ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ದೇಶದ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿಗಳ ಟಾಪ್ 10 ಪಟ್ಟಿಯಲ್ಲಿ ಟಬು, ತಾಪ್ಸಿ, ಅನುಷ್ಕಾಗೆ ಸ್ಥಾನ

ಆನ್ ಲೈನ್ ಹುಡುಕಾಟದಲ್ಲಿ ದೇಶದ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿಗಳ ಟಾಪ್ 10 ಪಟ್ಟಿಯಲ್ಲಿ ಬಾಲಿವುಡ್ ತಾರೆಗಳಾದ ಟಬು, ತಾಪ್ಸೀ ಪನ್ನು, ಅನುಷ್ಕಾ ಶರ್ಮಾ ಮತ್ತು ಸೋನಾಕ್ಷಿ ಸಿನ್ಹಾ ಸ್ಥಾನ ಪಡೆದಿದ್ದಾರೆ. ಆದರೆ, ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.

ಟಬು, ಟಾಪ್ಸಿಪನ್ನು, ಅನುಷ್ಕಾ
Nagaraja AB
Updated On : 6 Oct 2020, 7:46 pm

ನವದೆಹಲಿ: ಆನ್ ಲೈನ್ ಹುಡುಕಾಟದಲ್ಲಿ ದೇಶದ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿಗಳ ಟಾಪ್ 10 ಪಟ್ಟಿಯಲ್ಲಿ ಬಾಲಿವುಡ್ ತಾರೆಗಳಾದ ಟಬು, ತಾಪ್ಸೀ ಪನ್ನು, ಅನುಷ್ಕಾ ಶರ್ಮಾ ಮತ್ತು ಸೋನಾಕ್ಷಿ ಸಿನ್ಹಾ ಸ್ಥಾನ ಪಡೆದಿದ್ದಾರೆ. ಆದರೆ,ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಟಬು ನಂಬರ್ 2 ಸ್ಥಾನದಲ್ಲಿದ್ದು, ತಾಪ್ಸಿ ಪನ್ನು 3, ನಟ ನಿರ್ಮಾಪಕ ಶರ್ಮಾ 4 ಹಾಗೂ ಸಿನ್ಹಾ 5ನೇ ಸ್ಥಾನದಲ್ಲಿದ್ದಾರೆ. ಗಾಯಕ ಅರ್ಮಾನ್ ಮಲ್ಲಿಕ್ 6, ನಟಿ ಸಾರಾ  ಅಲಿಖಾನ್ 7 ಧಾರವಾಹಿ ಸ್ಟಾರ್ ದಿವ್ಯಾಂಕ ತ್ರಿಪಾಠಿ  8ನೇ ಸ್ಥಾನದಲ್ಲಿದ್ದಾರೆ. ಸೂಪರ್ ಸ್ಟಾರ್ ಶಾರೂಖ್ ಖಾನ್ 9, ಹಿನ್ನೆಲೆ ಗಾಯಕ ಅರ್ಜಿತ್ ಸಿಂಗ್ 10ನೇ ಸ್ಥಾನದಲ್ಲಿದ್ದಾರೆ.

ದುರುದ್ದೇಶ ಪೂರಿತ ವೆಬ್ ಸೈಟ್ ಗಳು ಮತ್ತು ವೈರಸ್ ನಂಟಿನಿಂದ ಈ ತಾರೆಯರ ಹೆಸರುಗಳು ಅಗ್ರಸ್ಥಾನದಲ್ಲಿರುವುದಾಗಿ ಪಟ್ಟಿಯನ್ನು ಬಿಡುಗಡೆ ಮಾಡಿರುವ ಸೈಬರ್ ಸೆಕ್ಯುರಿಟಿ ಕಂಪನಿಯೊಂದು ಮಂಗಳವಾರ ತಿಳಿಸಿದೆ.

Advertisement

Advertisement

ಗ್ರಾಹಕರು ಎಂದೆಂದಿಗಿಂತಲೂ ಈಗ ಉಚಿತ ಮನರಂಜನೆಗಾಗಿ ವೆಬ್ ಜಾಲಡುತ್ತಿದ್ದು, ಇದನ್ನೇ ಸೈಬರ್ ಅಪರಾಧಿಗಳು  ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು Mcafee ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವೆಂಕಟ್ ಕೃಷ್ಣಾಪುರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement