ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ, ಸ್ಮೃತಿ ಇರಾನಿ(ಸಂಗ್ರಹ ಚಿತ್ರ) 
ಬಾಲಿವುಡ್

'ಪಠಾಣ್' ದೀಪಿಕಾ ಕೇಸರಿ ಬಿಕಿನಿ ವಿವಾದ: ಕೇಂದ್ರ ಸಚಿವೆ ಸ್ಮೃತಿ ಇರಾನಿ 'ಮಿಸ್ ಇಂಡಿಯಾ' ಹಳೆ ವಿಡಿಯೊ ಹರಿಬಿಟ್ಟು ಟಿಎಂಸಿ ಆಕ್ರೋಶ!

ಬಿಡುಗಡೆಗೂ ಮುನ್ನವೇ ಶಾರುಖ್ ಖಾನ್ ಅವರ ಮುಂದಿನ ಚಿತ್ರ ಪಠಾಣ್ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಅದರ ಒಂದು ಹಾಡು ಬೇಷರಮ್ ರಂಗ್ YouTube ವೀಡಿಯೊದಲ್ಲಿ ಕೋಟ್ಯಂತರ ವೀಕ್ಷಣೆ ಕಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಾಡಿಗೆ, ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ ಕೇಸರಿ ಬಣ್ಣದ ಉಡುಪಿಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಕೇಸರಿ ಬಿಕಿನಿಯನ್ನು ಹಿಂದೂ ಧರ್ಮಕ್ಕೆ ಅವಹೇಳನಕಾ

ನವದೆಹಲಿ/ಮುಂಬೈ: ಬಿಡುಗಡೆಗೂ ಮುನ್ನವೇ ಶಾರುಖ್ ಖಾನ್(Sharukh Khan) ಅವರ ಮುಂದಿನ ಚಿತ್ರ ಪಠಾಣ್ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಅದರ ಒಂದು ಹಾಡು ಬೇಷರಮ್ ರಂಗ್ YouTube ವೀಡಿಯೊದಲ್ಲಿ ಕೋಟ್ಯಂತರ ವೀಕ್ಷಣೆ ಕಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಾಡಿಗೆ, ಹಾಡಿನಲ್ಲಿ ದೀಪಿಕಾ ಪಡುಕೋಣೆ(Deepika Padukone) ಧರಿಸಿದ ಕೇಸರಿ ಬಣ್ಣದ ಉಡುಪಿಗೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಕೇಸರಿ ಬಿಕಿನಿಯನ್ನು ಹಿಂದೂ ಧರ್ಮಕ್ಕೆ ಅವಹೇಳನಕಾರಿ ಎಂದು ಹೇಳಲಾಗುತ್ತಿದ್ದು, ಸಮಾಜದ ನಿರ್ದಿಷ್ಟ ಬಲಪಂಥೀಯ ವರ್ಗವನ್ನು ಕೆರಳಿಸಿದೆ.

ಇದೀಗ, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ (TMC) ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ ವಿವಾದದಲ್ಲಿ ಭಾರತೀಯ ಜನತಾ ಪಕ್ಷದ (BJP) ಸ್ಮೃತಿ ಇರಾನಿಯವರ ಹಳೆಯ ವೀಡಿಯೊವನ್ನು ಬಳಸುತ್ತಿದೆ. ಟಿಎಂಸಿಯ ರಾಷ್ಟ್ರೀಯ ವಕ್ತಾರ ರಿಜು ದತ್ತಾ ಅವರು ಮಿಸ್ ಇಂಡಿಯಾ 1998 ರ ಈಜುಡುಗೆ ಸುತ್ತಿನಲ್ಲಿ ಇರಾನಿ ಸ್ಪರ್ಧಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅವರು ಕೇಸರಿ ಮಿನಿಸ್ಕರ್ಟ್ ನ್ನು ಧರಿಸಿದ್ದಾರೆ. ದತ್ತಾ ಅವರು "ರಂಗ್ ದೇ ತು ಮೊಹೆ ಗೆರುವಾ (ಕಲರ್ ಮಿ ಕೇಸರಿ) ಎಂದು ಬರೆದಿದ್ದಾರೆ, ವೀಡಿಯೊವನ್ನು ಹಂಚಿಕೊಳ್ಳುವಾಗ ಎಸ್‌ಆರ್‌ಕೆ-ನಟನೆಯ ದಿಲ್ವಾಲೆಯ ಜನಪ್ರಿಯ ಅರಿಜಿತ್ ಸಿಂಗ್ ಹಾಡಿನ ಸಾಲನ್ನು ಬಳಸಿದ್ದಾರೆ.

ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಈ ವಿಡಿಯೋವನ್ನು ಟಿಎಂಸಿ ಟೊಳ್ಳು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎನ್ನುತ್ತಿದೆ. “ಮಮತಾ ಬ್ಯಾನರ್ಜಿ ಇಂತಹ ಸ್ತ್ರೀದ್ವೇಷದ ಪುರುಷರನ್ನು ಟಿಎಂಸಿಯ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದ್ದಕ್ಕಾಗಿ ನಾಚಿಕೆಯಾಗಬೇಕು. ಅವರಿಗೆ ಮಹಿಳೆಯರು ಮತ್ತು ಅವರು ಜೀವನದಲ್ಲಿ ಮಾಡುವ ಆಯ್ಕೆಗಳ ಬಗ್ಗೆ ಗೌರವವಿಲ್ಲ. ಯಶಸ್ವಿ ಮಹಿಳೆಯರನ್ನು ಕಂಡರೆ ಅವರಿಗೆ ಆಗುವುದಿಲ್ಲ. ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳಿಗೆ ಇಂತಹ ಪುರುಷರೇ ಕಾರಣ ಎಂದು ಚಟರ್ಜಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ರಿಜು ದತ್ತಾ, ಕೇಸರಿ ನಿಮ್ಮ ಪಕ್ಷದ ಪಿತ್ರಾರ್ಜಿತ ಆಸ್ತಿ ಎಂಬಂತೆ ವರ್ತಿಸುವುದನ್ನು ನಿಲ್ಲಿಸಿ. ಎರಡನೆಯದಾಗಿ, ದೀಪಿಕಾ ಪಡುಕೋಣೆಯಂತಹ ಮಹಿಳೆಯರು ಕೇಸರಿ ಧರಿಸಿದಾಗ ನಿಮಗೆ ನಡುಕ ಉಂಟಾಗುತ್ತದೆ ಆದರೆ ಸ್ಮೃತಿ ಇರಾನಿ ಮಾಡಿದಾಗ, ನೀವು ಕುರುಡರಾಗಿದ್ದಿರೇ ಎಂದು ಕೇಳಿದ್ದಾರೆ. ಸ್ಮೃತಿ ಇರಾನಿ ಅವರ ಬಟ್ಟೆಯ ಆಯ್ಕೆಯಲ್ಲಿ ಟಿಎಂಸಿಗೆ ಯಾವುದೇ ಸಮಸ್ಯೆ ಇಲ್ಲ, ಆದರೆ ನಾವು ಬಿಜೆಪಿಯ ನೈತಿಕ ಪೊಲೀಸ್ ಗಿರಿ ಮತ್ತು ಕೆಲವು ಜನರ ವಿರುದ್ಧ ಆಯ್ದ ಆಕ್ರೋಶವನ್ನು ವಿರೋಧಿಸುತ್ತೇವೆ. ನಾನು ಅವರ ತಪ್ಪುಗಳಿಗೆ ಕನ್ನಡಿ ಹಿಡಿದು ತೋರಿಸಿದ್ದೇವೆ ಎಂದಿದ್ದಾರೆ.

ಕೇಸರಿ ಬಣ್ಣ ಬಿಜೆಪಿಯ ಖಾಸಗಿ ಆಸ್ತಿಯೇ? ಅದರ ಮೇಲೆ ಅವರಿಗೆ ಅಧಿಕಾರ ಕೊಟ್ಟವರು ಯಾರು? ಅವರು ದೀಪಿಕಾ ಪಠಾಣ್ ಹಾಡಿಗೆ ಸಂಬಂಧಿಸಿದ ಕೇಸರಿ ವಿವಾದ ಇಷ್ಟಕ್ಕೇ ಮುಗಿಯುವುದಿಲ್ಲ. ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಕೆಐಎಫ್‌ಎಫ್) ಉದ್ಘಾಟನಾ ಸಮಾರಂಭದಲ್ಲಿ ಅರಿಜಿತ್ ಸಿಂಗ್ ಗೇರುವಾ ಹಾಡನ್ನು ಹಾಡಿರುವ ವಿಡಿಯೋವನ್ನು ಬಿಜೆಪಿಯ ಅಮಿತ್ ಮಾಳವಿಯಾ ಹಂಚಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬ್ಯಾನರ್ಜಿ ಅವರು ಒಂದು ಹಾಡನ್ನು ಹಾಡುವಂತೆ ಮನವಿ ಮಾಡಿದಾಗ ಸಿಂಗ್ ಹಾಡನ್ನು ಹಾಡಿದರು. ಪಶ್ಚಿಮ ಬಂಗಾಳ ಸಿಎಂಗೆ "ಬಂಗಾಳದ ಭವಿಷ್ಯ ಕೇಸರಿ" ಎಂದು ಸಿಂಗ್ ನೆನಪಿಸಿದರು ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT