ಬಾಲಿವುಡ್

ಜೋ ಬೈಡನ್ ಗೆ 'ಗಜನಿ' ಎಂದು ಕರೆದ ಕಂಗನಾ! ಕಮಲಾ ಗೆಲುವಿಗೆ ಮೆಚ್ಚುಗೆ

Raghavendra Adiga

ಬಾಲಿವುಡ್ ನಟಿ ಕಂಗನಾ ರನೌತ್ ಯುಎಸ್ ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಿದ್ದು ಜೋ ಬೈಡನ್ ಒಬ್ಬ "ಗಜನಿ" ಯಂತಿದ್ದಾರೆ ಎಂದರು.  ಬೈಡನ್ ಅಧ್ಯಕ್ಷರಾಗಿ ಮತ್ತು ಕಮಲಾ ಹ್ಯಾರಿಸ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆ ಟ್ವೀಟ್ ಮಾಡಿರುವ ನಟಿ ಕಮಲಾ ಅವರ ಆಯ್ಕೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ನಟಿ ಕಂಗನಾ ಅಮೆರಿಕದ ಭವಿಷ್ಯದ ಬಗ್ಗೆ ತಮ್ಮದೇ ಆದ ಮುನ್ಸೂಚನೆಗಳನ್ನು ನೀಡಿದ್ದಾರೆ. ಕಮಲಾ ಅವರವಿಜಯದ ಭಾಷಣದ ವಿಡಿಯೋ ಹಂಚಿಕೊಂಡ ನಟಿ "ಗಜನಿ ಬೈಡನ್ಅವರ ಡೇಟಾ ಪ್ರತಿ 5 ನಿಮಿಷಕ್ಕೆ ಕ್ರ್ಯಾಶ್ ಆಗುತ್ತದೆ, ಅವರು ಚುಚ್ಚಿದ ಮೆಡಿಸಿನ್​ಗಳ ಬಗ್ಗೆ ನಮಗೆ ಖಾತ್ರಿಯಿಲ್ಲ. ಅವರು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಮುಂದುವರಿಯುವುದಿಲ್ಲ ಆದರೆ ಕಮಲಾ ಹ್ಯಾರಿಸ್ ವಿಜಯ ಮಹತ್ವದ್ದಾಗಿದೆ. ಒಬ್ಬ ಮಹಿಳೆ ಎತ್ತರಕ್ಕೇರಿದಾಗ ಅವಳು ಪ್ರತಿಯೊಬ್ಬ ಮಹಿಳೆಗೆ ದಾರಿ ತೋರುತ್ತಾಳೆ. ಈ ಐತಿಹಾಸಿಕ ದಿನಕ್ಕಾಗಿ ಚಿಯರ್ಸ್" ಎಂದಿದ್ದಾರೆ.

ಕಂಗನಾ ಅವರ ಟ್ವೀಟ್‌ಗೆ ನೆಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೆಲವರು ಕಂಗನಾರ ಬೈಡನ್ ಕುರಿತಾದ ಪ್ರತಿಕ್ರಿಯೆಗೆ ಸಮ್ಮತಿಸಿದ್ದರೆ ಇನ್ನೂ ಕೆಲವರು "ಇದು ಸರಿಯಿಲ್ಲ" ಎಂದಿದ್ದಾರೆ.

ಪೆನ್ಸಿಲ್ವೇನಿಯಾ ಮತ್ತು ನೆವಾಡಾದಿಂದ ಚುನಾವಣಾ ಮತಗಳನ್ನು ಗೆದ್ದ ನಂತರ ಜೋ ಅವರು ಶನಿವಾರ ಅಮೆರಿಕದ 46 ನೇ ಅಧ್ಯಕ್ಷರಾದರು. ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲುವು ಸಾಧಿಸಿದ್ದರು. ಆದರೆ ಮಾಜಿ ಅಧ್ಯಕ್ಷ ಟ್ರಂಪ್ ಇದನ್ನು ‘ಮತದಾರರ ವಂಚನೆ’ ಎಂದು ಬಣ್ಣಿಸಿದ್ದಾರೆ.  ಕಮಲಾ ಕೂಡ ಡೊನಾಲ್ ಟ್ರಂಪ್ ವಿರುದ್ಧ ಜಯ ಸಾಧಿಸಿದ್ದರು. ಆದಾಗ್ಯೂ, ಪೆನ್ಸಿಲ್ವೇನಿಯಾದಂತಹ ಪ್ರಮುಖ ರಾಜ್ಯದಲ್ಲಿ ಚುನಾವಣಾ ಫಲಿತಾಂಶಗಳ ವಿರುದ್ಧ ಅನೇಕ ಮೊಕದ್ದಮೆಗಳನ್ನು ಹೂಡುವುದಾಗಿ ಟ್ರಂಪ್ ಘೋಷಿಸಿದ್ದಾರೆ,

SCROLL FOR NEXT