ಸುಬೋಧ್ ಚೋಪ್ರಾ 
ಬಾಲಿವುಡ್

'ಮರ್ಡರ್', 'ರೋಗ್' ಖ್ಯಾತಿಯ ಚಿತ್ರಕಥೆಗಾರ ಸುಬೋಧ್ ಚೋಪ್ರಾ ನಿಧನ

"ಮರ್ಡರ್" ಮತ್ತು "ರೋಗ್" ಚಿತ್ರದ ಸಂಬಾಷಣೆಗಳಿಗೆ ಹೆಸರಾದ ಬರಹಗಾರ ಸುಬೋಧ್ ಚೋಪ್ರಾ (49 )ಅವರು ಮುಂಬೈನ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅಲ್ಲದೆ ಅವರು ಕೆಲ ದಿನಗಳ ಹಿಂದಷ್ಟೇ ಕೋವಿಡ್ ನಿಂದ ಚೇತರಿಸಿಕೊಂಡಿದ್ದರೆಂದು ಅವರ ಸಹೋದರ ಶಶಾಂಕ್ ಚೋಪ್ರಾ ಹೇಳಿದ್ದಾರೆ.

"ಮರ್ಡರ್" ಮತ್ತು "ರೋಗ್" ಚಿತ್ರದ ಸಂಬಾಷಣೆಗಳಿಗೆ ಹೆಸರಾದ ಬರಹಗಾರ ಸುಬೋಧ್ ಚೋಪ್ರಾ  (49)ಅವರು ಮುಂಬೈನ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅಲ್ಲದೆ ಅವರು ಕೆಲ ದಿನಗಳ ಹಿಂದಷ್ಟೇ ಕೋವಿಡ್ ನಿಂದ ಚೇತರಿಸಿಕೊಂಡಿದ್ದರೆಂದು ಅವರ ಸಹೋದರ ಶಶಾಂಕ್ ಚೋಪ್ರಾ ಹೇಳಿದ್ದಾರೆ.

ಸುಬೋಧ್ ಚೋಪ್ರಾ ಅವರ ಆಮ್ಲಜನಕದ ಮಟ್ಟ ಕುಸಿದ ನಂತರ ಶುಕ್ರವಾರ ಮಲಾಡ್‌ನ ಉಪನಗರ ಲೈಫ್‌ಲೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ. "ಅವರು ಮೇ 8 ರಂದು ಕೋವಿಡ್ 19 ನಿಂದ ಚೇತರಿಸಿಕೊಂಡಿದ್ದರು. ಅವರು ಹೊಟ್ಟೆಯಲ್ಲಿ ನೋವು ಅನುಭವಿಸುತ್ತಿದ್ದರು. ಅವರಿಗೆ ಏನೂ ತಿನ್ನಲು ಆಗುತ್ತಿರಲಿಲ್ಲ.ಅವರ ಆಮ್ಲಜನಕದ ಮಟ್ಟವು ಇದ್ದಕ್ಕಿದ್ದಂತೆ ಕುಸಿಯಿತು ಮತ್ತು ನಾವು ಮನೆಯಲ್ಲಿ ಸಿಲಿಂಡರ್‌ಗೆ ವ್ಯವಸ್ಥೆ ಮಾಡಿದ್ದೆವು" ಎಂದು ಶಾಂಕ್ ಚೋಪ್ರಾ ಪಿಟಿಐಗೆ ತಿಳಿಸಿದರು.

ಕೋವಿಡ್ ನಿಂದ ತಂದೆ ಸಾವನ್ನಪ್ಪಿದ ಹತ್ತು ದಿನಗಳ ಬಳಿಕ ಸುಬೋಧ್ ಚೋಪ್ರಾ, ಅವರ ಸೋದರ ಹಾಗೂ ಅತ್ತಿಗೆಗೆ ಕೋವಿಡ್ ಪಾಸಿಟಿವ್ ಎಂದು ವರದಿ ಬಂದಿತ್ತು.

ಸುಬೋಧ್ ಅವರು ವಸುಧಾ ಎಂಬ ಮಲಯಾಳಂ ಚಲನಚಿತ್ರವನ್ನು ನಿರ್ದೇಶಿಸಿದ್ದರು ಮತ್ತು ಮಹೇಶ್ ಭಟ್ ಅವರ ಹಿಂದಿ ಧಾರಾವಾಹಿಗಳಲ್ಲಿ ಸಹ ಕೆಲಸ ಮಾಡಿದ್ದರು.

ಸುಬೋಧ್ ಕಡೆಯದಾಗಿ 2019ರಲ್ಲಿ "ಇಮ್ಮಾರ್ಟಲ್ಸ್ ಆಫ್ ಕಾರ್ಗಿಲ್" ಎಂಬ ಸಾಕ್ಷ್ಯಚಿತ್ರಕ್ಕೆ ಸಂಭಾಷಣೆ ಬರೆದಿದ್ದರು.

ಈ ವರ್ಷ, ಹಲವಾರು ಬಾಲಿವುಡ್ ಕಲಾವಿದರು,  ನಿರ್ದೇಶಕರು ಕೋವಿಡ್ -19 ಗೆ ಪ್ರಾಣ ಕಳೆದುಕೊಂಡರು. ಹಿರಿಯ ಸಂಗೀತ ಸಂಯೋಜಕ ಶ್ರವಣ್ ರಾಥೋಡ್‌ನಿಂದ ಸತೀಶ್ ಕೌಲ್, ಅಭಿಲಾಶಾ ಪಾಟೀಲ್, ಚಲನಚಿತ್ರ ಸಂಕಲನಕಾರ ಅಜಯ್ ಶರ್ಮಾ, ಬಿಕ್ರಮ್‌ಜೀತ್ ಕನ್ವರ್‌ಪಾಲ್ ಮತ್ತು ಯೂಟ್ಯೂಬರ್ ರಾಹುಲ್ ವೊಹ್ರಾ ಸೇರಿ ಅನೇಕರು  ಕೋವಿಡ್ -19 ಗೆ ಬಲಿಯಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT