ಗಣೇಶ್ ಆಚಾರ್ಯ 
ಬಾಲಿವುಡ್

ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಮೇಲೆ ಕಿರುಕುಳ ಆರೋಪ: ಮುಂಬೈ ಮಹಿಳೆಯಿಂದ ದೂರು ದಾಖಲು 

ಕಳೆದ ವರ್ಷ ಮೀ ಟೂ ಆರೋಪ ಬಂದು ಸುದ್ದಿಯಾಗಿದ್ದ ಬಾಲಿವುಡ್ ನ ಖ್ಯಾತ ಕೊರಿಯೊಗ್ರಾಫರ್ ಗಣೇಶ್ ಆಚಾರ್ಯ ವಿರುದ್ಧ ಮತ್ತೊಮ್ಮೆ ಅಂತಹದ್ದೇ ರೀತಿಯ ಆಪಾದನೆ ಕೇಳಿಬಂದಿದೆ. 

ಮುಂಬೈ: ಕಳೆದ ವರ್ಷ ಮೀ ಟೂ ಆರೋಪ ಬಂದು ಸುದ್ದಿಯಾಗಿದ್ದ ಬಾಲಿವುಡ್ ನ ಖ್ಯಾತ ಕೊರಿಯೊಗ್ರಾಫರ್ ಗಣೇಶ್ ಆಚಾರ್ಯ ವಿರುದ್ಧ ಮತ್ತೊಮ್ಮೆ ಅಂತಹದ್ದೇ ರೀತಿಯ ಆಪಾದನೆ ಕೇಳಿಬಂದಿದೆ. 


ಮುಂಬೈಯ 33 ವರ್ಷದ ಮಹಿಳೆ ಗಣೇಶ್ ಆಚಾರ್ಯ ಅವರಿಂದ ಬಾಲಿವುಡ್ ನಲ್ಲಿ ನನಗೆ ಕೆಲಸ ಮಾಡಲು ಅವಕಾಶ ಕೈ ತಪ್ಪುತ್ತಿದ್ದು ತನಗೆ ಅವಕಾಶ ಸಿಗಬೇಕಾದರೆ ಹಣ ನೀಡುವಂತೆ ಮತ್ತು ವಯಸ್ಕರ ವಿಡಿಯೊಗಳನ್ನು ನೋಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.


ಗಣೇಶ್ ಆಚಾರ್ಯ ಅವರು ಭಾರತೀಯ ಸಿನಿಮಾ ಮತ್ತು ದೂರದರ್ಶನ ನೃತ್ಯ ನಿರ್ದೇಶಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಹೀಗಾಗಿ ಅವರ ಪ್ರಭಾವ ಸಾಕಷ್ಟು ಇರುವುದರಿಂದ ನನಗೆ ಕೆಲಸ ಮಾಡಲು ಅವಕಾಶ ಸಿಗುತ್ತಿಲ್ಲ, ಗಣೇಶ್ ಆಚಾರ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.


ದೂರು ಸಲ್ಲಿಸಿದ ಮಹಿಳೆ ಸಹಾಯಕ ನೃತ್ಯ ನಿರ್ದೇಶಕಿಯಾಗಿದ್ದು ಗಣೇಶ್ ಆಚಾರ್ಯ ತಮ್ಮ ಮೇಲೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಸದಸ್ಯತ್ವವನ್ನು ರದ್ದುಪಡಿಸಲು ನೋಡುತ್ತಿದ್ದು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!