ತೃತೀಯಲಿಂಗಿಗಳ ಮನೆ ನಿರ್ಮಾಣಕ್ಕಾಗಿ 1.5 ಕೋಟಿ ದೇಣಿಗೆ ನಿಡಿದ ಅಕ್ಷಯ್ ಕುಮಾರ್ 
ಬಾಲಿವುಡ್

ತೃತೀಯಲಿಂಗಿಗಳ ಮನೆ ನಿರ್ಮಾಣಕ್ಕಾಗಿ 1.5 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದಲ್ಲಿ ತೃತೀಯಲಿಂಗಿಗಳ ಬೆಂಬಲಕ್ಕೆ ಮುಂದಾಗಿದ್ದು ಈ ನಿಟ್ಟಿನಲ್ಲಿ ಚೆನ್ನೈನಲ್ಲಿ ತೃತೀಯಲಿಂಗಿಗಳಿಗಾಗಿ ಮನೆ ನಿರ್ಮಾಣಕ್ಕೆ  1.5 ಕೋಟಿ ರೂ. ನೀಡಿದ್ದಾರೆ. ಅಕ್ಷಯ್ ಅವರ ಮುಂಬರುವ ಚಿತ್ರ ಲಕ್ಷ್ಮಿ ಬಾಂಬ್ ಅನ್ನು ನಿರ್ದೇಶಿಸುತ್ತಿರುವ ರಾಘವ ಲಾರೆನ್ಸ್, ನಟನ ಹೊಸ ಉಪಕ್ರಮಕ್ಕೆ ಶ್ಲಾಘಿಸಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದಲ್ಲಿ ತೃತೀಯಲಿಂಗಿಗಳ ಬೆಂಬಲಕ್ಕೆ ಮುಂದಾಗಿದ್ದು ಈ ನಿಟ್ಟಿನಲ್ಲಿ ಚೆನ್ನೈನಲ್ಲಿ ತೃತೀಯಲಿಂಗಿಗಳಿಗಾಗಿ ಮನೆ ನಿರ್ಮಾಣಕ್ಕೆ  1.5 ಕೋಟಿ ರೂ. ನೀಡಿದ್ದಾರೆ. ಅಕ್ಷಯ್ ಅವರ ಮುಂಬರುವ ಚಿತ್ರ ಲಕ್ಷ್ಮಿ ಬಾಂಬ್ ಅನ್ನು ನಿರ್ದೇಶಿಸುತ್ತಿರುವ ರಾಘವ ಲಾರೆನ್ಸ್, ನಟನ ಹೊಸ ಉಪಕ್ರಮಕ್ಕೆ ಶ್ಲಾಘಿಸಿದ್ದಾರೆ.

ಅವರು ಈ  "ಒಳ್ಳೆಯ ಸುದ್ದಿ" ಅನ್ನು ಸ್ನೇಹಿತರು ಮತ್ತು ಅಭಿಮಾನಿಗಳೊಂದಿಗೆ ಫೇಸ್‌ಬುಕ್‌ನಲ್ಲಿ ಕೆಲವು ಚಿತ್ರಗಳೊಂದಿಗೆ ಹಂಚಿಕೊಂಡಿದ್ದಾರೆ. "ನಾನು ಒಂದು ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ, ಅಕ್ಷಯ್ ಕುಮಾರ್ ಸರ್ ಭಾರತದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗಾಗಿ ಮನೆ ನಿರ್ಮಿಸಲು 1.5 ಕೋಟಿ ರೂ. ನೀಡಿದ್ದಾರೆ. . "ಲಕ್ಷ್ಮಿ ಬಾಂಬ್ ಶೂಟ್ ಸಮಯದಲ್ಲಿ ನಾನು ಅಕ್ಷಯ್ ಕುಮಾರ್ ಸರ್ ಅವರೊಂದಿಗೆ ಟ್ರಸ್ಟ್ ಯೋಜನೆಗಳು ಮತ್ತು ತೃತೀಯ ಲಿಂಗಿಗಳ ಮನೆಗಳ  ಬಗ್ಗೆ ಮಾತನಾಡುತ್ತಿದ್ದೆ, ಇದನ್ನು ಕೇಳಿದ ಕೂಡಲೇ ಅಕ್ಷಯ್ ತಾವು ಮನೆ ನಿರ್ಮಾಣಕ್ಕಾಗಿ  1.5 ಕೋಟಿ ರೂ. ದೇಣಿಗೆ ನೀಡುವುದಾಗಿ ಹೇಳಿದರು."

ರಾಘವ ಲಾರೆನ್ಸ್ ಅವರದೇ ಹೆಸರಿನ ಚಾರಿಟಬಲ್ ಟ್ರಸ್ಟ್‌ನ ಮುಖ್ಯಸ್ಥರಾಗಿದ್ದಾರೆ. ಅವರ ಫೌಂಡೇಷನ್ನಿನಿಂದ 15 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದು ಇದೀಗ ತೃತೀಯ ಲಿಂಗಿಗಳಿಗೆ  ಆಶ್ರಯ ನೀಡುವ ಮೂಲಕ ಅವರ  ಉನ್ನತಿಗಾಗಿ ಹೊಸ ಯೋಜನೆಯನ್ನು ಪ್ರಾರಂಭಿಸುವ "ಉದ್ದೇಶ ಹೊಂದಿದ್ದಾರೆ.

"ನಾನು ಸಹಾಯ ಮಾಡುವ ಪ್ರತಿಯೊಬ್ಬರನ್ನು ದೇವರೆಂದು ಪರಿಗಣಿಸುತ್ತೇನೆ. ಆದ್ದರಿಂದ ಈಗ ಅಕ್ಷಯ್ ಕುಮಾರ್ ಸರ್ ನಮಗೆ ದೇವರ ಸಮಾನರು. . ಈ ಯೋಜನೆಗೆ ಅವರ ದೊಡ್ಡ ಬೆಂಬಲವನ್ನು ನೀಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಿದೆ. ಅಕ್ಷಯ್ ಕುಮಾರ್ ಸರ್ ಅವರ ಬೆಂಬಲದೊಂದಿಗೆ ಭಾರತದಾದ್ಯಂತ ಆಶ್ರಯ. ಕಲ್ಪಿಸಲು ಎಲ್ಲಾ ತೃತೀಯ ಲಿಂಗಿಗಳಿಗೆ ನೆರವಾಗುವುದು ನನ್ನ ಉದ್ದೇಶ ಭಾರತದ ತೃತೀಯ ಲಿಂಗಿಗಳ ಪರವಾಗಿ ನಾನು ನಟನಿಗೆ ಧನ್ಯವಾದ ಅರ್ಪಿಸುತ್ತೇನೆ. ಭೂಮಿ ಪೂಜಾ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇವೆ. ನಿಮ್ಮ ಎಲ್ಲ ಆಶೀರ್ವಾದ ನನಗೆ ಬೇಕು. " 

ಮುಂಬರುವ ಚಿತ್ರ ಲಕ್ಷ್ಮಿ ಬಾಂಬ್ ನಲ್ಲಿ ಅಕ್ಷಯ್ ಕುಮಾರ್ ಸ್ವತಃ ತೃತೀಯ ಲಿಂಗಿ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಕ್ಷ್ಮಿ ಬಾಂಬ್ 2011 ರ ತಮಿಳು ಹಾರರ್ ಕಾಮಿಡಿ  ಮುನಿ 2: ಕಾಂಚನ ಚಿತ್ರದ ಹಿಂದಿ ರಿಮೇಕ್  ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT