ಪೂಜಾ ಬೇಡಿ, ಮಿಲಿಂದ್ ಸೋಮನ್ 
ಬಾಲಿವುಡ್

ಮಿಲಿಂದ್ ಸೋಮನ್ ಬೆತ್ತಲೆ ಓಟದ ಚಿತ್ರ: ತಪ್ಪೇನಿದೆ? ಅದು ಆತನ ಸೌಂದರ್ಯ ಎಂದ ಪೂಜಾ ಬೇಡಿ!

ರೂಪದರ್ಶಿ ಮಿಲಿಂದ್ ಸೋಮನ್ ತಮ್ಮ ಹುಟ್ಟು ಹಬ್ಬದ ದಿನದಂದು ಗೋವಾ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡುತ್ತಿರುವ ವಿವಾದಾಸ್ಪದ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದನ್ನು ಬಾಲಿವುಡ್ ನಟಿ ಪೂಜಾ ಬೇಡಿ ಸಮರ್ಥಿಸಿಕೊಂಡಿದ್ದಾರೆ

ಮುಂಬೈ: ರೂಪದರ್ಶಿ ಮಿಲಿಂದ್ ಸೋಮನ್ ತಮ್ಮ ಹುಟ್ಟು ಹಬ್ಬದ ದಿನದಂದು ಗೋವಾ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡುತ್ತಿರುವ ವಿವಾದಾಸ್ಪದ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವುದನ್ನು ಬಾಲಿವುಡ್ ನಟಿ ಪೂಜಾ ಬೇಡಿ ಸಮರ್ಥಿಸಿಕೊಂಡಿದ್ದಾರೆ. ನಿಜಕ್ಕೂ ಆ ಚಿತ್ರದಲ್ಲಿ ಅಂತಹ ಅಶ್ಲೀಲವೇನು ಇಲ್ಲ. ಅದು ಆತನ ಸೌಂದರ್ಯ ಎಂದೂ, ಅವರು ಬಣ್ಣಿಸಿದ್ದಾರೆ. 

ಮಿಲಿಂದ್ ಚಿತ್ರವನ್ನು ಟ್ವಿಟ್ಟರ್ ನಲ್ಲಿ ನಾಗಾ ಸಾಧುಗಳೊಂದಿಗೆ ಹೋಲಿಸಿ, ನೀವು ಬೂದಿ ಬಳಿದು ಕೊಂಡು ಬೆತ್ತಲೆಯಾಗಿ ತಿರುಗಿದರೆ ಯಾವುದೇ ತಪ್ಪು ಇಲ್ಲದಿರುವಾಗ, ಮಿಲಿಂದ್ ಫೋಟೋದಲ್ಲೂ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. "ಅಶ್ಲೀಲತೆ ನೋಡುಗರ ದೃಷ್ಟಿಯಲ್ಲಿದೆ. ಸುಂದರವಾಗಿ ಕಾಣಿಸಲು, ಪ್ರಸಿದ್ಧನಾಗಲು, ಮಾನದಂಡ ನಿಗದಿಪಡಿಸಿಕೊಳ್ಳುವುದು ಅಪರಾಧವೇ? ನಗ್ನತೆ ಅಪರಾಧವಾಗಿದ್ದರೆ ಎಲ್ಲಾ ನಾಗಾ ಸಾಧುಗಳನ್ನು ಬಂಧಿಸಬೇಕು, ಬೂದಿ ಬಳಿದುಕೊಂಡು ಬಹಿರಂಗವಾಗಿ ತಿರುಗಾಡುವುದು ಸ್ವೀಕಾರಾರ್ಹವಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಏತನ್ಮಧ್ಯೆ, ಮಿಲಿಂದ್ ತಮ್ಮ 55 ನೇ ಹುಟ್ಟುಹಬ್ಬದಂದು ಗೋವಾ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡುತ್ತಿರುವುದನ್ನು ಪತ್ನಿ ಅಂಕಿತಾ ಕೊನ್ವರ್ ಸೆರೆ ಹಿಡಿದಿದ್ದ ಫೋಟೋ ಅನ್ನು "ಹ್ಯಾಪಿ ಬರ್ತ್‌ಡೇ ಟು ಮಿ 55 " ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಅಪ್‌ಲೋಡ್ ಮಾಡಿದ್ದಕ್ಕಾಗಿ ಮಿಲಿಂದ್ ವಿರುದ್ಧ ಅಶ್ಲೀಲ ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ) ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಕುಮಾರ್ ಸಿಂಗ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. 

ಇತ್ತೀಚೆಗೆ, ಇದೇ ರೀತಿ ರೂಪದರ್ಶಿ, ನಟಿ ಪೂನಂ ಪಾಂಡೆ ಆಕ್ಷೇಪಾರ್ಹವಾದ ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ. ಆಕೆ, ಆಕೆಯ ಪತಿ ಸ್ಯಾಮ್ ವಿರುದ್ದ ಪ್ರಕರಣ ದಾಖಲಿಸಿ ಗೋವಾ ಪೊಲೀಸರು ಬಂಧಿಸಿದ್ದರು. ನಂತರ 20,000 ರೂ.ಗಳ ಬಾಂಡ್ ಮೇಲೆ ನ್ಯಾಯಾಲಯ ಅವರ ಬಿಡುಗಡೆಗೆ ಆದೇಶಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Bombay ವಿದ್ಯಾರ್ಥಿ ನಕಲು ಮಾಡಿದ್ದನ್ನು ತಡೆದಿದ್ದೇ ತಪ್ಪಾ? ಪ್ರೊಫೆಸರ್ ವಿರುದ್ಧ ಪ್ರತಿಭಟನೆ; ಯಾರು ಈ ಪ್ರೊ. Suryanarayana Doolla?

Bihar horror: ಕೋಚಿಂಗ್‌ ಸೆಂಟರ್`ನಿಂದ ಮರಳುತ್ತಿದ್ದ ಅಪ್ರಾಪ್ತ ಜೋಡಿ ಅಡ್ಡಗಟ್ಟಿದ ಗುಂಪು, ಲೈಂಗಿಕ ಕಿರುಕುಳ

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

TMC ಹೆಸರು-ಚಿಹ್ನೆ ಫ್ರೀಜ್; ಚುನಾವಣಾ ಆಯೋಗದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ, ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ..!

ಭೂಮಿಯನ್ನು ಸುತ್ತುತ್ತಿರುವ ಆಯುಧಗಳು: ಭಾರತದ ಮುಂದಿರುವ ಸವಾಲುಗಳೇನು? (ಜಾಗತಿಕ ಜಗಲಿ)