ಟಬು 
ಬಾಲಿವುಡ್

ನಾನು ಏಕಾಂಗಿಯಾಗಲು ಈ ಖ್ಯಾತ ನಟನೇ ಕಾರಣ: ನಟಿ ಟಬು

ತಮ್ಮ ಅಭಿನಯದ ಮೂಲಕ ಒಂದು ಕಾಲದಲ್ಲಿ ಬಾಲಿವುಡ್, ಟಾಲಿವುಡ್ ಪ್ರೇಕ್ಷಕರ ಹೃದಯ ಗೆದ್ದಿದ್ದರು ಅಂದದ ನಟಿ ಟಬು. ಆದರೆ ಟಬು ಈವರೆಗೂ ಮದುವೆ ಮಾಡಿಕೊಳ್ಳದಿರುವ ಬಗ್ಗೆ ಹಲವು ವದಂತಿಗಳು ಹರಡುತ್ತಲೇ ಇವೆ.

ಮುಂಬೈ: ತಮ್ಮ ಅಭಿನಯದ ಮೂಲಕ ಒಂದು ಕಾಲದಲ್ಲಿ ಬಾಲಿವುಡ್, ಟಾಲಿವುಡ್ ಪ್ರೇಕ್ಷಕರ ಹೃದಯ ಗೆದ್ದಿದ್ದರು ಅಂದದ ನಟಿ ಟಬು. ಆದರೆ ಟಬು ಈವರೆಗೂ ಮದುವೆ ಮಾಡಿಕೊಳ್ಳದಿರುವ ಬಗ್ಗೆ ಹಲವು ವದಂತಿಗಳು ಹರಡುತ್ತಲೇ ಇವೆ. 

ಆದರೆ, ತಾವು ಒಂಟಿಯಾಗಿಯೇ ಉಳಿಯಲು ಬಾಲಿವುಡ್ ನಾಯಕ ಅಜಯ್ ದೇವ್ ಗನ್ ಕಾರಣ ಎಂದು ಟಬು ಹೇಳಿಕೊಂಡಿದ್ದಾರೆ. ಬುಧವಾರ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಟಬು ಸಂದರ್ಶನವೊಂದರಲ್ಲಿ ವಿವಾಹ ಮಾಡಿಕೊಳ್ಳದೆ ತಾವು  ಏಕಾಂಗಿಯಾಗಿರುವ ಬಗ್ಗೆ ಕೆಲ ಅಂಶಗಳನ್ನು ಹಂಚಿಕೊಂಡಿದ್ದಾರೆ. 

ಅಜಯ್ ದೇವಗನ್ ಬಗ್ಗೆ ಪ್ರಸ್ತಾಪಿಸಿರುವ ಆಕೆ ಅಜಯ್, ತಮಗೆ 13, 14 ವರ್ಷ ವಯಸ್ಸಿನಿಂದಲೂ ಗೊತ್ತು, ಆತ ತನ್ನ ಸಹೋದರ ಸಮೀರ್ ಬಾಲ್ಯದ ಸ್ನೇಹಿತ ಎಂದು ಟಬು ಹೇಳಿಕೊಂಡಿದ್ದಾರೆ. ಆ ಕಾಲದಲ್ಲಿ ಮುಂಬೈ ಜುಹೂ ಪ್ರದೇಶದಲ್ಲಿ ನಾವು ಒಟ್ಟಿಗೆ ಬೆಳೆದವರು. ಅಜಯ್ ಸಮೀರ್ ಬೀದಿ ಬೀದಿಗಲ್ಲಿ ಗ್ಯಾಂಗ್ ಕಟ್ಟಿಕೊಂಡು ಸುತ್ತಾಡುತ್ತಿದ್ದರು. ತನ್ನ ಸ್ನೇಹಿತೆಯರೊಂದಿಗೆ ಕೀಟಲೆ ಮಾಡಲು ನಮ್ಮನ್ನು ಹಿಂಬಾಲಿಸುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.

ಆ ಸಮಯದಲ್ಲಿ ಅಜಯ್, ಸಮೀರ್ ತನ್ನ ಮೇಲೆ ದೃಷ್ಟಿ ಹರಿಸಿ, ಯಾರಾದರೂ ಹುಡುಗರು ತನ್ನೊಂದಿಗೆ ಮಾತನಾಡಲು ಪ್ರಯತ್ನಿಸಿದರೆ, ಅವರಿಗೆ ಹೊಡೆಯುತ್ತಿದ್ದರು ಎಂದು ಟಬು ಹೇಳಿದ್ದಾರೆ. ಈಗ ಅಜಯ್, ಸಮೀರ್ ತಮ್ಮ ತಮ್ಮ ಕುಟುಂಬಗಳೊಂದಿಗೆ ಬಿಡುವಿಲ್ಲದೆ  ತೊಡಗಿಸಿಕೊಂಡಿದ್ದಾರೆ. ಆದರೆ ನಾನು ಹೀಗೆ ಒಬ್ಬಂಟಿಯಾಗಿದ್ದೇನೆ. ಅದಕ್ಕೆ ಕಾರಣ ಅಜಯ್ ಆಗ ಆತ ಮಾಡಿದ್ದು ಈಗ ಅವನಿಗೆ ಅರ್ಥವಾಗಿರಬಹುದು ಎಂದು ಟಬು ನಗುವಿನೊಂದಿಗೆ ನುಡಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT