ಬಾಲಿವುಡ್

ಗೋಧಿಹಿಟ್ಟಿನ ಚೀಲದಲ್ಲಿ ಹಣ ಹಂಚಿದ್ದು ನಾನಲ್ಲ: ನಟ ಅಮೀರ್ ಖಾನ್ ಸ್ಪಷ್ಟನೆ

Raghavendra Adiga

ಬಾಲಿವುಡ್ ನಟ ಅಮೀರ್ ಖಾನ್ ದೆಹಲಿಯ ನಿರ್ಗತಿಕರಿಗೆ ದೇಣಿಗೆಯಾಗಿ ಹಣವನ್ನು ಗೋಧಿಹಿಟ್ಟಿನ ಚೀಲಗಳಲ್ಲಿಟ್ಟು ಹಂಚಿದ್ದಾರೆ ಎನ್ನುವ ವದಂತಿಗಳು ಹಬ್ಬಿದ್ದು ಇದಕ್ಕೀಗ ನಟ ಟ್ವೀಟ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.ಗೋಧಿಹಿಟ್ಟು ಚೀಲಗಳಲ್ಲಿ ನಾನು ಹಣವನ್ನು ಹಂಚಿಲ್ಲ ಎಂದು ವದಂತಿಯನ್ನು ತಳ್ಳಿಹಾಕಿದ್ದಾರೆ. 

ಕಳೆದ ವಾರ, ಹಲವಾರು ಮಾದ್ಯಮಗಳಲ್ಲಿ ಟಿಕ್‌ಟಾಕ್ ವಿಡಿಯೋವೊಂದನ್ನು ಉಲ್ಲೇಖಿಸಿ, ಲಾಲ್ ಸಿಂಗ್ ಚಡ್ಡಾ ಖ್ಯಾತಿಯ ನಟ ಗೋಧಿ ಹಿಟ್ಟಿನ ಚೀಲ ತುಂಬಿದ್ದ  ಟ್ರಕ್ ಅನ್ನು ದೆಹಲಿಗೆ ಕಳುಹಿಸಿದ್ದಾನೆ ಮತ್ತು ಕೊರೋನಾ ಲಾಕ್‌ಡೌನ್‌ನಿಂದ ಹೆಚ್ಚು ತೊಂದರೆಯಲ್ಲಿರುವವರಿಗೆ 1 ಕೆಜಿ ಪ್ಯಾಕೆಟ್‌ ನಲ್ಲಿ 15 ಸಾವಿರ ರೂ. ಹಣ ಹಂಚಿದ್ದಾರೆ ಎಂದು ವದಂತಿ ಸೃಷ್ಟಿಯಾಗಿತ್ತು.

ಸೋಮವಾರ ತಮ್ಮ ಟ್ವೀಟ್‌ ಮಾಡುವ ಮೂಲಕ ನಟ "ಆ ಎಲ್ಲಾ ವರದಿಗಳು "ನಕಲಿ" ಆಗಿರಬಹುದು ಎಂದು ಹೇಳಿದ್ದಾರೆ. ಅಲ್ಲದೆ ಸುದ್ದಿ ನಿಜವಾಗಿದ್ದರೂ ನಾನು "ರಾಬಿನ್ ಹುಡ್" ಅಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ. 

"ಗಾಯ್ಸ್ ನಾನು ಗೋಧಿಹಿಟ್ಟಿನ ಚೀಲಗಳಲ್ಲಿ ಹಣವನ್ನು ಇಟ್ಟು ಹಂಚುವವನಲ್ಲ. . ಇದು ಸಂಪೂರ್ಣವಾಗಿ ನಕಲಿ ಸುದ್ದಿ. ಒಂದೊಮ್ಮೆ ಅದು ಸತ್ಯವಾಗಿದ್ದರೂ ನಾನು  ರಾಬಿನ್ ಹುಡ್ ಅಲ್ಲಸುರಕ್ಷಿತವಾಗಿರಿ. ಲವ್, ಆಲ್" ಅಮೀರ್ ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳು ಅಮೀರ್ ಖಾನ್ ಪ್ರಧಾನಿ ನರೇಂದ್ರ ಮೋದಿಯವ ಕೋವಿಡ್ -19 ಪರಿಹಾರ ನಿಧಿಗೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ  ದೇಣಿಗೆ ನೀಡಿದರು. ಖಾನ್ ಚಲನಚಿತ್ರ ಕಾರ್ಮಿಕರ ಸಂಘ ಮತ್ತು ಎನ್‌ಜಿಒಗಳಿಗೆ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.ಖಾನ್ ಮತ್ತು ಅವರ ಪತ್ನಿ ಎನ್‌ಜಿಒ ಪಾನಿ ಫೌಂಡೇಶನ್‌ನ ಸ್ಥಾಪಕರಾಗಿಇದು ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿನ ಬಡರೈತರಿಗೆ ಬರಗಾಲದಲ್ಲಿ ನೆರವಾಗುವ ಉದ್ದೇಶವನ್ನು ಹೊಂದಿದೆ.  ರಾಜ್ಯದಲ್ಲಿ ಜಲಾನಯನ ನಿರ್ವಹಣೆಗೆ ಸಹಕಾರಿಯಾಗಿದೆ.

ಏತನ್ಮಧ್ಯೆ, ಭಾನುವಾರ ಸಂಜೆ, ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಅವರೊಂದಿಗೆ ಐ ಫಾರ್ ಇಂಡಿಯಾ ಎಂಬ ವರ್ಚುವಲ್ ಕನ್ಸರ್ಟ್ನಲ್ಲಿ ಭಾಗವಹಿಸಿದರು. ಕೋವಿಡ್  ವಿರುದ್ಧದ ಹೋರಾಟದಲ್ಲಿ ಸದೃಢವಾಗಿರಲು  ದಂಪತಿಗಳು ಅಭಿಮಾನಿಗಳನ್ನು ಕೇಳಿಕೊಂಡರು ಮತ್ತು ಗೋಷ್ಠಿಯಲ್ಲಿ ಆ ಚಲ್ ಕೆ ತುಜೆ ಮತ್ತು ಜೀನಾ ಇಸಿ ಕಾ ನಾಮ್ ಹಾ  ಹಾಡು ಹೇಳಿ ಮನರಂಜಿಸಿದ್ದರು.

SCROLL FOR NEXT