೇರೆ ಬೇರೆಯವರೊಡನೆ ಡೇಟಿಂಗ್ ನಲ್ಲಿದ್ದೆವು. ಆದರೆ ನಾವಿಬ್ಬರೂ ಒಟ್ಟಾಗಿರಬೇಕಾದ ಮಹತ್ವ ಅರಿತುಕೊಂಡಿದ್ದೆವು. ಬಳಿಕ ಅವರೊಡನೆ ದೂರವಾದೆವು, ನಾವಿಬ್ಬರೂ ಇನ್ನಷ್ಟು ಹತ್ತಿರವಾಗಿದ್ದೆವು. 

"ನನ್ನ ತಂದೆಗೆ ಮೊದಲು ನನ್ನ ಹಾಗೂ ಅಜಯ್ ವಿವಾಹದ ಬಗ್ಗೆ ಸಮ್ಮತಿ ಇರಲಿಲ್ಲ. ನಾವು ಮದುವೆಯಾಗಲು ನಿರ್ಧರಿಸಿದಾಗ ನಾವು 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದೆವು. ಅವರ ಪೋಷಕರು ಉತ್ಸಾಹದಲ್ಲಿದ್ದರು ಆದರೆ ನ್ನ ತಂದೆ ನನ್ನೊಂದಿಗೆ 4 ದಿನಗಳವರೆಗೆ ಮಾತನಾಡಲಿಲ್ಲ "ನಾನು ನನ್ನ ವೃತ್ತಿಜೀವನದತ್ತ ಗಮನ ಹರಿಸಬೇಕೆಂದು ಅವನು ಬಯಸಿದನು, ಆದರೆ ನಾನು ನಿರ್ಧಾರ ತೆಗೆದುಕೊಂಡಾಗಿತ್ತುಮತ್ತು ಅಂತಿಮವಾಗಿ ನಮ್ಮ ಮನೆಯಲ್ಲಿ ಒಪ್ಪಿ ವಿವಾಹವಾಗಿತ್ತು.

ಇನ್ನು ಕಾಜೋಲ್ ತಮಗೆ ಎರಡು ಬಾರಿ ಗರ್ಭಪಾತವಾಗಿದೆ ಎಂದು ಹೇಳಿಕೊಂಡಿದ್ದಾರೆ. ""ಕಾಲಾನಂತರದಲ್ಲಿ, ನಾವು ಮಕ್ಕಳನ್ನು ಹೊಂದಲು  ಬಯಸಿದ್ದೆವು. ನಾನು K3Gಸಮಯದಲ್ಲಿ ಗರ್ಭಿಣಿಯಾಗಿದ್ದೆ, ಆದರೆ ಗರ್ಭಪಾತವಾಗಿತ್ತು. ಆ ದಿನ ನಾನು ಆಸ್ಪತ್ರೆಯಲ್ಲಿದ್ದೆ, ಆ ಚಿತ್ರವು ಬಹಳ ಚೆನ್ನಾಗಿ ಬಂದಿತ್ತು. ಆದರೆ ಅದು ಸಂತೋಷಪಡುವ ಸಮಯವಾಗಿರಲಿಲ್ಲ. ಅದಾದ ನಂತರ ನನಗೆ ಇನ್ನೊಮ್ಮೆ ಗರ್ಭಪಾತವಾಯಿತು. ಆದರೆ ಅಂತಿಮವಾಗಿ ನೈಸಾ ಮತ್ತು ಯುಗ್ ಜನಿಸಿದ್ದರು. ನಮ್ಮ ಕುಟುಂಬದ  ಪರಿಪೂರ್ಣತೆ ಕಂಡಿತು. 

"ಅಜಯ್ ಅವರ 100 ನೇ ಚಲನಚಿತ್ರದ ವೇಳೆ  ನಮ್ಮದೇ ಕಂಪನಿಯನ್ನು ರಚಿಸಿದ್ದೆವು. ತಿದಿನ ನಾವು ಹೊಸದನ್ನು ನಿರ್ಮಿಸುವುದು ನಮ್ಮ ಉದ್ದೇಶ

"ತನ್ಹಾಜಿ-ದಿ ಅನ್‌ಸಂಗ್ ವಾರಿಯರ್‌ನಲ್ಲಿ 12 ವರ್ಷಗಳ ನಂತರ ಕಾಜೋಲ್ ಮತ್ತು ಅಜಯ್ ದೇವ್‌ಗನ್ ಒಟ್ಟಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಉದಯಭನ್ ಸಿಂಗ್ ರಾಥೋಡ್ ವಿರುದ್ಧ ಸಿಂಹಗಡ್ ಕದನದಲ್ಲಿ (1670) ಹೋರಾಡಿದ ಮರಾಠಾ ಯೋಧ ತನ್ಹಾಜಿ ಮಾಲುಸಾರೆ ಪಾತ್ರದಲ್ಲಿ ಅಜಯ್ ನಟಿಸಿದ್ದಾರೆ. ರಾಥೋಡ್ ಪಾತ್ರವನ್ನು ಸೈಫ್ ಅಲಿ ಖಾನ್ ಮಾಡಲಿದ್ದಾರೆ.  ಚಿತ್ರದಲ್ಲಿ ಅಜಯ್ ಅವರ ಪತ್ನಿ ಸುಬೇದಾರ್ ತಾನಾಜಿ ಮಾಲುಸಾರೆ ಪಾತ್ರವನ್ನು ಕಾಜೋಲ್ ನಿರ್ವಹಿಸಿದ್ದಾರೆ.ಚಿತ್ರವು ನಾಳೆ ( ಜನವರಿ 10, 2020)ತೆರೆಗೆ ಬರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT