ದೀಪಿಕಾ ಪಡುಕೋಣೆ-ಶಾರುಖ್ ಖಾನ್ 
ಬಾಲಿವುಡ್

ಪಠಾಣ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಹಾಟ್ ಅವತಾರ: ಫಸ್ಟ್ ಲುಕ್ ಹಂಚಿಕೊಂಡ ಶಾರುಖ್ ಖಾನ್!

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ 2023ರ ಬಹುನಿರೀಕ್ಷಿತ ಚಿತ್ರವಾಗಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಪಠಾಣ್ ಚಿತ್ರದ ಪ್ರಚಾರ ಕಾರ್ಯ ವೇಗ ಪಡೆದುಕೊಂಡಿವೆ. ಟೀಸರ್ ಮತ್ತು ಕೆಲವು ಪೋಸ್ಟರ್‌ಗಳ ನಂತರ ಇದೀಗ ಬೇಷರಂ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ.

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ 2023ರ ಬಹುನಿರೀಕ್ಷಿತ ಚಿತ್ರವಾಗಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಪಠಾಣ್ ಚಿತ್ರದ ಪ್ರಚಾರ ಕಾರ್ಯ ವೇಗ ಪಡೆದುಕೊಂಡಿವೆ. ಟೀಸರ್ ಮತ್ತು ಕೆಲವು ಪೋಸ್ಟರ್‌ಗಳ ನಂತರ ಇದೀಗ ಬೇಷರಂ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ.

ಶಾರುಖ್ ಖಾನ್ ಇಂದು ದೀಪಿಕಾ ಪಡುಕೋಣೆ ಅವರ ಹಾಡಿನ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಹಾಡು ಯಾವಾಗ ಬಿಡುಗಡೆಯಾಗಲಿದೆ? ನಟನ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಬೇಷರಂ ರಂಗ್ ಡಿಸೆಂಬರ್ 12ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗುತ್ತಿದೆ. ಪ್ರೀಮಿಯರ್ ವಿಡಿಯೋವನ್ನು ಯಶ್ ರಾಜ್ ಫಿಲಂಸ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. 2 ದಿನಗಳ ನಂತರ ಹಾಡನ್ನು ಈ ವಿಡಿಯೋದಲ್ಲಿ ನೋಡಬಹುದು.

ದೀಪಿಕಾ ಮೋನೋಕಿನಿ ಲುಕ್
ಫಸ್ಟ್ ಲುಕ್ ನಲ್ಲಿ ದೀಪಿಕಾ ಚಿನ್ನದ ಮೊನೊಕಿನಿಯಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಅವರ ಈ ಸ್ಟೈಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀಪಿಕಾ ಅವರ ಈ ಲುಕ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಬಹಳ ದಿನಗಳ ನಂತರ ದೀಪಿಕಾ ಹಿರಿತೆರೆಯಲ್ಲಿ ಗ್ಲಾಮ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಠಾಣ್ ಚಿತ್ರದ ಟ್ರೈಲರ್ ಇನ್ನೂ ಬಿಡುಗಡೆಯಾಗಿಲ್ಲ. ಚಿತ್ರದ ಟ್ರೇಲರ್‌ಗೂ ಮುನ್ನವೇ ಹಾಡನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಸಿದ್ಧಾರ್ಥ್ ಆನಂದ್ ಹೇಳಿದ್ದರು. ಪ್ರೇಕ್ಷಕರಲ್ಲಿ ಪಠಾಣ್ ಬಗ್ಗೆ ಇರುವ ಕುತೂಹಲವನ್ನು ಉಳಿಸಿಕೊಳ್ಳಲು ಈ ತಂತ್ರವನ್ನು ಅಳವಡಿಸಿಕೊಳ್ಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

Karnataka CM News LIVE Updates | ಸಿದ್ದರಾಮಯ್ಯ ರಾಜೀನಾಮೆ; ಸಿಎಲ್‌ಪಿ ಸಭೆ ಶನಿವಾರ; ಅಂದೇ ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ!

Siddaramaiah Resign: ಇನ್ಮುಂದೆ ಗ್ಯಾರಂಟಿ ಯೋಜನೆಗಳು ಇರಲ್ಲ, 2028ರಲ್ಲಿ ಕಾಂಗ್ರೆಸ್ 40 ಸ್ಥಾನ ಕೂಡಾ ಗೆಲ್ಲಲ್ಲ- ಲಖನ್ ಜಾರಕಿಹೊಳಿ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

ನಿಮ್ಮ ಪ್ರೀತಿಗೆ ಧನ್ಯವಾದ: ರಾಜೀನಾಮೆ ನೀಡಿದ ಬಳಿಕ ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್!

SCROLL FOR NEXT