ದೀಪಿಕಾ ಪಡುಕೋಣೆ 
ಬಾಲಿವುಡ್

ನನ್ನ ಅತ್ಯಂತ ನೆಚ್ಚಿನ ಸಹನಟನ ಜೊತೆ ಮತ್ತೆ ನಟಿಸಿರುವುದು ಖುಷಿ ತಂದಿದೆ: 'ಪಠಾಣ್', ಶಾರೂಕ್ ಖಾನ್ ಬಗ್ಗೆ ದೀಪಿಕಾ ಮಾತು...

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಈ ವಾರ ವಿಶೇಷವಾಗಿದೆ. ಗಣರಾಜ್ಯೋತ್ಸವ ಹೊಸ್ತಿಲಿನಲ್ಲಿ ಅವರ ಮತ್ತು ಶಾರೂಕ್ ಖಾನ್ ನಟನೆಯ ಬಹು ನಿರೀಕ್ಷಿತ 'ಪಠಾಣ್' ಚಿತ್ರ ತೆರೆಗೆ ಬರುತ್ತಿದೆ. 

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಈ ವಾರ ವಿಶೇಷವಾಗಿದೆ. ಗಣರಾಜ್ಯೋತ್ಸವ ಹೊಸ್ತಿಲಿನಲ್ಲಿ ಅವರ ಮತ್ತು ಶಾರೂಕ್ ಖಾನ್ ನಟನೆಯ ಬಹು ನಿರೀಕ್ಷಿತ 'ಪಠಾಣ್' ಚಿತ್ರ ತೆರೆಗೆ ಬರುತ್ತಿದೆ. 

ಶಾರೂಕ್ ಖಾನ್ ಅವರು ದೀಪಿಕಾ ವೃತ್ತಿ ಬದುಕಿನಲ್ಲಿ ಬಹಳ ವಿಶೇಷ ವ್ಯಕ್ತಿ, ಬಾಲಿವುಡ್ ಗೆ ದೀಪಿಕಾ ಕಾಲಿಟ್ಟಿದ್ದೇ ಶಾರೂಕ್ ಖಾನ್ ಎದುರು ನಾಯಕಿಯಾಗಿ 2007ರಲ್ಲಿ ಓಂ ಶಾಂತಿ ಓಂ ಚಿತ್ರದ ಮೂಲಕ. ಅಲ್ಲಿಂದ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಬೆಳೆದರು. ಇಬ್ಬರು ತಾರೆಯರು  ನಟಿಸಿದ 'ಓಂ ಶಾಂತಿ ಓಂ', 'ಹ್ಯಾಪಿ ನ್ಯೂ ಇಯರ್' ಮತ್ತು 'ಚೆನ್ನೈ ಎಕ್ಸ್‌ಪ್ರೆಸ್' ಗಳು ಹಿಟ್ ಆಗಿದ್ದವು.

ಹಲವು ವರ್ಷಗಳ ನಂತರ ಮತ್ತೊಮ್ಮೆ ಶಾರೂಕ್ ಮತ್ತು ದೀಪಿಕಾ ಒಟ್ಟಾಗಿ ಅಭಿನಯಿಸಿದ್ದು, ಇಬ್ಬರಿಗೂ ಚಿತ್ರದ ಗೆಲುವು ಮುಖ್ಯವಾಗಿದೆ. ಈ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ದೀಪಿಕಾ ಸೂಪರ್‌ಸ್ಟಾರ್ ಶಾರುಖ್ ಖಾನ್ ನನ್ನ "ನೆಚ್ಚಿನ ಸಹನಟ" ಎಂದಿದ್ದಾರೆ. 

"ಓಂ ಶಾಂತಿ ಓಂನಿಂದ ಸಿಕ್ಕಿದ ಅವಕಾಶ ಮುಂದೆ ಕೆಲವು ಚಿತ್ರಗಳಲ್ಲಿ ನಮ್ಮನ್ನು ಒಟ್ಟಿಗೆ ಕೆಲಸ ಮಾಡುವಂತೆ ಮಾಡಿತು, ಶಾರುಖ್ ಮತ್ತು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇವೆ! ಅವರು ನನ್ನ ನೆಚ್ಚಿನ ಸಹನಟ. ನಾವಿಬ್ಬರೂ ಉತ್ತಮ ಸಂಬಂಧ ಹೊಂದಿದ್ದೇವೆ. ಪ್ರೇಕ್ಷಕರು ಕೂಡ ನಮ್ಮಿಬ್ಬರ ಜೋಡಿಯನ್ನು ನೋಡಲು ಕಾತರದಿಂದ ಕಾಯುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ದೀಪಿಕಾ ಹೇಳಿದ್ದಾರೆ.

ತಮ್ಮಿಬ್ಬರ ಕೆಮಿಸ್ಟ್ರಿ ಬಗ್ಗೆ ಮಾತನಾಡಿರುವ ಅವರು, ಎಲ್ಲ ಚಿತ್ರಗಳಂತೆ ಈ ಚಿತ್ರಕ್ಕೂ ನಾವು ವೈಯಕ್ತಿಕವಾಗಿ ಸಾಕಷ್ಟು ಶ್ರಮ ಹಾಕಿದ್ದೇವೆ, ಚಿತ್ರ ಚೆನ್ನಾಗಿ ಮೂಡಿಬಂದರೆ ಅದರಲ್ಲಿ ನಮ್ಮ ವೈಯಕ್ತಿಕ ಶ್ರಮ ಇರುತ್ತದೆ, ಆದರೂ ಕೊನೆಗೆ ಚಿತ್ರದ ವಿಷಯ ಬಂದಾಗ ಅದು ಟೀಮ್ ವರ್ಕ್ ಎಂದರು.

ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತು ಛಾಯಾಗ್ರಾಹಕ ಸಚಿತ್ ಪೌಲೋಸ್ ನಮ್ಮನ್ನು ತೋರಿಸುವ ರೀತಿಯೂ ಮುಖ್ಯವಾಗುತ್ತದೆ. ಸ್ಟೈಲಿಸ್ಟ್ ಶಲೀನಾ ನಾಥನಿ ಅವರು ಈ ಪಾತ್ರಗಳನ್ನು ಹೇಗೆ ರೂಪಿಸುತ್ತಾರೆ, ಕೂದಲು ಮತ್ತು ಮೇಕಪ್ ತಂಡ ಕೂಡ ಇಲ್ಲಿ ಮುಖ್ಯವಾಗುತ್ತದೆ. ಇದು ನಿಮ್ಮ ಇಡೀ ತಂಡವು ಒಂದುಗೂಡಿ ಮಾಡುವ ಕೆಲಸ, ಚಿತ್ರತಂಡ ಅದ್ಭುತವಾದ ವೃತ್ತಿಪರರನ್ನು ಹೊಂದಿದೆ ಎಂದರು. 

'ಪಠಾಣ್' ಚಿತ್ರದ ಚಿತ್ರಕಥೆ ವಿಶೇಷವಾಗಿದೆ. ಈ ಚಿತ್ರದಲ್ಲಿ ನಾನು ನಿರ್ವಹಿಸುತ್ತಿರುವ ಪಾತ್ರವು ತುಂಬಾ ರೋಮಾಂಚನಕಾರಿಯಾಗಿದೆ. ಈ ಹಿಂದಿನ ಚಿತ್ರಗಳಲ್ಲಿ ಕಾಣದ ರೀತಿಯಲ್ಲಿ ಇದರಲ್ಲಿ ನನ್ನ ಪಾತ್ರವಿದೆ.  ಸ್ಪೈ ಥ್ರಿಲ್ಲರ್, ಔಟ್ ಮತ್ತು ಔಟ್ ಆಕ್ಷನ್ ಚಲನಚಿತ್ರವನ್ನು ನಾನು ಮೊದಲು ಮಾಡಿರಲಿಲ್ಲ ಎಂದರು.

ಪಠಾಣ್ ಆದಿತ್ಯ ಚೋಪ್ರಾ ಅವರ ಮಹತ್ವಾಕಾಂಕ್ಷೆಯ ಪಠಾಣ್ ಚಿತ್ರದಲ್ಲಿ ಜಾನ್ ಅಬ್ರಹಾಂ ಕೂಡ ಇದ್ದಾರೆ. ಚಿಚ್ರ ಇದೇ 25ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT