ಧ್ವಂಸಗೊಂಡ ತಮ್ಮ ಕಚೇರಿ ಪರಿಶೀಲಿಸುತ್ತಿರುವ ನಟಿ ಕಂಗನಾ ರಾನಾವತ್ 
ಬಾಲಿವುಡ್

ಮಹಾರಾಷ್ಟ್ರ ಸರ್ಕಾರದೊಂದಿಗೆ ಕಿತ್ತಾಟ:ಕಂಗನಾ ರಾನಾವತ್ ಗೆ ಡ್ರಗ್ ಪರೀಕ್ಷೆ ನಡೆಸಲು ಆದೇಶ

ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ತಿಕ್ಕಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ಮುಂಬೈಯ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ಕಚೇರಿಯನ್ನು ಧ್ವಂಸ ಮಾಡಲು ಹೊರಟ ಸರ್ಕಾರಕ್ಕೆ ಹೈಕೋರ್ಟ್ ತಡೆ ತಂದ ನಂತರ ಅದು ಅರ್ಧಕ್ಕೆ ನಿಂತಿದೆ.

ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ತಿಕ್ಕಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ಮುಂಬೈಯ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ಕಚೇರಿಯನ್ನು ಧ್ವಂಸ ಮಾಡಲು ಹೊರಟ ಸರ್ಕಾರಕ್ಕೆ ಹೈಕೋರ್ಟ್ ತಡೆ ತಂದ ನಂತರ ಅದು ಅರ್ಧಕ್ಕೆ ನಿಂತಿದೆ.

ಇದೀಗ ನಟಿ ಕಂಗನಾರನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಲು ಸರ್ಕಾರ ನಿರ್ಧರಿಸಿದೆ. ಮುಂಬೈ ಪೊಲೀಸರು ಕಂಗನಾ ಮೇಲೆ ಡ್ರಗ್ ಪರೀಕ್ಷೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ನಿನ್ನೆ ಆದೇಶಿಸಿದೆ.

ಇದಕ್ಕೆ ಕಾರಣ ನಟ ಶೇಖರ್ ಸುಮನ್ ಪುತ್ರ ಅಧ್ಯಾಯನ್ ಸುಮನ್ ಈ ಹಿಂದೆ 2016ರಲ್ಲಿ ಸಂದರ್ಶನವೊಂದರಲ್ಲಿ ನಟಿ ಕಂಗನಾ ನಿಷೇಧಿತ ನಾರ್ಕೊಟಿಕ್ ಡ್ರಗ್ ಸೇವಿಸುತ್ತಿದ್ದರು, ನನಗೂ ಸೇವಿಸುವಂತೆ ಒತ್ತಾಯಿಸುತ್ತಿದ್ದರು, 2008ರಲ್ಲಿ ಪಾರ್ಟಿಯೊಂದರಲ್ಲಿ ಡ್ರಗ್ ಸೇ ವಿಸುವಂತೆ ನನಗೆ ಒತ್ತಾಯಿಸಿದ್ದರು. ಆದರೆ ನಾನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ಆರಂಭದ ದಿನಗಳಲ್ಲಿ ಕಂಗನಾ ರಾನಾವತ್ ಅಧ್ಯಾಯನ್ ಸುಮನ್ ಜೊತೆ ಸಂಬಂಧ ಹೊಂದಿದ್ದರು ಎಂಬ ಸುದ್ದಿ ಉಂಟಾಗಿತ್ತು.

ಇನ್ನು ನಟಿ ಕಂಗನಾಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದುಗೊಳಿಸಲು ಬಿಜೆಪಿ ಸಂಸದ ನೋಟಿಸ್; ಕಾರಣ ಏನು ಗೊತ್ತಾ?

ಕೂಡಲೇ ಭಾರತಕ್ಕೆ ವಾಪಸ್ಸಾಗಿ: ಇಲ್ಲವಾದ್ರೆ! ವಿಜಯ್ ಮಲ್ಯಗೆ ಕೊನೆಯ ಅವಕಾಶ ನೀಡಿದ ನ್ಯಾಯಾಲಯ

ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಬ್ರೇಕ್!

ದೂರದರ್ಶನದ ಖ್ಯಾತ 'ನ್ಯೂಸ್ ಆಂಕರ್' ಸರಳ ಮಹೇಶ್ವರಿ ನಿಧನ!

ರಾಹುಲ್ ವಿರುದ್ಧ ಸರ್ಕಾರ ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇಲ್ಲ, ಆದರೆ...

SCROLL FOR NEXT