ಕಂಗನಾ ರನೌತ್ 
ಬಾಲಿವುಡ್

'ಜಿಹಾದಿ ರಾಷ್ಟ್ರ' ಹೇಳಿಕೆ: ತನ್ನ ವಿರುದ್ಧ ಎಫ್‌ಐಆರ್‌ಗೆ ಪ್ರತ್ಯುತ್ತರವಾಗಿ ಹಾಟ್ ಫೋಟೋ ಹಂಚಿಕೊಂಡ ಕಂಗನಾ ರನೌತ್

ಭಾರತ ಮತ್ತು ರೈತರ ವಿರುದ್ಧ ದೇಶದ್ರೋಹಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಸಮಿತಿ (ಎಸ್‌ಜಿಎಸ್‌ಎಸ್‌ಜಿಸಿ) ತನ್ನ ವಿರುದ್ಧ ದಾಖಲಿಸಿದ ಎಫ್‌ಐಆರ್‌ಗೆ ಪ್ರತಿಕ್ರಿಯೆಯಾಗಿ ನಟಿ ಕಂಗನಾ ರನೌತ್ ತಮ್ಮ ಮೊದಲ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈ: ಭಾರತ ಮತ್ತು ರೈತರ ವಿರುದ್ಧ ದೇಶದ್ರೋಹಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಸಮಿತಿ (ಎಸ್‌ಜಿಎಸ್‌ಎಸ್‌ಜಿಸಿ) ತನ್ನ ವಿರುದ್ಧ ದಾಖಲಿಸಿದ ಎಫ್‌ಐಆರ್‌ಗೆ ಪ್ರತಿಕ್ರಿಯೆಯಾಗಿ ನಟಿ ಕಂಗನಾ ರನೌತ್ ತಮ್ಮ ಮೊದಲ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ.

ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಂಗನಾ ತನ್ನ ಹಾಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕಂಗನಾ ಕೈಯಲ್ಲಿ ವೈನ್ ಗ್ಲಾಸ್ ಹಿಡಿದುಕೊಂಡು ಮಾದಕ ಉಡುಪನ್ನು ಧರಿಸಿರುವುದು ಕಾಣಬಹುದು. ಇನ್ನು ಕಂಗನಾ, ‘ಇನ್ನೊಂದು ದಿನ ಮತ್ತೊಂದು ಎಫ್‌ಐಆರ್‌... ನನ್ನನ್ನು ಬಂಧಿಸಲು ಬಂದರೆ... ಸದ್ಯ ಮನೆಯಲ್ಲಿ ನನ್ನ ಮನಸ್ಥಿತಿ ಹೀಗಿದೆ’ ಎಂದು ಬರೆದುಕೊಂಡಿದ್ದಾರೆ.

ಮೋದಿ ಸರ್ಕಾರ ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ನಂತರ ಕಂಗನಾ ರೈತರ ಚಳವಳಿಯನ್ನು ಖಲಿಸ್ತಾನಿ ಚಳವಳಿಗೆ ಹೋಲಿಸಿದ್ದರು. ತದನಂತರ ದೇಶದ ವಿವಿಧ ಪ್ರದೇಶಗಳಲ್ಲಿ ಕಂಗನಾ ವಿರುದ್ಧ ಅನೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಂಗನಾ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದ ಕಂಗನಾ, ‘ಇದು ದುಃಖದ ಸಂಗತಿ, ನಾಚಿಕೆಗೇಡಿನದ್ದು, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನ ದೇಶದಲ್ಲಿ ಕಾನೂನುಗಳನ್ನು ರೂಪಿಸಲಾರಂಭಿಸಿದ್ದಾರೆಯೇ ಹೊರತು, ಸಂಸತ್ತಿನಲ್ಲಿರುವ ಜನರಿಂದ ಆಯ್ಕೆಯಾದ ಸರ್ಕಾರವಲ್ಲ. ಇದು ಸಹ ಜಿಹಾದಿ ರಾಷ್ಟ್ರವಾಗಿದೆ. ಈ ರೀತಿ ಆಗಬೇಕೆಂದು ಬಯಸಿದ ಎಲ್ಲರಿಗೂ ಅಭಿನಂದನೆಗಳು,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಎರಡನೇ ಪೋಸ್ಟ್‌ನಲ್ಲಿ ಆ ಮಹಿಳೆಯನ್ನು(ಇಂದಿರಾ ಗಾಂಧಿ) ಮರೆಯಬಾರದು. ಇವರೆಲ್ಲವನ್ನು ಆಕೆ ತನ್ನ ಶೂ ಅಡಿಯಲ್ಲಿ ಪುಡಿಮಾಡಿದರು. ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಅವರನ್ನು ಸೊಳ್ಳೆಗಳಂತೆ ತುಳಿದಿದ್ದರು. ಆದರೆ ದೇಶವನ್ನು ತುಂಡು ತುಂಡಾಗಲು ಬಿಡಲಿಲ್ಲ. ಆಕೆ ಸತ್ತು ದಶಕ ಕಳೆದರೂ ಅವರ ಹೆಸರಿಗೆ ಇವರು ನಡುಗುತ್ತಾರೆ. ಅದು ಗುರು ಬೇಕು ಎಂದು ಬರೆದುಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT