ಬಾಲಿವುಡ್

'ಆತ್ಮನಿರ್ಭರ್' ಆಗುವುದಾಗಿ ಪ್ರತಿಜ್ಞೆ ಮಾಡಿ, ಚೀನಾ ಉತ್ಪನ್ನ ಬಹಿಷ್ಕರಿಸಿ: ಕ್ವೀನ್​ ಕಂಗನಾ ಕರೆ

Lingaraj Badiger

ನವದೆಹಲಿ: ಇತ್ತೀಚಿಗೆ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಮಲ್ಲಯುದ್ಧದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ದೇಶದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ ಅಭಿಯಾನ ಆರಂಭವಾಗಿದ್ದು, ಈ ಅಭಿಯಾನಕ್ಕೆ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಸಹ  ಕೈ ಜೋಡಿಸಿದ್ದಾರೆ.

ಈ ಕುರಿತು ಸುಮಾರು ಎರಡು ನಿಮಿಷಗಳ ವಿಡಿಯೋ ಹಂಚಿಕೊಂಡಿರುವ ಕಂಗನಾ, ಚೀನಾ ಉತ್ಪನ್ನಗಳನ್ನು ಸಂಪೂರ್ಣ ಬಹಿಷ್ಕರಿಸುವ ಮೂಲಕ 'ಆತ್ಮನಿರ್ಭರ್'ರಾಗಿ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.

ಗಡಿಯಲ್ಲಿ ಭಾರತೀಯ ಸೈನಿಕರನ್ನು ಕೊಲ್ಲುತ್ತಿರುವ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಿ. ಅಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಭಾರತದಲ್ಲಿ ಮಾರಿ, ಅದರಿಂದ ಬಂದ ಹಣದಿಂದ ಶಸ್ತ್ರಾಸ್ತ್ರಗಳನ್ನು ಕೊಂಡು ನಮ್ಮ ಸೈನಿಕರನ್ನೇ ಕೊಲ್ಲುತ್ತಾರೆ. ಇಂತಹ ದೇಶದಿಂದ ಬರುವ ಉತ್ಪನ್ನಗಳನ್ನು ಕೊಳ್ಳುವುದನ್ನು ನಿಲ್ಲಿಸೋಣ ಎಂದಿದ್ದಾರೆ.

"ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಆಂಗ್ಲರ ಆಡಳಿತ ಕೊನೆಗೊಳಿಸಲು ಮಹಾತ್ಮ ಗಾಂಧಿ ಅವರು ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದನ್ನು ನಾವು ಮರೆತಿದ್ದೇವೆಯೇ? ಲಡಾಖ್ ಕೇವಲ ಒಂದು ತುಂಡು ಭೂಮಿಯಲ್ಲ. ಅದು ಅತ್ಯಂತ ಅವಶ್ಯಕವಾದ ಭಾರತದ ಭಾಗ. ಹೀಗಾಗಿ ಚೀನಾ ವಿರುದ್ಧದ ಯುದ್ಧದಲ್ಲಿ ನಾವೂ ಪಾಲ್ಗೊಳ್ಳುವುದು ಅನಿವಾರ್ಯ ಎಂದು ಕಂಗನಾ ಹೇಳಿದ್ದಾರೆ.

SCROLL FOR NEXT