ರತನ್ ರಜಪೂತ್ 
ಬಾಲಿವುಡ್

ಕಾಸ್ಟಿಂಗ್ ಕೌಚ್: ನಟಿಯಾಗಲು ಇಚ್ಛಿಸಿದ್ರೆ ತನ್ನ ಮಗಳೊಂದಿಗೂ ಮಲಗುತ್ತಿದ್ದೆ ಎಂದಿದ್ದ 60 ವರ್ಷದ ನಿರ್ಮಾಪಕ; ನಟಿ ಆರೋಪ

ಭಾರತೀಯ ಚಿತ್ರರಂಗದಲ್ಲಿ ಆಗಾಗೇ ಕಾಸ್ಟಿಂಗ್ ಕೌಚ್ ಸದ್ದು ಮಾಡುತ್ತಿರುತ್ತದೆ. ಅದಕ್ಕೆ ಹೊಸ ಸೇರ್ಪಡೆ ನಟಿ ರತನ್ ರಜಪೂತ್.

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಆಗಾಗೇ ಕಾಸ್ಟಿಂಗ್ ಕೌಚ್ ಸದ್ದು ಮಾಡುತ್ತಿರುತ್ತದೆ. ಅದಕ್ಕೆ ಹೊಸ ಸೇರ್ಪಡೆ ನಟಿ ರತನ್ ರಜಪೂತ್.

ಹಿಂದಿ ಕಿರುತೆರೆಯಲ್ಲಿ ಜನಂ ಮೋಹೇ ಬಿತಿಯ ಹಿ ಕಿಚೋ ಧಾರವಾಹಿ ಮೂಲಕ ಜನಮನ್ನಣೆ ಪಡೆದ ರತನ್ ರಜಪೂತ್ ತಮ್ಮ ವೃತ್ತಿ ಬದುಕಿನಲ್ಲಿ ಆಗಿದ್ದ ಕರಾಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. 

ಮಾಧ್ಯಮವೊಂದರಲ್ಲಿ ಮಾತನಾಡಿದ್ದ ರತನ್ ಅವರು, 14 ವರ್ಷಗಳ ಹಿಂದೆ ಸಿನಿಮಾಕ್ಕಾಗಿ ಮುಂಬೈಗೆ ಹೋಗಿದ್ದೆ. ಅಲ್ಲಿ 60 ವರ್ಷದ ನಿರ್ಮಾಪಕರೊಬ್ಬರನ್ನು ಭೇಟಿಯಾಗಿದ್ದೆ. ಅವರು ನನ್ನನ್ನು ನೋಡಿ ನಿನ್ನ ಸಂಪೂರ್ಣ ಲುಕ್ ಬದಲಾಯಿಸಬೇಕು. ಅದಕ್ಕೆ ಆಗುವ ವೆಚ್ಚವನ್ನು ನಾನು ಭರಿಸುತ್ತೇನೆ. ಅದಕ್ಕೆ ನೀನು ನನ್ನೊಂದಿಗೆ ಸ್ನೇಹಿತೆ ಆಗಿರಬೇಕು ಎಂದು ಕೇಳಿದರು. 

ನಾನು ನಿಮ್ಮ ಮಗಳಿನ ವಯಸ್ಸಿನವಳು ಅಂದೆ. ಅದಕ್ಕೆ ಅವರು ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ ಎಂದು ಹೇಳಿದರು. ಆ ಮಾತನ್ನು ಕೇಳಿ ನಾನು ಆಘಾತಕ್ಕೊಳಗಾದೆ. ತಡ ಮಾಡದೆ ಅಲ್ಲಿಂದ ಹೊರಟು ಬಂದುಬಿಟ್ಟಿದ್ದೆ ಎಂದರು. 

ಈ ಘಟನೆ ನಂತರ ನಾನು ಮತ್ತೆ ಸಿನಿಮಾ ಇಂಡಸ್ಟ್ರಿಗೆ ಹೋಗಿ ನಟಿಯಾಗುವ ಪ್ರಯತ್ನವನ್ನು ಮಾಡಿಲ್ಲ ಎಂದು ರತನ್ ರಜಪೂತ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ಬಂಧನ!

ಬಾಬಾ ಸಿದ್ದಿಕಿ ಕೊಲೆ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಅಮೆರಿಕದಿಂದ ಗಡೀಪಾರು!

POCSO case: ಯಡಿಯೂರಪ್ಪಗೆ ಸಂಕಷ್ಟ, ಡಿ. 2 ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್!

ಮೆದುಳು ತಿನ್ನುವ ಅಮೀಬಾ: ಶಬರಿಮಲೆ ಭಕ್ತರಿಗೆ ರಾಜ್ಯ ಆರೋಗ್ಯ ಇಲಾಖೆಯ ಮಾರ್ಗಸೂಚಿ, ಮುನ್ನೆಚ್ಚರಿಕೆ ಕ್ರಮಗಳೇನು?

Chikkaballapur: ಅಡ್ಡಾದಿಡ್ಡಿ ಸ್ಕೂಟಿ ಚಾಲನೆ; ಪ್ರಶ್ನಿಸಿದ ಬೈಕ್​​ ಸವಾರನಿಗೆ ಚಾಕು ಇರಿತ, ಪೊಲೀಸ್ ಠಾಣೆಯಲ್ಲೇ ಲೇಡಿ ಹೈಡ್ರಾಮಾ, Video

SCROLL FOR NEXT