ಪಠಾಣ್ ಚಿತ್ರದಲ್ಲಿ ಶಾರೂಕ್ ಖಾನ್-ದೀಪಿಕಾ ಪಡುಕೋಣೆ 
ಬಾಲಿವುಡ್

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 'ಪಠಾಣ್': ಮೂರೇ ದಿನದಲ್ಲಿ 300 ಕೋಟಿ ಕಲೆಕ್ಷನ್

ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರ ಜನವರಿ 25ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರ ತೆರೆಕಂಡ ಮೂರೇ ದಿನಕ್ಕೆ 300 ಕೋಟಿ ರೂಪಾಯಿ ಬಾಚಿದೆ.

ಮುಂಬೈ: ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರ ಜನವರಿ 25ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರ ತೆರೆಕಂಡ ಮೂರೇ ದಿನಕ್ಕೆ 300 ಕೋಟಿ ರೂಪಾಯಿ ಬಾಚಿದೆ.

ಪಠಾಣ್ ಚಿತ್ರ ವಿವಾದದ ನಡುವೆಯೂ ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರ ವಿಶ್ವಾದ್ಯಂತ ಒಟ್ಟು 313 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ.

ಪಠಾಣ್ ಚಿತ್ರ ಮೂರನೇ ದಿನವೂ 100 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಮೊದಲ ಮೂರು ದಿನದಲ್ಲೇ 300 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಅತೀ ವೇಗವಾಗಿ 300 ಕೋಟಿ ಕಲೆಕ್ಷನ್ ಮಾಡಿದ ಮೊಟ್ಟ ಮೊದಲ ಬಾಲಿವುಡ್ ಸಿನಿಮಾ ಎಂಬ ಗೌರವಕ್ಕೆ ಪಾತ್ರವಾಗಿದೆ.

ಯಶ್ ರಾಜ್ ಫಿಲ್ಮ್ಸ್(YRF) ಪ್ರಕಾರ, ಎಸ್‌ಆರ್‌ಕೆ-ದೀಪಿಕಾ ಪಡುಕೋಣೆ ಅಭಿನಯದ ಹಿಂದಿ ಚಿತ್ರ 38 ಕೋಟಿ ಗಳಿಸಿದರೆ, ಡಬ್ಬಿಂಗ್ ಫಾರ್ಮ್ಯಾಟ್‌ಗಳಿಂದ ಮೂರನೇ ದಿನದಲ್ಲಿ ರೂ 1.25 ಕೋಟಿ ಗಳಿಸಿದೆ. ಜನವರಿ 25 ರಂದು ಪಠಾಣ್ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಿತ್ತು.

"ಮೂರನೇ ದಿನದ ಒಟ್ಟು ಭಾರತದ ಕಲೆಕ್ಷನ್ 47 ಕೋಟಿ ರೂಪಾಯಿ ಆಗಿದ್ದು, ವಿದೇಶಗಳಲ್ಲಿ 43 ಕೋಟಿ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಮೂರನೇ ದಿನದ ಒಟ್ಟು ಕಲೆಕ್ಷನ್ 90 ಕೋಟಿ ರೂಪಾಯಿ ಎಂದು" ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ನಾಲ್ಕು ವರ್ಷಗಳ ಬಳಿಕ ತೆರೆ ಕಂಡಿರುವ ಶಾರುಖ್ ಖಾನ್ ಅವರ ಚಿತ್ರಕ್ಕೆ ಉತ್ತಮ ಆರಂಭ ಸಿಕ್ಕಿದ್ದು, ಮೊದಲ ದಿನವೇ ಜಾಗತಿಕವಾಗಿ ರೂ 106 ಕೋಟಿ ಗಳಿಸಿದ್ದು, ನಂತರ ಎರಡು ದಿನದಲ್ಲಿ 113.6 ಕೋಟಿ ಗಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಪಶ್ಚಿಮ ಬಂಗಾಳ ಉಪ ಚುನಾವಣೆ: ಪೊಲೀಸರೊಂದಿಗೆ ಮಾತಿನ ಚಕಮಕಿ: ಶಾಸಕ ಹುಮಾಯೂನ್ ಕಬೀರ್ ಬಂಧನ

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್