ದಿಯಾ ಮಿರ್ಜಾ 
ಬಾಲಿವುಡ್

ನಾನೆಂದೂ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ಸಂಗ್ರಹಿಸಿಲ್ಲ, ಸೇವಿಸಿಲ್ಲ: ದಿಯಾ ಮಿರ್ಜಾ

ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣದ ನಂಟಿಗೆ ಸಂಬಂಧಿಸಿ, ನಟಿ ದಿಯಾ ಮಿರ್ಜಾ ಅವರಿಗೆ ಮಾದಕವಸ್ತು ನಿಯಂತ್ರಣ ಬ್ಯೂರೋ ನೋಟಿಸ್ ನೀಡಬಹುದೆಂಬ ಚರ್ಚೆ ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮಗೆ ಡ್ರಗ್ಸ್ ಸೇವನೆಯ ಚಟವಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣದ ನಂಟಿಗೆ ಸಂಬಂಧಿಸಿ, ನಟಿ ದಿಯಾ ಮಿರ್ಜಾ ಅವರಿಗೆ ಮಾದಕವಸ್ತು ನಿಯಂತ್ರಣ ಬ್ಯೂರೋ ನೋಟಿಸ್ ನೀಡಬಹುದೆಂಬ ಚರ್ಚೆ ಕೇಳಿಬಂದಿರುವ ಹಿನ್ನೆಲೆಯಲ್ಲಿ ತಮಗೆ ಡ್ರಗ್ಸ್ ಸೇವನೆಯ ಚಟವಿಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.

“ಡ್ರಗ್ಸ್ ಸೇವನೆ ಕುರಿತು ನನ್ನ ವಿರುದ್ಧ ಕೇಳಿಬರುತ್ತಿರುವ ಕ್ಷುಲ್ಲಕ ಹಾಗೂ ತಳಬುಡವಿಲ್ಲದ ವರದಿಗಳು ಜೀವನಕ್ಕೆ ಕಂಟಕವಾಗಲಿದೆ” ಎಂದು ದಿಯಾ ಬೇಸರ ವ್ಯಕ್ತಪಡಿಸಿದ್ದು, ಒಂದು ವೇಳೆ ಮಾದಕವಸ್ತು ನಿಯಂತ್ರಣ ಬ್ಯೂರೋ ನೋಟಿಸ್ ನೀಡಿದಲ್ಲಿ ಅದನ್ನು ಎದುರಿಸುವ ಸಂಬಂಧ ಕಾನೂನು ಸಲಹೆ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

“ನಾನು ಈ ಸುದ್ದಿಯನ್ನು ಸುಳ್ಳು, ಆಧಾರರಹಿತ ಮತ್ತು ನನ್ನ ಮೇಲೆ ಸುಳ್ಳು ಆರೋಪ ಹೊರಿಸ;ಉ ಮಾಡಲಾಗಿದೆ ಎಂದು ಬಲವಾಗಿ ಅಲ್ಲಗಳೆಯಲು ಬಯಸುತ್ತೇನೆ. ಅಂತಹ ಕ್ಷುಲ್ಲಕ ವರದಿಗಾರಿಕೆಯ ಮೂಲಕ  ನನ್ನ ಖ್ಯಾತಿಗೆ ಧಕ್ಕೆ ತರುವವರ ಮೇಲೆ ಕಠೀನ ಪರಿಣಾಮ ಬೀರುತ್ತದೆ. ನಾನು ಈ ವೃತ್ತಿಬದುಕಿನಲ್ಲಿ ವರ್ಷಗಳ ಕಠಿಣ ಪರಿಶ್ರಮದಿಂದ ಇಷ್ಟು ದೂರ ಬಂದಿದ್ದೇನೆ. 

“ನಾನು ನನ್ನ ಜೀವನದಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯ ಅಥವಾ ನಿಷಿದ್ಧ ವಸ್ತುಗಳನ್ನು ಸಂಗ್ರಹಿಸಿಲ್ಲ ಅಥವಾ ಸೇವಿಸಿಲ್ಲ. ಭಾರತದ ಕಾನೂನು ಪಾಲಿಸುವ ಪ್ರಜೆಯಾಗಿ ನನಗೆ ಲಭ್ಯವಿರುವ ಎಲ್ಲಾ ಕಾನೂನು ಪರಿಹಾರಗಳನ್ನು ಪಡೆಯಲು  ನಾನು ಉದ್ದೇಶಿಸಿದೆ. ನನ್ನ ಪಕ್ಕದಲ್ಲಿ ನಿಂತಿದ್ದಕ್ಕಾಗಿ ನನ್ನ ಬೆಂಬಲಿಗರಿಗೆ ಧನ್ಯವಾದಗಳು, ”ಎಂದು ಅವರು ಟ್ವೀಟ್ ನಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT