ಅಭಿಷೇಕ್ ಬಚ್ಚನ್ 
ಬಾಲಿವುಡ್

ಶಸ್ತ್ರ ಚಿಕಿತ್ಸೆ ನಂತರ ಶೂಟಿಂಗ್ ಗೆ ಮರಳಿದ ನಟ ಅಭಿಷೇಕ್ ಬಚ್ಚನ್

ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇತ್ತೀಚಿಗೆ ಚಿತ್ರೀಕರಣದ ವೇಳೆ ಅಭಿಷೇಕ್‌ ಬಚ್ಚನ್ ಕೈಗೆ ಗಾಯವಾಗಿತ್ತು. ಕೂಡಲೇ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಇದೀಗ ಶಸ್ತ್ರಚಿಕಿತ್ಸೆ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಭಿಷೇಕ್‌, ‘ಚೆನ್ನೈನಲ್ಲಿ ನನ್ನ ಹೊಸ ಸಿನಿಮಾದ ಶೂಟಿಂಗ್​ ವೇಳೆ ಬುಧವಾರ ಅವಘಡ ನಡೆದಿತ್ತು. ಬಲಗೈಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. 

ಆದ್ದರಿಂದ ಕೂಡಲೇ ಮುಂಬೈ ಹೊರಟುಬಂದು ಆಸ್ಪತ್ರೆಗೆ ದಾಖಲಾಗಿದ್ದೆ. ಸದ್ಯ ಶಸ್ತ್ರಚಿಕಿತ್ಸೆ ನಡೆದಿದ್ದು, ಎಲ್ಲವೂ ಸರಿ ಹೋಗಿದೆ. ಶೂಟಿಂಗ್​ ಮುಂದುವರಿಸಲು ಈಗ ಮತ್ತೆ ಚೆನ್ನೈಗೆ ಮರಳಿದ್ದೇನೆ. ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಬಲಗೈ ಗೆ ಪೆಟ್ಟು ಬಿದ್ದಿದ್ದು ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

ಸರ್ಕಾರಿ ಉದ್ಯೋಗ ಭರ್ತಿ ಆಗ್ತಿಲ್ಲ, ಅದಕ್ಕೆ ನಿರುದ್ಯೋಗಿಗಳಿಗೆ 3 ಸಾವಿರ ಕೊಡ್ತೀರೋದು: ಡಿಕೆ ಶಿವಕುಮಾರ್

AIADMKಯಿಂದ ಮತ್ತಷ್ಟು ಫ್ರೀಬೀಸ್ ಘೋಷಣೆ; ಪ್ರತಿ ಕುಟುಂಬಕ್ಕೆ 10,000 ರೂ. ನೆರವು!

ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ; 15 ಲಕ್ಷ ರೂ ಪರಿಹಾರ ಘೋಷಣೆ

ಕೇಂದ್ರದಿಂದ 14 ವರ್ಷದ ಎಲ್ಲಾ ಬಾಲಕಿಯರಿಗೆ HPV ಲಸಿಕೆ ಅಭಿಯಾನ

SCROLL FOR NEXT