ಡಂಕಿ ಚಿತ್ರದಲ್ಲಿ ನಟ ಶಾರುಖ್ ಖಾನ್ 
ಬಾಲಿವುಡ್

Dunki vs Salaar: ಶಾರುಖ್ ಖಾನ್ ನಟನೆಯ 'ಡಂಕಿ' ಬಿಡುಗಡೆಯಾದ ಐದು ದಿನಕ್ಕೆ 256.40 ಕೋಟಿ ರೂ. ಗಳಿಕೆ

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಡಂಕಿ' ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದ್ದು, ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿಯೇ 256. 40 ಕೋಟಿ ರೂ. ಬಾಚಿಕೊಂಡಿದೆ. 

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಡಂಕಿ' ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದ್ದು, ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿಯೇ 256. 40 ಕೋಟಿ ರೂ. ಬಾಚಿಕೊಂಡಿದೆ. 

ನೈಜ ಘಟನೆಗಳನ್ನು ಆಧರಿಸಿ ಈ ಹಿಂದಿ ಸಿನಿಮಾವನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ಅಲ್ಲದೆ, ಅಭಿಜಾತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಅವರೊಂದಿಗೆ ಕಥೆಯನ್ನು ಸಹ ಬರೆದಿದ್ದಾರೆ. ಡಂಕಿ ಸಿನಿಮಾ ಡಿಸೆಂಬರ್ 21ರಂದು (ಗುರುವಾರ) ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಹೌಸ್ ಮಂಗಳವಾರ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಡಂಕಿ ಸಿನಿಮಾದ ಬಾಕ್ಸ್ ಆಫೀಸ್ ಸಂಗ್ರಹದ ಕುರಿತು ಮಾಹಿತಿ ನೀಡಿದೆ. 

'ಯೇ ಕಹಾನಿ ಬಡಿ ಪ್ಯಾರಿ ಹೈ. ತಭಿ ತೋ...ಆಪ್ಕಾ ಪ್ಯಾರ್ ಮಿಲ್ನಾ ಜಾರಿ ಹೈ'. ಡಂಕಿ ಚಿತ್ರವು ವಿಶ್ವದಾದ್ಯಂತ 256. 40 ಕೋಟಿ ರೂ. ಗಳಿಸಿದೆ ಎಂದು ಪೋಸ್ಟ್ ಮಾಡಿದೆ.

ಶಾರುಖ್ ಖಾನ್ ನಟನೆಯ ಈ ವರ್ಷವೇ ತೆರೆಕಂಡ ಪಠಾಣ್ ಮತ್ತು ಜವಾನ್ ಸಿನಿಮಾ ಮಾಡಿದ ಮೋಡಿಯನ್ನು ಮಾಡುವಲ್ಲಿ ಡಂಕಿ ಎಡವಿದ್ದರೂ, ಸಿನಿ ಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ನಟಿ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಕೂಡ ನಟಿಸಿದ್ದಾರೆ.

ಚಿತ್ರವು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಶುಕ್ರವಾರ (ಡಿಸೆಂಬರ್ 22) ಬಿಡುಗಡೆಯಾದ ನಟ ಪ್ರಭಾಸ್ ನಟನೆಯ ಸಲಾರ್ ಚಿತ್ರ 'ಡಂಕಿ' ಸಿನಿಮಾಗೆ ಕಠಿಣ ಸ್ಪರ್ಧೆಯನ್ನು ಒಡ್ಡಿದೆ.

ನಟ ಪ್ರಭಾಸ್ ಅಭಿನಯದ 'ಸಲಾರ್: ಭಾಗ 1 - ಕದನ ವಿರಾಮ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ 402 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.

ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ಚಿತ್ರವು ಬಿಡುಗಡೆಯಾದ ಮೊದಲನೇ ದಿನವೇ 178. 7 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿದೆ. 

ಡಂಕಿ ಸಿನಿಮಾದ ಮೊದಲನೇ ದಿನದ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ 30 ಕೋಟಿ ರೂ. ಆಗಿತ್ತು. ಇದು 'ಪಠಾಣ್' ಮತ್ತು 'ಜವಾನ್' ಎರಡಕ್ಕಿಂತಲೂ ಗಮನಾರ್ಹವಾಗಿ ಕಡಿಮೆಯಾಗಿದೆ. 

'ಡಂಕಿ' ಅನ್ನು ಜಿಯೋ ಸ್ಟುಡಿಯೋಸ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಸಹ ಪ್ರಸ್ತುತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT