ಕನಿಕಾ ಕಪೂರ್ 
ಬಾಲಿವುಡ್

ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಗೆ ಕೊರೋನಾ ವೈರಸ್: ಅವರು ಎಲ್ಲೆಲ್ಲಿ ಓಡಾಡಿದ್ದರು? 

ಬಾಲಿವುಡ್ ನ ಖ್ಯಾತ ಗಾಯಕಿ ಕನಿಕಾ ಕಪೂರ್ ಅವರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಇದನ್ನು ಅವರೇ ನಿನ್ನೆ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ದೃಢಪಡಿಸಿದ್ದಾರೆ. 

ನವದೆಹಲಿ: ಬಾಲಿವುಡ್ ನ ಖ್ಯಾತ ಗಾಯಕಿ ಕನಿಕಾ ಕಪೂರ್ ಅವರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಇದನ್ನು ಅವರೇ ನಿನ್ನೆ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ದೃಢಪಡಿಸಿದ್ದಾರೆ. 

ಸದ್ಯ ಕನಿಕಾ ಅವರು ಲಕ್ನೊದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಅವರ ಕುಟುಂಬಸ್ಥರು ಸಂಪೂರ್ಣವಾಗಿ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಕನಿಕಾ ಕಪೂರ್ ಅವರಿಗೆ ಕೆಲವರು ಬೇಗ ಚೇತರಿಸಿಕೊಳ್ಳಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾರೈಸುತ್ತಿದ್ದರೆ ಇನ್ನು ಹಲವರು ಲಕ್ನೊದಲ್ಲಿ ವಿವಿಧ ಪಾರ್ಟಿಗಳಲ್ಲಿ ಅವರು ಭಾಗಿಯಾಗಿದ್ದು ಏಕೆ, ವಿಮಾನ ನಿಲ್ದಾಣದಲ್ಲಿ ಸರಿಯಾಗಿ ತಪಾಸಣೆಗೆ ಒಳಪಡಲಿಲ್ಲವೇಕೆ ಎಂದು ಬೈಯುತ್ತಿದ್ದಾರೆ.

ಹಾಗಾದರೆ ಲಂಡನ್ ನಿಂದ ಕನಿಕಾ ಯಾವಾಗ ಬಂದರು, ಅಲ್ಲಿಂದ ಬಂದ ನಂತರ ಎಲ್ಲೆಲ್ಲ ಓಡಾಡಿದರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
ಮಾರ್ಚ್ 9: ಲಂಡನ್ ನಿಂದ ತಡರಾತ್ರಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕನಿಕಾ ಕಪೂರ್.
ಮಾರ್ಚ್ 10: ಮುಂಬೈಯಲ್ಲಿ ಉಳಿದುಕೊಂಡ ಕನಿಕಾ ಕಪೂರ್ 
ಮಾರ್ಚ್ 11: ಲಕ್ನೊಗೆ ಆಗಮನ
ಮಾರ್ಚ್ 13: ಖಾಸಗಿ ಔತಣಕೂಟದಲ್ಲಿ ಭಾಗಿ
ಮಾರ್ಚ್ 14: ಮತ್ತೊಂದು ಖಾಸಗಿ ಔತಣಕೂಟದಲ್ಲಿ ಭಾಗಿ
ಮಾರ್ಚ್ 15: ಲಕ್ನೊದಲ್ಲಿ ಅಹ್ಮದ್ ಅಕ್ಬರ್ ಡಂಪಿ ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗಿ. ಈ ಪಾರ್ಟಿಯಲ್ಲೇ ರಾಜಸ್ತಾನ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೆ, ಅವರ ಪುತ್ರ ದುಶ್ಯಂತ್ ಸಿಂಗ್, ಉತ್ತರ ಪ್ರದೇಶ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಭಾಗಿ
ಮಾರ್ಚ್ 18: ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವು. ಸಣ್ಣ ಜ್ವರ, ಶೀತ, ಉಸಿರಾಟದ ತೊಂದರೆ. ಲಕ್ನೊದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಪಾಸಣೆಗೆ.
ಮಾರ್ಚ್ 20: ಕೊರೋನಾ ವೈರಸ್ ಇರುವುದು ದೃಢ. ಲಕ್ನೊದ ಸಂಜೀವ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ದಾಖಲು.


ಈ ಮೂರು ಔತಣಕೂಟಗಳಲ್ಲಿ ಕನಿಕಾ ಕಪೂರ್ ಸುಮಾರು 300ರಿಂದ 400 ಜನರ ಸಂಪರ್ಕ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel