ಕಾಜೋಲ್ 
ಬಾಲಿವುಡ್

ನನ್ನ ಜೀವನದ ಅತ್ಯಂತ ಕಠಿಣ ವಿಚಾರಣೆ: ಸೋಷಿಯಲ್ ಮೀಡಿಯಾಗೆ ಕಾಜೊಲ್ ಗುಡ್ ಬೈ; ಎಲ್ಲಾ ಪೋಸ್ಟ್‌ ಡಿಲೀಟ್

ಬಾಲಿವುಡ್ ಬಹುಬೇಡಿಕೆ ನಟಿ ಕಾಜೋಲ್ ಇಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟ್ ಬಿಟ್ಟು ಈವರೆಗೆ ಶೇರ್ ಮಾಡಿದ್ದ ಎಲ್ಲ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ್ದಾರೆ.

ಬಾಲಿವುಡ್ ಬಹುಬೇಡಿಕೆ ನಟಿ ಕಾಜೋಲ್ ಇಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೊಸ ಪೋಸ್ಟ್ ಬಿಟ್ಟು ಈವರೆಗೆ ಶೇರ್ ಮಾಡಿದ್ದ ಎಲ್ಲ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 14.4 ಮಿಲಿಯನ್ ಫಾಲೋವರ್​ಗಳನ್ನು ಸಂಪಾದಿಸಿರುವ ಬಾಲಿವುಡ್​ ಬೆಡಗಿ ಕಾಜೋಲ್​ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳಲು ಇಚ್ಛಿಸಿದ್ದಾರೆ. ಸೋಷಿಯಲ್​ ಮೀಡಿಯಾದಿಂದ ಬ್ರೇಕ್​​ ಘೋಷಿಸಿರುವ ಪೋಸ್ಟ್ ಒಂದನ್ನು ಹೊರತುಪಡಿಸಿ ಉಳಿದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್​ ಮಾಡಿ ಹಾಕಿದ್ದಾರೆ.

ಈ ಕುರಿತು ಅವರು ಶುಕ್ರವಾರ ಟ್ವಿಟರ್, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿಕೊಂಡಿದ್ದು ಸಾಮಾಜಿಕ ಮಾಧ್ಯಮಗಳಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿ, ‘ನನ್ನ ಜೀವನದ ಕಠಿಣ ವಿಚಾರಣೆಗಳನ್ನು ಪ್ರಯೋಗಗಳಲ್ಲಿ ಒಂದನ್ನು ಎದುರಿಸುತ್ತಿದ್ದೇನೆ’ ಎಂದು ನಿಗೂಢವಾಗಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಿಂದ ತೊಂದರೆ ಅನುಭವಿಸುತ್ತಿದ್ದೇನೆ’ ಎಂಬ ಅರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ನಟ ಅಜಯ್ ದೇವಗನ್ ಅವರ ಪತ್ನಿ ಹಾಗೂ ಎರಡು ಮಕ್ಕಳ ತಾಯಿಯಾಗಿರುವ ಕಾಜೋಲ್, ಸಾಮಾಜಿಕ ಮಾಧ್ಯಮಗಳಲ್ಲಿ ಯಾರಿಂದಾದರೂ ಶೋಷಣೆಗೆ ಒಳಗಾದರೇ? ಎಂಬ ಅನುಮಾನವನ್ನು ಅವರ ಪೋಸ್ಟ್ ಮೂಡಿಸುತ್ತಿದೆ ಎಂದು ಅನೇಕ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಸಾಮಾಜಿಕ ಮಾಧ್ಯಮಗಳಿಂದ ತೊಂದರೆ ಅನುಭವಿಸುತ್ತಿದ್ದೇನೆ’ ಎಂಬ ಅರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿಯ ಎಲ್ಲ ಪೋಸ್ಟ್‌ಗಳನ್ನು ಅಳಿಸಿ ಹಾಕಿರುವ ಅವರು, ಟ್ವಿಟರ್‌, ಫೇಸ್‌ಬುಕ್ ಪೋಸ್ಟ್‌ಗಳನ್ನು ಅಳಿಸಿ ಹಾಕಿಲ್ಲ. ಅವರ ಈ ನಡೆಗೆ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿ, ನೀವು ಎಂತಹುದೇ ಪರಿಸ್ಥಿತಿ ಎದುರಿಸಲು ಸಮರ್ಥರಿದ್ದೀರಿ ಎಂದು ಧೈರ್ಯ ತುಂಬಿದ್ದಾರೆ.

ಕಾಜೋಲ್ ಅವರು ಫೇಸ್‌ಬುಕ್‌ನಲ್ಲಿ 2.8 ಕೋಟಿ, ಟ್ವಿಟರ್‌ನಲ್ಲಿ 38 ಲಕ್ಷ ಹಾಗೂ ಇನ್‌ಸ್ಟಾಗ್ರಾಂನಲ್ಲಿ 1.4 ಕೋಟಿ ಫಾಲೋವರ್ಸ್ ಇದ್ದಾರೆ. ಕಾಜೋಲ್ ತಮ್ಮ ಮುಂಬರುವ ಪ್ರಾಜೆಕ್ಟ್‌ನ ಪ್ರಚಾರದ ಭಾಗವಾಗಿ ಸಾಮಾಜಿಕ ಮಾಧ್ಯಮದಿಂದ ಹೊರಗುಳಿಯುತ್ತಿದ್ದಾರೆ ಎಂದು ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಶಂಕಿಸಿದ್ದಾರೆ. ಇದು ಅವರ ಮುಂದಿನ OTT ಸರಣಿ 'ದಿ ಗುಡ್ ವೈಫ್‌'ನ ಪ್ರಚಾರದ ತಂತ್ರವಾಗಿದೆ ಎಂದು ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ