ಬಾಲಿವುಡ್

ಲಡಾಕ್ ನ ಗಲ್ವಾನ್ ಸಂಘರ್ಷವನ್ನು ತೆರೆ ಮೇಲೆ ತರಲಿದ್ದಾರೆ ನಟ ಅಜಯ್ ದೇವಗನ್

Sumana Upadhyaya

ಕಳೆದ ಜೂನ್ 15ರಂದು ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷ, ಅದರಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು ದೇಶದ ಚರಿತ್ರೆಯಲ್ಲಿ ದಾಖಲಾಗಿದೆ.

ಇದೇ ಎಳೆಯನ್ನಿಟ್ಟುಕೊಂಡು ಚಿತ್ರ ತಯಾರಿಸಲು ಹೊರಟಿದ್ದಾರೆ ಬಾಲಿವುಡ್ ನಟ ಅಜಯ್ ದೇವಗನ್. ಚೀನಾ ಸೇನಾ ಯೋಧರ ಜೊತೆ ಹೋರಾಡಿ ಹುತಾತ್ಮರಾದ 20 ಯೋಧರ ಮೇಲೆಯೇ ಕಥೆ ತಯಾರಾಗಲಿದೆಯಂತೆ.

ಚಿತ್ರದಲ್ಲಿ ಅಜಯ್ ದೇವಗನ್ ಇರುತ್ತಾರೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆಯಂತೆ. ಅಜಯ್ ದೇವಗನ್ ಅವರ ಎಫ್ ಫಿಲ್ಮ್ಸ್ ಮತ್ತು ಸೆಲೆಕ್ಟ್ ಮೀಡಿಯಾ ಹೋಲ್ಡಿಂಗ್ಸ್ ಎಲ್ಎಲ್ ಪಿ ಜೊತೆಯಾಗಿ ಚಿತ್ರ ನಿರ್ಮಿಸಲಿವೆ.

1975ರಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಜೊತೆ ನಡೆದ ಯುದ್ಧದಲ್ಲಿ ಕಂಡ ಸಾವು ನೋವಿನ ನಂತರ ಚೀನಾ ಪಡೆಯೊಂದಿಗೆ ನಡೆದ ಸಂಘರ್ಷದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಭಾರತೀಯ ಯೋಧರ ಸಾವು-ನೋವು ಕಂಡಿದ್ದು ಇದೇ ಮೊದಲು.

ಅಜಯ್ ದೇವಗನ್ ಅವರ ಮುಂದಿನ ಚಿತ್ರ ಭುಜ್:ದ ಪ್ರೈಡ್ ಆಫ್ ಇಂಡಿಯಾ ತೆರೆಗೆ ಬರಲು ಸಜ್ಜಾಗಿದ್ದು ಅಭಿಷೇಕ್ ದುದೈಯಾ ನಿರ್ದೇಶಿಸಿದ್ದಾರೆ. ಒಟಿಟಿ ಡಿಜಿಟಲ್ ಮೂಲಕ ಸದ್ಯದಲ್ಲಿಯೇ ತೆರೆಗೆ ಬರಲಿದೆ.

SCROLL FOR NEXT