ಅಮಿತಾಬ್ ಬಚ್ಚನ್ 
ಬಾಲಿವುಡ್

ಕೋಲ್ಕತ್ತಾ ಚಲನಚಿತ್ರೋತ್ಸವದಲ್ಲಿ ನಾಗರಿಕ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬಿಗ್ ಬಿ ಹೇಳಿಕೆ: ಬಿಜೆಪಿ-ಟಿಎಂಸಿ ಮಧ್ಯೆ ಟ್ವೀಟ್ ವಾರ್!

28ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನ ಜೀವಂತ ದಂತಕಥೆ ನಟ ಅಮಿತಾಬ್ ಬಚ್ಚನ್ ಅವರು ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೇಳಿಕೆ ನೀಡಿದ್ದರು. ಈ ಮಾತು ಈಗ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. 

ಕೋಲ್ಕತ್ತಾ: 28ನೇ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನ ಜೀವಂತ ದಂತಕಥೆ ನಟ ಅಮಿತಾಬ್ ಬಚ್ಚನ್ ಅವರು ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೇಳಿಕೆ ನೀಡಿದ್ದರು. ಈ ಮಾತು ಈಗ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ. 

ಮೊನ್ನೆ ಗುರುವಾರ ಚಲನಚಿತ್ರೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಬಚ್ಚನ್, 1952ರ ಸಿನಿಮಾಟೋಗ್ರಫಿ ಕಾಯ್ದೆಯು ಸೆನ್ಸಾರ್‌ಶಿಪ್ ರಚನೆಯನ್ನು ಇಂದು ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಎತ್ತಿ ಹಿಡಿದಿದೆ. ಆದರೆ ಈಗಲೂ, ಈ ವೇದಿಕೆಯಲ್ಲಿ ಕುಳಿತಿರುವ ಮಹನೀಯರು, ನನ್ನ ಸಹೋದ್ಯೋಗಿಗಳು, ಮಹಿಳೆಯರು ಮತ್ತು ಪುರುಷರು ನನ್ನ ಈ ಮಾತುಗಳನ್ನು ಖಂಡಿತಾ ಒಪ್ಪುತ್ತಾರೆ, ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆಗಾಗ ಪ್ರಶ್ನೆಗಳನ್ನು ಎತ್ತಲಾಗುತ್ತದೆ. 

ಬಿಗ್ ಬಿ ಅವರ ಈ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಾಗಿನಿಂದ ಮೆಗಾಸ್ಟಾರ್ ಅವರ ಮಾತುಗಳು “ಪ್ರವಾದಿಯ” ರೀತಿ ಆಗಿದೆ ಎಂದು ಟೀಕಿಸಿದ್ದಾರೆ. ''ಅಮಿತಾಭ್ ಬಚ್ಚನ್ ಅವರ ಮಾತುಗಳು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಅವರು ಕುಳಿತಿದ್ದ ವೇದಿಕೆಯ ಆಡಿದ ಮಾತುಗಳಾಗಿರುವುದರಿಂದ ಹೆಚ್ಚು ಪ್ರವಾದಿಯಾಗಲು ಸಾಧ್ಯವಿಲ್ಲ. ಇದು ನಿರಂಕುಶಾಧಿಕಾರಿಗೆ ಕನ್ನಡಿ ಹಿಡಿದಂತೆ, ಮತದಾನದ ನಂತರದ ಹಿಂಸಾಚಾರಕ್ಕೆ ಸಾಕ್ಷಿಯಾದ ಬಂಗಾಳದ ಪ್ರತಿಷ್ಠೆಗೆ ಕಳಂಕ ತಂದಿದ್ದಾರೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಅಮಿತಾಬ್ ಬಚ್ಚನ್ ಮಾತನ್ನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ಬಚ್ಚನ್ ಅವರ ಹೇಳಿಕೆಯು ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರ ಪರವಾಗಿದೆ. 'ಪಶ್ಚಿಮ ಬಂಗಾಳದ ರಾಜಕೀಯ ಹಿಂಸಾಚಾರದ ಸಂತ್ರಸ್ತರ ಪರವಾಗಿ ನಿಂತಿದ್ದಕ್ಕಾಗಿ ಅಮಿತಾಬ್ ಬಚ್ಚನ್ ಅವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತೀಕಾರವಾಗಿ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರು ಕಿರಿದಾದ ದೇಶೀಯ ಗೋಡೆಗಳ ಮಿತಿಯನ್ನು ಮೀರಿ ಸಿನಿಮಾದ ಒಳಗೊಳ್ಳುವ ಮನೋಭಾವವನ್ನು ಈ ಉತ್ಸವವು ಯಾವಾಗಲೂ ಆಚರಿಸುತ್ತದೆ. ಬಹುತ್ವ ಮತ್ತು ಸಮಾನತೆಯ ಸಾರವನ್ನು ಅಳವಡಿಸಿಕೊಂಡಿರುವ ನಿಮ್ಮ ಕಲಾತ್ಮಕ ಮನೋಧರ್ಮಕ್ಕಾಗಿ ನಾನು ಕೋಲ್ಕತ್ತಾವನ್ನು ವಂದಿಸುತ್ತೇನೆ,'' ಎಂದು ಸಿಎಂ ಮಮತಾ ಬ್ಯಾನರ್ಜಿ ಮತ್ತು ಶಾರುಖ್ ಖಾನ್ ಅವರೊಂದಿಗೆ ವೇದಿಕೆ ಹಂಚಿಕೊಂಡದ್ದಕ್ಕಾಗಿ ಅಮಿತಾಬ್ ಬಚ್ಚನ್ ಗೆ ಧನ್ಯವಾದ ಹೇಳಿದರು. 

ಹಮ್ ಜಿಂದಾ ಹೈ ಎಂದ ಶಾರೂಖ್ ಖಾನ್ 
ಶಾರುಖ್ ಖಾನ್, ತಮ್ಮ ಭಾಷಣದಲ್ಲಿ, ಅವರ ಮುಂಬರುವ ಚಿತ್ರ ಪಠಾಣ್‌ ಸಾಮಾಜಿಕ ಮಾಧ್ಯಮ ಟ್ರೋಲ್‌ಗಳಿಗೆ ಒಳಗಾಗಿದ್ದನ್ನು ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ. “ಜಗತ್ತು ಸಾಮಾನ್ಯವಾಗಿದೆ. ನಾವೆಲ್ಲರೂ ಸಂತೋಷವಾಗಿದ್ದೇವೆ. ದುನಿಯಾ ಕುಚ್ ಭೀ ಕರ್ ಲೇ, ಮೈನ್ ಔರ್ ಆಪ್ ಲೋಗ್ ಔರ್ ಜಿತ್ನೇ ಭಿ ಪಾಸಿಟಿವ್ ಲೋಗ್ ಹೈಂ ಸಬ್ ಕೆ ಸಬ್...ಜಿಂದಾ ಹೈಂ, ಜಗತ್ತು ಸುಂದರವಾಗಿದೆ, ಜನರು ಏನೇ ಹೇಳಲಿ ನಾವು ಪಾಸಿಟಿವ್ ಆಗಿರೋಣ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT