ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

ಉಭಯ ನಾಯಕರ ಸಭೆಯಲ್ಲಿ 10 ಒಪ್ಪಂದಗಳು ಸೇರಿದಂತೆ ಒಟ್ಟು 18 ಮಹತ್ವದ ಫಲಿತಾಂಶಗಳು ಹೊರಬಂದಿವೆ.
Prime Minister Narendra Modi and New Zealand Prime Minister Christopher Luxon during a delegation level meeting, in New Zealand.
ನ್ಯೂಜಿಲ್ಯಾಂಡ್ ನಲ್ಲಿ ನಿಯೋಗ ಮಟ್ಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನ್ಯೂಜಿಲ್ಯಾಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್.
Updated on

ಭಾರತ ಮತ್ತು ನ್ಯೂಜಿಲೆಂಡ್ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆ (Strategic Partnership) ಮಟ್ಟಕ್ಕೆ ಹೆಚ್ಚಿಸಲು ಒಪ್ಪಿಗೆ ಸೂಚಿಸಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ನಡುವಿನ ಮಾತುಕತೆಯ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, 2030ರೊಳಗೆ ಉಭಯ ದೇಶಗಳ ಸರಕು ಮತ್ತು ಸೇವೆಗಳ ದ್ವಿಪಕ್ಷೀಯ ವ್ಯಾಪಾರವನ್ನು 35,000 ಕೋಟಿ ರೂಪಾಯಿಗೆ (7 ಬಿಲಿಯನ್ ನ್ಯೂಜಿಲೆಂಡ್ ಡಾಲರ್) ದ್ವಿಗುಣಗೊಳಿಸುವ ಗುರಿಯನ್ನೂ ನಿಗದಿಪಡಿಸಲಾಗಿದೆ.

ಉಭಯ ನಾಯಕರ ಸಭೆಯಲ್ಲಿ 10 ಒಪ್ಪಂದಗಳು ಸೇರಿದಂತೆ ಒಟ್ಟು 18 ಮಹತ್ವದ ಫಲಿತಾಂಶಗಳು ಹೊರಬಂದಿವೆ.

ಇವುಗಳಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ದ್ವಿಪಕ್ಷೀಯ ಸಂಬಂಧ ವಿಸ್ತರಣೆಗೆ ಮಾರ್ಗಸೂಚಿ, ಇಂಡೋ-ಪೆಸಿಫಿಕ್ ಸಾಗರ ಸಹಕಾರ ವೃದ್ಧಿಗೆ ರೂಪುರೇಷೆ ಹಾಗೂ ಭಾರತೀಯ ನೌಕಾಪಡೆ ಮತ್ತು ನ್ಯೂಜಿಲ್ಯಾಂಡ್ ರಕ್ಷಣಾ ಪಡೆಯ ನಡುವಿನ ಪರಸ್ಪರ ಸಾಗಣೆ ಮತ್ತು ಪೂರೈಕೆ ಬೆಂಬಲ ಒಪ್ಪಂದ ಪ್ರಮುಖವಾಗಿವೆ.

ಜಂಟಿ ಪ್ರಕಟಣೆಯ ಪ್ರಕಾರ, ಪ್ರಧಾನಿ ಮೋದಿ ಮತ್ತು ಲಕ್ಸನ್ ಇಂಡೋ-ಪೆಸಿಫಿಕ್ ಪ್ರದೇಶದ ಕುರಿತು ಸಮಗ್ರ ಚರ್ಚೆ ನಡೆಸಿದ್ದು, ಮುಕ್ತ, ಮುಕ್ತಾಯವಾಗದ (Open), ಸಮೃದ್ಧ ಮತ್ತು ನಿಯಮಾಧಾರಿತ ಇಂಡೋ-ಪೆಸಿಫಿಕ್ ಪ್ರದೇಶದ ನಿರ್ಮಾಣಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಅಲ್ಲದೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಹಾಗೂ ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಕಾಪಾಡುವ ಅಗತ್ಯವನ್ನು ಉಭಯ ನಾಯಕರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕಾನೂನು, ವಿಶೇಷವಾಗಿ 1982ರ ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದ (UNCLOS) ಅನುಸಾರ ಸಮುದ್ರಗಳಲ್ಲಿ ಮುಕ್ತ ಸಂಚಾರ, ವಿಮಾನಗಳ ಹಾರಾಟ ಮತ್ತು ಇತರೆ ಕಾನೂನುಬದ್ಧ ಬಳಕೆಯನ್ನು ಖಚಿತಪಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಇಂಡೋ-ಪೆಸಿಫಿಕ್ ಸಹಕಾರಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಉಭಯ ರಾಷ್ಟ್ರಗಳು ಸಾಗರ ಭದ್ರತಾ ಸಂವಾದ (Maritime Security Dialogue) ಆರಂಭಿಸಲು ಸಹ ಒಪ್ಪಿಕೊಂಡಿದ್ದು, ಇದರ ಮೂಲಕ ಸಹಕಾರ, ಸಮನ್ವಯ ಮತ್ತು ಮಾಹಿತಿ ವಿನಿಮಯವನ್ನು ಬಲಪಡಿಸಲಾಗುತ್ತದೆ.

ಚೀನಾದ ಹೆಚ್ಚುತ್ತಿರುವ ಪ್ರಾದೇಶಿಕ ಪ್ರಭಾವದ ಹಿನ್ನೆಲೆಯಲ್ಲಿ ಇಂಡೋ-ಪೆಸಿಫಿಕ್ ಸಹಕಾರ ವಿಸ್ತರಣೆಗೆ ಒತ್ತು ನೀಡಿದ ಪ್ರಧಾನಿ ಮೋದಿಯವರ ಮೂರು ರಾಷ್ಟ್ರಗಳ ಪ್ರವಾಸದ ಮೂರನೇ ಹಾಗೂ ಅಂತಿಮ ಹಂತವಾಗಿ ಅವರು ಶುಕ್ರವಾರ ರಾತ್ರಿ ಆಕ್ಲೆಂಡ್‌ಗೆ ಆಗಮಿಸಿದ್ದರು.

ಇತ್ತೀಚೆಗಷ್ಟೇ ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ (FTA)ಕ್ಕೆ ಸಹಿ ಹಾಕಿದ ನಂತರ ಈ ಭೇಟಿ ನಡೆದಿರುವುದು ವಿಶೇಷ.

Prime Minister Narendra Modi and New Zealand Prime Minister Christopher Luxon during a delegation level meeting, in New Zealand.
ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಮಾತುಕತೆಯಲ್ಲಿ ಪ್ರಧಾನಿ ಮೋದಿ, ಸಮುದ್ರ ರಾಷ್ಟ್ರಗಳಾದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ನಿಕಟ ಸಹಕಾರವು ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಹೊಸ ಶಕ್ತಿ ತುಂಬಲಿದ್ದು, ಶಾಂತಿಯ ನಮ್ಮ ಹಂಚಿಕೆಯ ಗುರಿಗಳನ್ನು ಸಾಧಿಸಲು ಹೊಸ ಚೈತನ್ಯ ನೀಡಲಿದೆ ಎಂದು ಹೇಳಿದರು.

2030ರೊಳಗೆ ದ್ವಿಪಕ್ಷೀಯ ಸರಕು ಮತ್ತು ಸೇವೆಗಳ ವ್ಯಾಪಾರವನ್ನು 7 ಬಿಲಿಯನ್ ನ್ಯೂಜಿಲ್ಯಾಂಡ್ ಡಾಲರ್ (ಸುಮಾರು ₹35,000 ಕೋಟಿ)ಗೆ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯ ಗುರಿಯತ್ತ ಕೆಲಸ ಮಾಡಲು ಉಭಯ ನಾಯಕರು ಒಪ್ಪಿಕೊಂಡರು.

ಜೊತೆಗೆ, ಭಾರತ–ನ್ಯೂಜಿಲ್ಯಾಂಡ್ ಮುಕ್ತ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಜಾರಿಗೆ ತರಲು ಸಹಕಾರ ನೀಡುವುದಾಗಿ ನಿರ್ಧರಿಸಿದರು.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಕುರಿತು ಚರ್ಚಿಸಿದ ಮೋದಿ ಮತ್ತು ಲಕ್ಸನ್, ಉದ್ವಿಗ್ನತೆ ಮತ್ತೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಎಲ್ಲಾ ಪಕ್ಷಗಳು ಸಂಯಮ ವಹಿಸಬೇಕು, ಉದ್ವಿಗ್ನತೆಯನ್ನು ತಗ್ಗಿಸಬೇಕು ಹಾಗೂ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಕರೆ ನೀಡಿದರು.

ಹಾರ್ಮುಜ್ ಜಲಸಂಧಿಯ ಮೂಲಕ ಸಾಗರ ಮಾರ್ಗದ ಮುಕ್ತ ಸಂಚಾರ ಹಾಗೂ ಜಾಗತಿಕ ವಾಣಿಜ್ಯ ಹರಿವನ್ನು ಸಂಪೂರ್ಣವಾಗಿ ಪುನಃಸ್ಥಾಪಿಸುವ ಅಗತ್ಯವನ್ನು ಒತ್ತಿಹೇಳಿದ ಅವರು, ಹಡಗುಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರುವುದನ್ನು ವಿರೋಧಿಸಿದರು.

ಜೊತೆಗೆ, ಸಂಘರ್ಷಕ್ಕೆ ಶಾಶ್ವತ ಮತ್ತು ಶಾಂತಿಯುತ ಪರಿಹಾರ ಕಂಡುಕೊಳ್ಳಲು ಸಂವಾದ, ರಾಜತಾಂತ್ರಿಕತೆ ಹಾಗೂ ಅಂತಾರಾಷ್ಟ್ರೀಯ ಕಾನೂನು ಪಾಲನೆ ಅತ್ಯಗತ್ಯ ಎಂದು ಇಬ್ಬರೂ ನಾಯಕರು ಪುನರುಚ್ಚರಿಸಿದರು.

ಇದೇ ವೇಳೆ, ವಿಶ್ವಸಂಸ್ಥೆಯಲ್ಲಿ ಧೈರ್ಯಶಾಲಿ ಹಾಗೂ ಪರಿಣಾಮಕಾರಿ ಸುಧಾರಣೆಗಳು ಆಗಬೇಕೆಂದು ಒತ್ತಾಯಿಸಿದ ಮೋದಿ ಮತ್ತು ಲಕ್ಸನ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com