ಪೂಜಾ ಬೇಡಿ 
ಬಾಲಿವುಡ್

ವ್ಯಾಕ್ಸಿನ್ ವಿರೋಧಿ ಪೂಜಾ ಬೇಡಿಗೆ ಕೊರೋನಾ ಸೋಂಕು: ಲಸಿಕೆ ಹಾಕಿಸಿಕೊಳ್ಳದಿರುವುದು ನನ್ನ ವಯಕ್ತಿಕ ನಿರ್ಧಾರ

ನಟಿ ಪೂಜಾ ಬೇಡಿಗೆ ಕೊರೋನಾ ಸೋಂಕು ತಗುಲಿದೆ. ಮೊದಲಿನಿಂದಲೂ ಕೊವಿಡ್​ ಲಸಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಅವರಿಗೆ ಈಗ ಕೊರೊನಾ ಸೋಂಕು ತಗುಲಿದ್ದು ಈ ಬಗ್ಗೆ ಅವರು ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ. 

ನಟಿ ಪೂಜಾ ಬೇಡಿಗೆ ಕೊರೋನಾ ಸೋಂಕು ತಗುಲಿದೆ. ಮೊದಲಿನಿಂದಲೂ ಕೊವಿಡ್​ ಲಸಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಅವರಿಗೆ ಈಗ ಕೊರೊನಾ ಸೋಂಕು ತಗುಲಿದ್ದು ಈ ಬಗ್ಗೆ ಅವರು ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ. 

ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಪೂಜಾ ಬೇಡಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಲಸಿಕೆ ತೆಗೆದುಕೊಳ್ಳದಿರುವ ಬಗ್ಗೆ ನಾನು ಮೊದಲಿನಿಂದಲೂ ಮಾತನಾಡುತ್ತಾ ಬಂದಿದ್ದೇನೆ. ವ್ಯಾಕ್ಸಿನ್​ ಪಡೆಯಬಾರದು ಎಂಬುದು ನನ್ನ ನಿರ್ಧಾರ ಆಗಿತ್ತು. ಸ್ವಂತ ರೋಗ ನಿರೋಧಕ ಶಕ್ತಿಯೇ ನಿಧಾನವಾಗಿ ಹೆಚ್ಚಲಿದೆ. ನಿಮ್ಮ ಆಯ್ಕೆ ಏನು ಎಂಬುದನ್ನು ನೀವೇ ನಿರ್ಧರಿಸಿ’ ಎಂದು ಪೂಜಾ ಬೇಡಿ ಹೇಳಿದ್ದಾರೆ.

ಗೋವಾದಲ್ಲಿ ವಾಸವಾಗಿರುವ ಪೂಜಾ ಬೇಡಿ ಅವರು ಫಿಟ್ನೆಸ್​ ಕೋಚ್​ ಆಗಿ ಕೆಲಸ ಮಾಡುತ್ತಿದ್ದಾರೆ. ಕೊವಿಡ್​ ಲಕ್ಷಣಗಳು ಕಾಣಿಸಿಕೊಂಡಾಗ ಅವರು ಡಸ್ಟ್​ ಅಲರ್ಜಿ ಆಗಿರಬಹುದು ಅಂತ ತಿಳಿದುಕೊಂಡಿದ್ದರು. ಆದರೆ ಪರಿಸ್ಥಿತಿ ನಿಧಾನಕ್ಕೆ ಹದಗೆಡಲು ಶುರುವಾಯಿತು. ಹಾಗಾಗಿ ಟೆಸ್ಟ್​ ಮಾಡಿಸಿಕೊಳ್ಳಲು ತೀರ್ಮಾನಿಸಿದರು. ಆಗ ಅವರಿಗೆ ಕೊವಿಡ್​ ಪಾಸಿಟಿವ್​
ಆಗಿರುವುದು ತಿಳಿಯಿತು. ‘ಲಸಿಕೆ ಬರುವುದಕ್ಕಿಂತಲೂ ಮುನ್ನ ಕೊವಿಡ್​ ತಗುಲಿಸಿಕೊಂಡ ಶೇ.99ರಷ್ಟು ಜನರು ಬದುಕಿದ್ದಾರೆ. ಲಸಿಕೆ ಪಡೆದ ನಂತರವೂ ಶೇ.99ರಷ್ಟು ಮಂದಿ ಬದುಕಿದ್ದಾರೆ. ನಾವು ಎಚ್ಚರಿಕೆಯಿಂದ ಇರಬೇಕು. ಗಾಬರಿ ಆಗುವ ಅವಶ್ಯಕತೆ ಇಲ್ಲ’ ಎಂದು ಪೂಜಾ ಬೇಡಿ ಹೇಳಿದ್ದಾರೆ.

ಆಗಸ್ಟ್​ ತಿಂಗಳಲ್ಲಿ ಅವರು ಬಲವಂತದ ಲಸಿಕೆ ಅಭಿಯಾನದ ಬಗ್ಗೆ ಗರಂ ಆಗಿದ್ದರು. ‘ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯ ಹೇರುತ್ತಿವೆ. ಕೆಲಸ ಉಳಿಸಿಕೊಳ್ಳಲು ಉದ್ಯೋಗಿಗಳಿಗೆ ಇದು ಅನಿವಾರ್ಯ ಆಗುತ್ತಿದೆ. ಲಸಿಕೆಯ ಅಡ್ಡಪರಿಣಾಮದಿಂದ ಸಾವು ಅಥವಾ ವೈಕಲ್ಯ ಉಂಟಾದರೆ ಈ ಕಂಪನಿಗಳೇ ಪರಿಹಾರ ಕೊಡುತ್ತವಾ? ಲಸಿಕೆ ಪಡೆಯದೆಯೂ ಬದುಕುಳಿಯುವ ಸಾಧ್ಯತೆ ಶೇ.99ರಷ್ಟು ಇರುವಾಗ ನಿಜಕ್ಕೂ ಅಪಾಯದಲ್ಲಿ ಇರುವವರಿಗೆ ಮಾತ್ರ ಸರ್ಕಾರ ಲಸಿಕೆ ಹಾಕಿಸಬೇಕು. ಮಾಸ್ಕ್​ ಧರಿಸುವಂತೆ ಹೇಳಬೇಕು. ಐಸೋಲೇಟ್​ ಆಗುವಂತೆ ಸೂಚಿಸಬೇಕು. ಅದರ ಬದಲು ಇಡೀ ಜಗತ್ತಿಗೆ ಲಸಿಕೆ ಹಾಕಿಸುವುದಲ್ಲ. ಲಸಿಕೆ ಹಾಕಿಸಿಕೊಳ್ಳದವರನ್ನು ತಾರತಮ್ಯದಿಂದ ನೋಡಬಾರದು. ಹಾಗೆ ಮಾಡುವುದು ತರ್ಕರಹಿತ ಮತ್ತು ಅಪಾಯಕಾರಿ ಆಗುತ್ತದೆ’ ಎಂದು ಅವರು ಟ್ವೀಟ್​ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT