ರಜತ್ ಮುಖರ್ಜಿ 
ಬಾಲಿವುಡ್

ಪ್ರಸಿದ್ಧ ಬಾಲಿವುಡ್ ನಿರ್ದೇಶಕ ರಜತ್ ಮುಖರ್ಜಿ ಇನ್ನಿಲ್ಲ

ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಬಾಲಿವುಡ್ ರ್ದೇಶಕ ರಜತ್ ಮುಖರ್ಜಿ ಜೈಪುರದಲ್ಲಿ ಭಾನುವಾರ ನಿಧನರಾದರು. ಪ್ಯಾರ್ ಟ್ಯೂನ್ ಕ್ಯಾ ಕಿಯಾ…, ಲವ್ ಇನ್ ನೇಪಾಳ್, ರೋಡ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಪ್ರಸಿದ್ದರಾಗಿದ್ದ ಮುಖರ್ಜಿ ದೀರ್ಘಕಾಲದಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ನಟ ಮನೋಜ್ ಬಾಜಪೇಯಿ ಹೇಳಿದ್ದಾರ

ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಬಾಲಿವುಡ್ ರ್ದೇಶಕ ರಜತ್ ಮುಖರ್ಜಿ ಜೈಪುರದಲ್ಲಿ ಭಾನುವಾರ ನಿಧನರಾದರು. ಪ್ಯಾರ್ ಟ್ಯೂನ್ ಕ್ಯಾ ಕಿಯಾ…, ಲವ್ ಇನ್ ನೇಪಾಳ್, ರೋಡ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಪ್ರಸಿದ್ದರಾಗಿದ್ದ ಮುಖರ್ಜಿ ದೀರ್ಘಕಾಲದಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ನಟ ಮನೋಜ್ ಬಾಜಪೇಯಿ ಹೇಳಿದ್ದಾರೆ.

ಮುಖರ್ಜಿ ಅವರ ಸಾವಿನ ಸುದ್ದಿಯನ್ನು  ಬಾಜಪೇಯಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.  “ನನ್ನ ಸ್ನೇಹಿತ ಮತ್ತು ರೋಡ್ ನಿರ್ದೇಶಕ ರಜತ್ ಮುಖರ್ಜಿ ಅನಾರೋಗ್ಯದ ವಿರುದ್ಧ ಸುದೀರ್ಘ ಹೋರಾಟದ ನಂತರ ಜೈಪುರದಲ್ಲಿ ಇಂದು ಮುಂಜಾನೆ ನಿಧನರಾದರು! ಅವರ ಆತ್ಮಕ್ಕೆ ಶಾಂತಿ!! ನಾವೆಂದೂ ಇನ್ನು ಭೇಟಿಯಾಗುವುದಿಲ್ಲ ಎಂದು ನಂಬಲು ಕಷ್ಟವಾಗುತ್ತಿದೆ.ಖುಷ್ ರೆಹ್ ಜಹಾ ಭಿ ರೆಹ್. " ಎಂದು ಬಾಜಪೇಯಿ ಬರೆದಿದ್ದಾರೆ.

ನಿರ್ದೇಶಕ ಹನ್ಸಲ್ ಮೆಹ್ತಾ ಕೂಡ ಟ್ವಿಟ್ಟರ್ ನಲ್ಲಿ ಮುಖರ್ಜಿ ಅವರ ಸಾವಿನ ದುಃಖದ ಸಂದೇಶ ಹಂಚಿಕೊಂಡಿದ್ದಾರೆ. “ಆತ್ಮೀಯ ಸ್ನೇಹಿತನ ನಿಧನದ ಬಗ್ಗೆ ಸುದ್ದಿ ಸಿಕ್ಕಿದೆ. ಪ್ಯಾರ್ ಟ್ಯೂನ್ ಕ್ಯಾ ಕಿಯಾ ಮತ್ತು ರೋಡ್  ನಿರ್ದೇಶಕ ರಜತ್ ಮುಖರ್ಜಿ ಬಾಂಬೆಯಲ್ಲಿನ ನಮ್ಮ ಆರಂಭಿಕ, ದಿನಗಳಲ್ಲಿ ಸ್ನೇಹಿತರಾಗಿದ್ದರು. ನಿಮ್ಮ ಅಗಲಿಕೆ ಪ್ರಿಯ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ."

ಬಾಜಪೇಯಿ ಹಾಗೂ ಮುಖರ್ಜಿ ರೋಡ್ ಎಂಬ ಥ್ರಿಲ್ಲರ್ ಚಲನಚಿತ್ರದಲ್ಲಿ ಒಟ್ತಾಗಿ ಕೆಲಸ ಮಾಡಿದ್ದರು. ಇದರಲ್ಲಿ ವಿವೇಕ್ ಒಬೆರಾಯ್, ಅಂತಾರಾ ಮಾಲಿ, ವಿಜಯ್ ರಾಜ್ ಮತ್ತು ಮಕ್ರಂದ್ ದೇಶಪಾಂಡೆ ನಟಿಸಿದ್ದಾರೆ. ಮುಖರ್ಜಿ ಅವರು ಇಶ್ಕ್ ಕಿಲ್ಸ್ ಎಂಬ ಕ್ರೈಂ ಡ್ರಾಮ  ಟಿವಿ ಸರಣಿಯನ್ನು ನಿರ್ದೇಶಿಸಿದರು. ಮೃತ ರಜತ್ ಮುಖರ್ಜಿ ಅವರಿಗೆ ಪತ್ನಿ, ತಾಯಿ ಮತ್ತು ಸಹೋದರ ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT