ದಿಲೀಪ್ ಕುಮಾರ್ 
ಬಾಲಿವುಡ್

ಹಿಂದಿ ಚಿತ್ರರಂಗದ ದಂತಕಥೆ ದಿಲೀಪ್ ಕುಮಾರ್ ನಿಧನ: ಬಾಲಿವುಡ್ ಕಂಬನಿ

ಬುಧವಾರ ಮುಂಜಾನೆ ನಿಧನರಾದ ಬಾಲಿವುಡ್ ದಂತಕಥೆ ದಿಲೀಪ್ ಕುಮಾರ್ ಅವರಿಗೆ ಬಾಲಿವುಡ್ ಗಣ್ಯರು, ಚಿತ್ರೋದ್ಯಮ ಸಂತಾಪ ಸೂಚಿಸಿದೆ.ಸೆಲೆಬ್ರಿಟಿಗಳು, ನಟರು, ಚಲನಚಿತ್ರ ನಿರ್ಮಾಪಕರು ಮತ್ತು ಗಾಯಕರು ಸೇರಿದಂತೆ ಚಲನಚಿತ್ರ ಕ್ಷೇತ್ರದ ಖ್ಯಾತನಾಮರು ಸೋಶಿಯಲ್ ಮೀಡಿಯಾದಲ್ಲಿ ನಟನ ಅಗಲಿಕೆಗಾಗಿ ಸಂತಾಪ ಸೂಚಿಸಿ ಪೋಸ್ಟ್ ಹಾಕುತ್ತಿದ್ದಾರೆ.

ಬುಧವಾರ ಮುಂಜಾನೆ ನಿಧನರಾದ ಹಿಂದಿ ಚಿತ್ರರಂಗದ ದಂತಕಥೆ ದಿಲೀಪ್ ಕುಮಾರ್ ಅವರಿಗೆ ಬಾಲಿವುಡ್ ಗಣ್ಯರು, ಚಿತ್ರೋದ್ಯಮ ಸಂತಾಪ ಸೂಚಿಸಿದೆ.ಸೆಲೆಬ್ರಿಟಿಗಳು, ನಟರು, ಚಲನಚಿತ್ರ ನಿರ್ಮಾಪಕರು ಮತ್ತು ಗಾಯಕರು ಸೇರಿದಂತೆ ಚಲನಚಿತ್ರ ಕ್ಷೇತ್ರದ ಖ್ಯಾತನಾಮರು  ಸೋಶಿಯಲ್ ಮೀಡಿಯಾದಲ್ಲಿ ನಟನ ಅಗಲಿಕೆಗಾಗಿ ಸಂತಾಪ ಸೂಚಿಸಿ ಪೋಸ್ಟ್ ಹಾಕುತ್ತಿದ್ದಾರೆ.

"ವಿಧಾನ್", "ಕರ್ಮ" ಮತ್ತು "ಸೌದಾಗರ್" ಚಿತ್ರಗಳಲ್ಲಿ ದಿಲೀಪ್ ಕುಮಾರ್ ಅವರನ್ನು ನಿರ್ದೇಶಿಸಿದ್ದ ಸುಭಾಷ್ ಘಾಯ್  "ನನ್ನ ಜೀವನದ ಅತ್ಯಂತ ದುಃಖದ ದಿನ. ದಿಲೀಪ್ ಸಾಹೇಬ್ ಯೂಸುಫ್ ಭಾಯ್ ನಿಧನವಾಗಿದ್ದಾರೆ. ನನ್ನ ಅತ್ಯಮೂಲ್ಯ ಸ್ನೇಹಿತ,ನ ಅಗಲಿಕೆ ವೈಯುಕ್ತಿಕ ನಷ್ಟವಾಗಿದ್ದು ಮಾತುಗಳೇ ಬರುತ್ತಿಲ್ಲ." ಎಂದರು.

ನಟ ಜಾನ್ ಅಬ್ರಹಾಂ: "ಶಾಂತಿಯಿಂದ ವಿಶ್ರಾಂತಿ ಪಡೆಯಿರಿ ಸರ್ #DilipKumar." ಎಂದಿದ್ದಾರೆ.

ನಟ ಪರೇಶ್ ರಾವಲ್, ನಟ ಕಬೀರ್ ಬೇಡಿ, ಚಿತ್ರ ನಿರ್ದೇಶಕ ಸುಧೀರ್ ಮಿಶ್ರಾ, ನಟ-ಚಲನಚಿತ್ರ ನಿರ್ಮಾಪಕ ಫರ್ಹಾನ್ ಅಖ್ತರ್ ಸಹ ಹಿರಿಯ ನಟನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ನಟಿ ರವೀನಾ ಟಂಡನ್ "ಒಂದು ದಂತಕಥೆಯು ಅಂತ್ಯವಾಗಿದೆ. ಎಂದಿಗೂ ತುಂಬಲಾಗದ ಅಂತರ, ನಿಜವಾದ ದೈತ್ಯ ಪ್ರತಿಭೆ. ಕೊನೆಯವರೆಗೂ ಕರುಣಾಮಯಿ ಪ್ರೀತಿಯ ಜೀವ ದಿಲೀಪ್ ಕುಮಾರ್ ಓಂ ಶಾಂತಿ" ಎಂದು ಬರೆದಿದ್ದಾರೆ.

ನಟ ಮನೋಜ್ ಬಾಜಪೇಯಿ, ಗಾಯಕ ಅದ್ನಾನ್ ಸಾಮಿ ನಟ ಸುನಿಲ್ ಶೆಟ್ಟಿ ಕೂಡ ಸಂತಾಪ ಸೂಚಿಸಿದ್ದು  "ಇಂದು ನಾವು ಭಾರತೀಯ ಚಿತ್ರರಂಗದ ಪ್ರಕಾಶಮಾನವಾದ ನಕ್ಷತ್ರವನ್ನು ಕಳೆದುಕೊಂಡಿದ್ದೇವೆ. ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಜೀವಂತವಿರಲಿದ್ದೀರಿ" ಎಂದು ಶೆಟ್ಟಿ ಟ್ವೀಟ್ ಮಾಡಿದ್ದಾರೆ,.

ಇನ್ನು ನಟಿ ರೇಣುಕಾ ಶಹಾನೆ, ನಟ ಅರ್ಷದ್ ವಾರ್ಸಿ, ಚಿತ್ರ ಸಂಯೋಜಕ ವಿಶಾಲ್ ದಾದ್ಲಾನಿ  ಕೂಡ ತಮ್ಮ ಸಂತಾಪ ಸೂಚಿಸಿದ್ದು ನಟಿ ಊರ್ಮಿಳಾ ಮಾತೋಂಡ್ಕರ್ ಹೀಗೆ ಬರೆದಿದ್ದಾರೆ: "ಸಾಯಿರಾ ಬಾನು ಅವರಿಗೆ ನನ್ನ ಆಳವಾದ ಸಂತಾಪವಿದೆ, . ಸರ್ವಶಕ್ತನು ಈ ದೊಡ್ಡ ನಷ್ಟವನ್ನು ಭರಿಸಲು ಅವರಿಗೆ ಶಕ್ತಿ ನೀಡಲಿ".

ನಟ ಅಫ್ತಾಬ್ ಶಿವದಾಸಾನಿ, ನಟಿ ಇಶಾ ಡಿಯೋಲ್, ನಟ ರೋನಿತ್ ರಾಯ್, ನೃತ್ಯ ಸಂಯೋಜಕ-ಚಲನಚಿತ್ರ ನಿರ್ಮಾಪಕ ಫರಾಹ್ ಖಾನ್, ನಟ ವಿಜಯ್ ವರ್ಮಾ, ನಟಿ ನಿಮ್ರತ್ ಕೌರ್, ನಟಿ ಅದಿತಿ ರಾವ್ ಹೈದರಿ ಸೇರಿದಂತೆ ಅನೇಕ ಬಾಲಿವುಡ್ ಗಣ್ಯರು ಸಹ ದಿಲೀಪ್ ಕುಮಾರ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT