ವಿವೇಕ್ ಅಗ್ನಿಹೋತ್ರಿ 
ಬಾಲಿವುಡ್

ತೀವ್ರ ವಿವಾದದ ನಡುವೆ 'ಕಾಂತಾರ' ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದೇನು?

ಕನ್ನಡದ ಕಾಂತಾರ ಚಿತ್ರವನ್ನು ದೇಶಾದ್ಯಂತ ಅತ್ಯುತ್ತಮ ಮಾತುಗಳು ಕೇಳಿಬರುತ್ತಿವೆ. ದಕ್ಷಿಣದಲ್ಲಿ ಮಾತ್ರವಲ್ಲದೆ ಹಿಂದಿ ಭಾಷಿಕ ಪ್ರದೇಶಗಳಲ್ಲೂ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

ಕನ್ನಡದ ಕಾಂತಾರ ಚಿತ್ರವನ್ನು ದೇಶಾದ್ಯಂತ ಅತ್ಯುತ್ತಮ ಮಾತುಗಳು ಕೇಳಿಬರುತ್ತಿವೆ. ದಕ್ಷಿಣದಲ್ಲಿ ಮಾತ್ರವಲ್ಲದೆ ಹಿಂದಿ ಭಾಷಿಕ ಪ್ರದೇಶಗಳಲ್ಲೂ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. 

ಶೀಘ್ರದಲ್ಲೇ ಕಾಂತಾರ ವಿಶ್ವಾದ್ಯಂತ 200 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ. ಈ ಮಧ್ಯೆ ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಾಂತಾರನನ್ನು ನೋಡಿದ್ದು ಚಿತ್ರದ ಕುರಿತಂತೆ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ.  ವಿಡಿಯೋದಲ್ಲಿ ವಿವೇಕ್ ಅಗ್ನಿಹೋತ್ರಿ ರಿಷಬ್ ಶೆಟ್ಟಿ ಅವರ ಚಿತ್ರವನ್ನು ಮಾಸ್ಟರ್ ಪೀಸ್ ಎಂದು ಕರೆಯುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರ ಮಾಸ್ಟರ್‌ಪೀಸ್ ಚಿತ್ರ ಕಾಂತಾರವನ್ನು ವೀಕ್ಷಿಸಿದ್ದೇನೆ. ವಾವ್ ಅಂತ ಹೇಳಲು ಅಷ್ಟೇ ಸಾಲದು. ಅದ್ಭುತ ಅನುಭವ. ಸಾಧ್ಯವಾದಷ್ಟು ಬೇಗ ಅದನ್ನು ವೀಕ್ಷಿಸಿ. ತುಂಬಾ ಡಿಫರೆಂಟ್ ಅನುಭವ, ಇಂತಹ ಸಿನಿಮಾವನ್ನು ನೀವು ನೋಡಿರುತ್ತಿರಲಿಲ್ಲ ಎನ್ನುತ್ತಾರೆ ವಿವೇಕ್. ನಾನು ಅಂತಹ ಚಿತ್ರವನ್ನು ನೋಡಿದ್ದೇನೆ ಎಂದು ನನಗೆ ನೆನಪಿಲ್ಲ. ರಿಷಬ್ ಶೆಟ್ಟಿಯವರಿಗೆ ವಂದನೆಗಳು. ರಿಷಭ್ ನೀವು ಉತ್ತಮ ಕೆಲಸ ಮಾಡಿದ್ದೀರಿ. ನಾಳೆ ಕರೆ ಮಾಡುತೀನಿ. ನನ್ನ ಅನುಭವಗಳನ್ನು ಹಂಚಿಕೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ.

'ಚಿತ್ರವು ಕಲೆ ಮತ್ತು ಜಾನಪದದಿಂದ ಕೂಡಿದ್ದು, ತಳಮಟ್ಟದಲ್ಲಿ ಬೇರೂರಿದೆ. ಚಿತ್ರದ ಕ್ಲೈಮ್ಯಾಕ್ಸ್‌ ಅತ್ಯುತ್ತಮ ಅನುಭವ. ಅದು ತೋರುವ ಶಕ್ತಿಯ ಪ್ರಕಾರ, ನಾನು ಭರವಸೆ ನೀಡುತ್ತೇನೆ. ನೀವು ಅದನ್ನು ಹಿಂದೆಂದೂ ನೋಡಿಲ್ಲ. ನೀವು ಮಾಡಬಹುದಾದ ಮೊದಲ ಕೆಲಸವೆಂದರೆ ದೀಪಾವಳಿ ಮುಗಿದ ನಂತರ ಚಿತ್ರವನ್ನು ನೋಡುವುದು. ನನ್ನ ಪ್ರಕಾರ ಇದು ರಿಷಬ್ ಶೆಟ್ಟಿಯವರ ಮೇರುಕೃತಿ. ಬಹಳ ದಿನಗಳ ನಂತರ ಇಂತಹ ಒಳ್ಳೆಯ ಚಿತ್ರ ನೋಡಿದೆ. ಉತ್ತಮ ಸಿನಿಮಾ, ಉತ್ತಮ ಕಲೆ, ಉತ್ತಮ ಸಂಗೀತ, ಉತ್ತಮ ಛಾಯಾಗ್ರಹಣ, ಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ರಿಷಬ್ ಅಭಿನಂದನೆಗಳು. ಅದ್ಭುತ ಎಂದು ಟ್ವೀಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT