ಅಕ್ಷಯ್ ಕುಮಾರ್ 
ಬಾಲಿವುಡ್

ಲಡಾಖ್ ನಲ್ಲಿ ವಿಶ್ವದ ಅತಿ ಎತ್ತರದ ಮೊದಲ ಮೊಬೈಲ್ ಥಿಯೇಟರ್; ನಟ ಅಕ್ಷಯ್ ಗೆ ಗೌರವ!

ಭಾರತದ ಲಡಾಖ್ ನಲ್ಲಿ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್ ಆರಂಭಗೊಂಡಿದೆ.

ಮುಂಬೈ: ಭಾರತದ ಲಡಾಖ್ ನಲ್ಲಿ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್ ಆರಂಭಗೊಂಡಿದೆ. 

ಸಮುದ್ರ ಮಟ್ಟದಿಂದ ಸುಮಾರು 11,562 ಅಡಿ ಎತ್ತರದಲ್ಲಿ ಕಡಿಮೆ ವೆಚ್ಚದಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡ ಈ ಮೊಬೈಲ್ ಥಿಯೇಟರ್ ಅನ್ನು ನಿರ್ಮಿಸಲಾಗಿದೆ. ದೂರದ ಕುಗ್ರಾಮಗಳ ಜನರೂ ಸಹ ಸಿನಿಮಾಗಳಿಗೆ ಹತ್ತಿರವಾಗಬೇಕು ಎಂಬ ಉದ್ದೇಶದಿಂದ ಚಿತ್ರಮಂದಿರವನ್ನು ಸೇವೆಗೆ ಲಭ್ಯವಾಗಿಸಿರುವೆ ಎಂದು ಪಿಕ್ಚರ್‌ ಟೈಮ್‌ ಸ್ಥಾಪಕ, ಸಿಇಒ ಸುಶೀಲ್‌ ಹೇಳಿದ್ದಾರೆ.

ಬಾಲಿವುಡ್‌ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ 'ಬೆಲ್‌ ಬಾಟಮ್‌' ಚಿತ್ರವನ್ನು ಈ ಥಿಯೇಟರ್‌ ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಈ ವಿಷಯವನ್ನು ಅಕ್ಷಯ್ ಕುಮಾರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಲಡಾಖ್‌ನ ಲೇಹ್‌ನಲ್ಲಿ ಸ್ಥಾಪಿಸಲಾಗಿರುವ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ 'ಬೆಲ್ ಬಾಟಮ್' ಚಲನಚಿತ್ರವನ್ನು ಪ್ರದರ್ಶಿಸುವುದು ನನಗೆ ದೊರೆತ ಗೌರವ ಎಂದು ಭಾವಿಸಿದ್ದೇನೆ. ಇದರಿಂದ  ನನ್ನ ಮನಸ್ಸು ಆನಂದಗೊಂಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಈ ಚಿತ್ರ ಆಕ್ಷನ್ ಥ್ರಿಲ್ಲರ್ ಆಗಿದ್ದು ಇದನ್ನು ರಂಜಿತ್ ಎಂ. ತಿವಾರಿ ನಿರ್ದೇಶಿಸಿದ್ದಾರೆ. ವಾಣಿ ಕಪೂರ್, ಲಾರಾ ದತ್ತಾ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಹಲವಾರು ಬಾರಿ ವಿಳಂಬಗೊಂಡು ನಂತರ ಬಿಡುಗಡೆಗೊಂಡ ಈ ಚಿತ್ರ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT