ಬಾಲಿವುಡ್

ವೈದ್ಯಕೀಯ ಕಾರಣಕ್ಕೆ ತಾಯಿಯೊಂದಿಗೆ ಉತ್ತರ ಪ್ರದೇಶಕ್ಕೆ ಪ್ರಯಾಣ: ನಟ ನವಾಜುದ್ದೀನ್ ಸಿದ್ದಿಕಿ ಸ್ಪಷ್ಟನೆ

Raghavendra Adiga

ಮುಂಬೈ: ನಟ  ನವಾಜುದ್ದೀನ್ ಸಿದ್ದಿಕಿ ಸೋಮವಾರ ತಮ್ಮ ಕುಟುಂಬದೊಡನೆ ತಮ್ಮ ಸ್ವಂತ ಊರಾದ ಉತ್ತರ ಪ್ರದೇಶದ ಬುಧಾನಾಗೆ ಪ್ರಯಾಣಿಸಿದ್ದು ಲಾಕ್ ಡೌನ್ ನಡುವೆಯೇ ಅಂತರ್ ರಾಜ್ಯ ಪ್ರಯಾಣ ಮಾಡಿದುದಕ್ಕಾಗಿ ವಿವಾದಕ್ಕೆ ಈಡಾಗಿದ್ದಾರೆ. ಆದರೆ ಇದಕ್ಕೀಗ ಸ್ಪಷ್ಟನೆ ನೀಡಿರುವ ನಟ ಸಿದ್ದಿಕಿ ತನ್ನ ತಾಯಿಗೆ ಅನಾರೋಗ್ಯವಿದ್ದ ಕಾರಣ ಪ್ರಯಾಣ ಮಾಡಿದ್ದಾಗಿ ಹೇಳಿದ್ದಾರೆ. ಅಲ್ಲದೆ  ರಾಜ್ಯ ಸರ್ಕಾರ ನಿಗದಿಪಡಿಸಿದ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದ ಕಾರಣ ಅಪಾಯ ಅಥವಾ ಭಯದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಅಧಿಕಾರಿಗಳಿಂದ ಪ್ರಯಾಣಕ್ಕೆ ಅಗತ್ಯವಾದ ಅನುಮತಿ ಪಡೆದ ನಂತರ ನಟ  ಅವರ ಕುಟುಂಬ ಸದಸ್ಯರೊಂದಿಗೆ ಮೇ 12 ರಂದು ತಮ್ಮ ಊರಿಗೆ ಪ್ರಯಾಣಿಸಿದ್ದರು.

"ನನ್ನ ತಂಗಿ ಇತ್ತೀಚಿಗೆ ಸಾವನ್ನಪ್ಪಿದ್ದು ಇದರಿಂದಾಗಿ 71 ವರ್ಷ ವಯಸ್ಸಿನ ನನ್ನ ತಾಯಿಗೆ  ಆಘಾತವಾಗಿದೆ. ನಾವು ರಾಜ್ಯ ಸರ್ಕಾರ ನೀಡಿದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿದ್ದೇವೆ. ನಮ್ಮ ಊರಾದ ಬುಧಾನಾದಲ್ಲಿ ನಾವು ಹೋಂ ಕ್ವಾರಂಟೈನ್ ಸಹ ಆಗಿದ್ದೇವೆ. ನೀವು ಸಹ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ" ನಟ ಸಿದ್ದಿಕಿ ಟ್ವೀಟ್ ಮಾಡಿದ್ದ್ರೆ.

ನಟ ಹಾಗೂ ಅವನ ಕುಟುಂಬ ಕೋವಿಡ್ ಪರೀಕ್ಷೆಗೆ ಒಳಗಾಇದ್ದು ಅವರ ವರದಿಗಳೆಲ್ಲಾ ನೆಗೆಟಿವ್ ಆಗಿದೆ. ಈ ನಡುವೆ ಸಿದ್ದಿಕಿ ಕುಟುಂಬ ಉತ್ತರ ಪ್ರದೇಶಕ್ಕೆ "ವೈದ್ಯಕೀಯ ಕಾರಣಗಳಿಗಾಗಿ" ಪ್ರಯಾಣಿಸಲು ಬೈ ಪೊಲೀಸರು ನೀಡಿದ ಪತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕುಟುಂಬಕ್ಕೆ ಮೇ 10 ರಂದು ಯುಪಿಗೆ ಪ್ರಯಾಣಿಸಲು ಅನುಮತಿ ನೀಡಿದ್ದು ಆಗಸ್ಟ್ 18 ರಂದು ಹಿಂದಿರುಗುವ ದಿನಾಂಕವನ್ನು ನಿಗದಿ ಮಾಡಲಾಗಿದೆ. ನಟನನ್ನು ಅವರ ಕುಟುಂಬ ಸದಸ್ಯರೊಂದಿಗೆ ಪ್ರಸ್ತುತ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. 

SCROLL FOR NEXT