ಬಾಲಿವುಡ್

'ಬಾಲಿವುಡ್ ಬಾಯ್ಕಾಟ್ ಟ್ರೆಂಡ್'; ನೀವೇ ಇದಕ್ಕೊಂದು ಅಂತ್ಯ ಹಾಡಿ: ಯೋಗಿ ಆದಿತ್ಯನಾಥ್'ಗೆ ಸುನೀಲ್ ಶೆಟ್ಟಿ ಮನವಿ

Vishwanath S

ಮುಂಬೈ: ಹಿಂದಿ ಚಲನಚಿತ್ರೋದ್ಯಮದ ಮೇಲಿನ ದ್ವೇಷ ಮತ್ತು ಸಾಮಾಜಿಕ ಮಾಧ್ಯಮದಲ್ಲಿ 'ಬಾಲಿವುಡ್ ಬಾಯ್ಕಾಟ್' ಟ್ರೆಂಡ್ ಅನ್ನು ತೊಡೆದುಹಾಕಲು ಸಹಾಯ ಮಾಡುವಂತೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ. 

ಎರಡು ದಿನಗಳ ಮುಂಬೈ ಪ್ರವಾಸದಲ್ಲಿದ್ದ ಸಿಎಂ ಆದಿತ್ಯನಾಥ್ ಅವರು ಬಾಲಿವುಡ್ ನಟ, ನಿರ್ಮಾಪಕರನ್ನು ಭೇಟಿ ಮಾಡಿದರು. ಸುನೀಲ್ ಶೆಟ್ಟಿ, ಸುಭಾಷ್ ಘಾಯ್, ಜಾಕಿ ಶ್ರಾಫ್, ರಾಜ್‌ಕುಮಾರ್ ಸಂತೋಷಿ, ಮನಮೋಹನ್ ಶೆಟ್ಟಿ ಮತ್ತು ಬೋನಿ ಕಪೂರ್ ಅವರಂತಹ ಚಿತ್ರರಂಗದ ಪ್ರಮುಖರನ್ನು ಭೇಟಿ ಮಾಡಿ ನೋಯ್ಡಾ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮತ್ತು ಹೂಡಿಕೆಯ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.

61 ವರ್ಷದ ನಟ, 'ಬಾಲಿವುಡ್ ಬಹಿಷ್ಕರಿಸಿ' ಪ್ರವೃತ್ತಿಯನ್ನು ತೊಡೆದುಹಾಕಲು ನೀವು ಅದರ ಬಗ್ಗೆ ಏನಾದರೂ ಹೇಳಿ, ನಿಮ್ಮ ಮಾತಿನಿಂದ ಅದು ನಿಲ್ಲಬಹುದು. ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂದರು. ನಾವು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ. ಇತರರಿಗೆ ಹಾನಿ ಮಾಡುವುದಿಲ್ಲ. ಇಂದು ಜನರು ಬಾಲಿವುಡ್ ಸರಿಯಿಲ್ಲ ಎಂದು ಭಾವಿಸಿದ್ದಾರೆ. ಆದರೆ ನಾವು ಇಲ್ಲಿ ಸಾಕಷ್ಟು ಉತ್ತಮ ಚಿತ್ರಗಳನ್ನು ಮಾಡಿದ್ದೇವೆ. ಅಂತಹ ಒಂದು ಚಿತ್ರ 'ಬಾರ್ಡರ್' ನಲ್ಲಿ ನಾನು ಸಹ ಭಾಗವಾಗಿದ್ದೇನೆ ಎಂದು ಯೋಗಿ ಆದಿತ್ಯನಾಥರನ್ನು ಕೇಳಿಕೊಂಡರು.

ಬಾಲಿವುಡ್ ಗೆ ಅಂಟಿಕೊಂಡಿರುವ ಕಳಂಕವನ್ನು ಹೋಗಲಾಡಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬೆಂಬಲವನ್ನು ಪಡೆಯಲು ಆದಿತ್ಯನಾಥ್ ಅವರನ್ನು ವಿನಂತಿಸಿದರು. 'ಈ ಕಳಂಕವನ್ನು ನೋಡಿ ನನಗೆ ನೋವಾಗಿದೆ. ಇಲ್ಲಿನ ಶೇಕಡ ತೊಂಬತ್ತೊಂಬತ್ತು ಜನರು ಒಳ್ಳೆಯವರಾಗಿದ್ದಾರೆ. ಆದ್ದರಿಂದ, ಯೋಗಿ ಜೀ, ದಯವಿಟ್ಟು ಈ ಕಳಂಕವನ್ನು ತೊಡೆದುಹಾಕುವ ಬಗ್ಗೆ ನಮ್ಮ ಪ್ರಧಾನಿಯವರೊಂದಿಗೆ ಮಾತನಾಡಲು ಮುಂದಾಳತ್ವ ವಹಿಸಿ" ಎಂದು ಅವರು ಹೇಳಿದರು. ಭಾರತವನ್ನು ಪ್ರಪಂಚದೊಂದಿಗೆ ಸಂಪರ್ಕಿಸುವಲ್ಲಿ ಚಲನಚಿತ್ರೋದ್ಯಮವು ಪ್ರಮುಖ ಪಾತ್ರ ವಹಿಸಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ತಮ್ಮ ಪ್ರಭಾವವನ್ನು ಬಳಸಿ 'ಬಾಲಿವುಡ್ ಬಹಿಷ್ಕಾರ' ಪ್ರವೃತ್ತಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

ಜೂನ್ 2020ರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ 'BoycottBollywood' ಎಂಬ ಹ್ಯಾಶ್‌ಟ್ಯಾಗ್ ಮೊದಲು ಟ್ರೆಂಡಿಂಗ್ ಪ್ರಾರಂಭಿಸಿತು. ಇದು ಉದ್ಯಮದ ಸ್ವಜನಪಕ್ಷಪಾತದ ಸ್ವರೂಪ ಮತ್ತು ಉನ್ನತ ಬ್ಯಾನರ್‌ಗಳ ಗೇಟ್ ಕೀಪಿಂಗ್ ವರ್ತನೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತು. ಅಮೀರ್ ಖಾನ್ ನಟನೆಯ "ಲಾಲ್ ಸಿಂಗ್ ಚಡ್ಡಾ" ಮತ್ತು ಅಕ್ಷಯ್ ಕುಮಾರ್ ನಟನೆಯ "ರಕ್ಷಾ ಬಂಧನ" ಬಾಯ್ಕಾಟ್ ಪ್ರವೃತ್ತಿ ನಡೆದಿದ್ದು ಇದೀಗ ಹೊಸ ವರ್ಷದ ಬಳಿಕವೂ ಮುಂದುವರೆದಿದೆ ಎಂದರು.

ಬಾಯ್ಕಾಟ್ ಟ್ರೆಂಡ್ ಗೆ ಅನುರಾಗ್ ಕಶ್ಯಪ್ ನಿರ್ದೇಶನದ "ದೊಬಾರಾ", ವಿಜಯ್ ದೇವರಕೊಂಡ ಅಭಿನಯದ "ಲೈಗರ್", ಮತ್ತು ಅಯನ್ ಮುಖರ್ಜಿ ಅವರ ದೊಡ್ಡ-ಬಜೆಟ್ ಫ್ಯಾಂಟಸಿ ಸಾಹಸ 'ಬ್ರಹ್ಮಾಸ್ತ್ರ: ಭಾಗ ಒಂದು-ಶಿವ'. ಇದೀಗ ಶಾರುಖ್ ಖಾನ್ ರ 'ಪಠಾಣ್' ಚಿತ್ರಕ್ಕೆ ಬಾಯ್ಕಾಟ್ ಬಿಸಿ ತಗುಲಿದೆ. ತನ್ನ ಆರಂಭಿಕ ವರ್ಷಗಳಲ್ಲಿ ಉತ್ತರ ಪ್ರದೇಶದ ಜನರು ತನ್ನ ಮೇಲೆ ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ನಟ ಹೇಳಿದರು.

SCROLL FOR NEXT