ಅಜಯ್ ದೇವಗನ್ ಮತ್ತು ಬೇರ್ ಗ್ರಿಲ್ಸ್ 
ಬಾಲಿವುಡ್

'ಇಂಟು ದ ವೈಲ್ಡ್‌ ವಿತ್‌' ಕಾರ್ಯಕ್ರಮಕ್ಕೆ ಹಿಂದೂ ಮಹಾಸಾಗರದಲ್ಲಿ ನಟ ಅಜಯ್‌ ದೇವಗನ್‌ ರೋಚಕ ಚಿತ್ರೀಕರಣ

ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿ ಡಿಸ್ಕವರಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಿತ್ರಿಸಿದ ರೋಚಕ ಸಾಹಸಮಯ ಸರಣಿ ಶೊ ಒಂದು ಮೂಡಿ ಬರಲಿದೆ.

ಮುಂಬೈ: ಭಾರತದ ಪ್ರಮುಖ ನೈಜ ಮನರಂಜನಾ ವಾಹಿನಿ ಡಿಸ್ಕವರಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಿತ್ರಿಸಿದ ರೋಚಕ ಸಾಹಸಮಯ ಸರಣಿ ಶೊ ಒಂದು ಮೂಡಿ ಬರಲಿದೆ.

ಬಾಲಿವುಡ್‌ ನಟ ಅಜಯ್‌ ದೇವಗನ್ ಹಾಗೂ ದಿ ವೈಲ್ಡ್‌ ವಿತ್‌ ಬಿಯರ್‌ ಗ್ರಿಲ್‌ ಕಾರ್ಯಕ್ರಮದ ಗ್ರಿಲ್‌ ಈ ಸರಣಿಯ ಮೊದಲ ಕಂತಿನಲ್ಲಿ ಕಾಣಿಸಿಕೊಂಡಿದ್ದು, ಅಪಾಯಕಾರಿ ಸಾಗರದಲ್ಲಿ ಪ್ರಯಾಣ ಮಾಡುವುದನ್ನು ಕಾಣಬಹುದಾಗಿದೆ.

ಅಪಾಯಕಾರಿ ಸಾಹಸಗಳ ನಡುವೆ ಅಜಯ್‌ದೇವನ್‌ ಅವರೊಂದಿಗೆ ಗ್ರಿಲ್, ಅವರಕುಟುಂಬ, ವೃತ್ತಿ ಮತ್ತು ಜೀವನದ ಕುರಿತು ಮುಕ್ತ ಸಂಭಾಷಣೆ ನಡೆಸಲಿದ್ದಾರೆ. ಹಿಂದೂ ಮಹಾಸಾಗರದ ಅತ್ಯಂತ ನಿರ್ಜನ ದ್ವೀಪಗಳಲ್ಲಿ ಬದುಕಲು, ಪ್ರಯತ್ನಿಸುವ ಈ ಸಾಹಸಮಯ ಸರಣಿ ಮೈನವಿರೇಳಿಸುವುದರಲ್ಲಿ ಅನುಮಾನವಿಲ್ಲ. ಈ ಚಿತ್ರೀಕರಣದ ಅನುಭವ ಹಂಚಿಕೊಮಡಿರುವ ಅಜಯ್‌ ದೇವಗನ್, "ಕಾಡಿನಲ್ಲಿ ನನ್ನ ಮೊದಲ ಪಯಣ ಮತ್ತು ಇದು ಮಕ್ಕಳಾಟವಲ್ಲ ಎಂದು ಹೇಳಬಲ್ಲೆ' ಎಂದಿದ್ದಾರೆ.

ನನ್ನ ತಂದೆ ಸಾಹಸ ನಿರ್ದೇಶಕರಾಗಿದ್ದರು ಮತ್ತು ಭಾರತೀಯ ಚಿತ್ರರಂಗದಲ್ಲಿ ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ಹಲವು ಅಪಾಯಕಾರಿ ಪಾತ್ರಗಳನ್ನು ಒಳಗೊಂಡಂತೆ ಹಲವಾರು ಪಾತ್ರಗಳನ್ನುನಿರ್ವಹಿಸಿದ್ದೇನೆ. ಅಂತಹದೇ ಅನುಭವ ಇದಾಗಿತ್ತು. ಇದು ಪ್ರಕೃತಿಯೊಂದಿಗೆ ಅಗತ್ಯ ಸಂಬಂಧ ಕಂಡುಕೊಳ್ಳಲು ನೆರವಾಯಿತು ಎಂದರು.

ಈ ಇನ್‌ ಟೂ ದಿ ವೈಲ್ಡ್‌ ಕಾರ್ಯಕ್ರಮ ಡಿಸ್ಕವರಿ+, ಡಿಸ್ಕವರಿ ಮತ್ತು ಡಿಸ್ಕವರಿ ಎಚ್‌ಡಿ ಮತ್ತು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಬಾಂಗ್ಲಾ, ಮಲಯಾಳಂ ಮತ್ತು ಕನ್ನಡ ಸೇರಿದಂತೆ 7ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಸಂಚಿಕೆ ಅ 22ರಂದು ಪ್ರಸಾರವಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT