ಬಾಲಿವುಡ್

ಬಾಲಿವುಡ್ ನಟ ಅಕ್ಷತ್ ಉತ್ಕರ್ಷ್ ನಿಗೂಢ ಸಾವು: ಕೊಲೆ ಎಂದು ಕುಟುಂಬಸ್ಥರ ಆರೋಪ

Nagaraja AB

ಮುಂಬೈ: ಸುಶಾಂತ್ ಸಿಂಗ್ ರೀತಿಯಲ್ಲಿ ಮತ್ತೋರ್ವ ಬಾಲಿವುಡ್ ನಟ ಮೃತಪಟ್ಟಿದ್ದಾರೆ. ಇಲ್ಲಿನ ಅಂಧೇರಿ ಪ್ರದೇಶದಲ್ಲಿರುವ ನಿವಾಸದಲ್ಲಿ ನಟ ಅಕ್ಷತ್ ಉತ್ಕರ್ಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ.ಕೆಲಸ ಇಲ್ಲದೆ ಮಾನಸಿಕ ಒತ್ತಡಕ್ಕೊಳಗಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆದಾಗ್ಯೂ, ಪೊಲೀಸರ ಹೇಳಿಕೆಯನ್ನು ತಳ್ಳಿಹಾಕಿರುವ ನಟನ ಕುಟುಂಬದವರು, ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.

 ಅಕ್ಷತ್ ಉತ್ಕರ್ಷ್ ಹುಟ್ಟೂರು ಬಿಹಾರದ ಮುಝಾಪರ್ ಪುರ ಗೆ ಮೃತದೇಹವನ್ನು ಕುಟುಂಬಸ್ಥರು ಕೊಂಡೊಯ್ಯಿದಿದ್ದು, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

SCROLL FOR NEXT