ಸೋನು ಸೂದ್ 
ಬಾಲಿವುಡ್

ತನ್ನ ಮಗುವಿಗೆ 'ಸೋನು ಸೂದ್' ಎಂದು ಹೆಸರಿಟ್ಟ ವಲಸೆ ಕಾರ್ಮಿಕ ಮಹಿಳೆ!

ಲಾಕ್ ಡೌನ್ ಮಧ್ಯೆ ಸಿಕ್ಕಿಬಿದ್ದ ವಲಸಿಗರಿಗೆ ಸುರಕ್ಷಿತವಾಗಿ ತಮ್ಮ ಸ್ವಂತ ಊರುಗಳಿಗೆ ತಲುಪಲು ನಿರಂತರ ಸಹಾಯ ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್ ಅವರ ಹೆಸರನ್ನು ವಲಸೆ ಕಾರ್ಮಿಕ ಮಹಿಳೆಯೊಬ್ಬಳು ತನ್ನ ಮಗುವಿಗೆ ಇಡುವ ಮೂಲಕ ಕೃತಜ್ಞತೆ ಮೆರೆದಿದ್ದಾಳೆ.

ಲಾಕ್ ಡೌನ್ ಮಧ್ಯೆ ಸಿಕ್ಕಿಬಿದ್ದ ವಲಸಿಗರಿಗೆ ಸುರಕ್ಷಿತವಾಗಿ ತಮ್ಮ ಸ್ವಂತ ಊರುಗಳಿಗೆ ತಲುಪಲು ನಿರಂತರ ಸಹಾಯ ಮಾಡುತ್ತಿರುವ ಬಾಲಿವುಡ್ ನಟ ಸೋನು ಸೂದ್ ಅವರ ಹೆಸರನ್ನು ವಲಸೆ ಕಾರ್ಮಿಕ ಮಹಿಳೆಯೊಬ್ಬಳು ತನ್ನ ಮಗುವಿಗೆ ಇಡುವ ಮೂಲಕ ಕೃತಜ್ಞತೆ ಮೆರೆದಿದ್ದಾಳೆ. ಮಹಿಳೆ ತನ್ನ ಮಗುವಿಗೆ ಸೋನು ಸೂದ್ ಶ್ರೀವಾಸ್ತವ್ ಎಂದು ಹೆಸರಿಟ್ಟದ್ದನ್ನು ತಿಳಿದ ನಟ ಸೋನು ಸೂದ್ ಭಾವುಕರಾಗಿದ್ದಾರೆ.

ಎರಡು ವಾರಗಳ ಹಿಂದೆ ಅವರು ಸಹಾಯ ಮಾಡಿದ್ದ  ಗರ್ಭಿಣಿ ವಲಸೆ ಕಾರ್ಮಿಕ ಮಹಿಳೆಯೊಬ್ಬಳು ತನ್ನ ಹಳ್ಳಿಯನ್ನು ಸುರಕ್ಷಿತವಾಗಿ ತಲುಪಿದ್ದಾಳೆ ಮತ್ತು ತನ್ನ ಹೆರಿಗೆಯ ಬಳಿಕ ನವಜಾತ ಮಗನಿಗೆ ಸೋನು ಸೂದ್ ಹೆಸರನ್ನಿಟ್ಟಿದ್ದಾಳೆ ಎಂದು ನಟ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಮಹಿಳೆಯ ಕುಟುಂಬ ನಟನಿಗೆ ಕರೆಮಾಡಿ ಮಗುವಿಗೆ ಸೋನು ಸೂದ್ ಎಂದು ಹೆಸರಿಟ್ಟಿದ್ದಾಗಿ ಹೇಳಿದೆ. 

"ನಾನು ಅವರು ಶ್ರೀವಾಸ್ತವ್ ವಾಗಿರುವ ಕಾರಣ ಸೂದ್ ಎನ್ನುವ ಹೆಸರನ್ನು ಹೇಗೆ ಇಡುತ್ತೀರೆಂದು ಕೇಳಿದೆ. ಅಲ್ಲದೆ ಸೋನು ಶ್ರೀವಾಸ್ತವ್ ಎಂದಿಡಲು ಹೇಳಿದೆ. ಆದರೆ ಆಕೆ ‘ನಹಿ ಹಮ್ನಿ ಬಚ್ಚೆ ಕಾ ನಾಮ್ ಸೋನು ಸೂದ್ ಶ್ರೀವಾಸ್ತವ್ ರಾಖಾ ಹೈ.’ಎಂದಿದ್ದರು. ಇದು ನನ್ನ ಹೃದಯವನ್ನು ತಟ್ಟಿದೆ. 

ಸೋನು ಸೂದ್ ವಲಸಿಗರಿಗಗಾಇ ಸಾಕಷ್ಟು ಸಂಖ್ಯೆಯ ಬಸ್ಸುಗಳನ್ನು ವ್ಯವಸ್ಥೆಗೊಳಿಸಿದ್ದಕ್ಕಾಗಿ ರಾಷ್ಟ್ರದಾದ್ಯಂತ ಜನರ ಮನ ಗೆದ್ದಿದ್ದಾರೆ. ಮೇ 29, 2020 ರಂದು ಕೇರಳದಲ್ಲಿ ಸಿಲುಕಿದ್ದ 170 ಯುವತಿಯರನ್ನು  ತಮ್ಮ ಮನೆಗಳಿಗೆ  ವಿಮಾನದಲ್ಲಿ ಕಳಿಸುವ ಮೂಲಕ ಸೋನು ಸೂದ್  ಮತ್ತೆ ಮಾನವೀಯತೆ ಮೆರೆದಿದ್ದರು. ಇಲ್ಲಿಯವರೆಗೆ ನಟ  2000 ಕ್ಕೂ ಹೆಚ್ಚು ಕಾರ್ಮಿಕರನ್ನು ವಿವಿಧ ಭಾರತೀಯ ರಾಜ್ಯಗಳಲ್ಲಿರುವ ತಮ್ಮ ಮನೆಗಳಿಗೆ ಕಳುಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT