ಸುಹಾನಾ ಖಾನ್ 
ಬಾಲಿವುಡ್

ಅಲಿಬಾಗ್‌ನಲ್ಲಿ ಒಂದೂವರೆ ಎಕರೆ ಕೃಷಿ ಭೂಮಿ ಖರೀದಿಸಿದ ಶಾರುಖ್ ಪುತ್ರಿ ಸುಹಾನಾ ಖಾನ್

ಬಾಲಿವುಡ್‌ ನಟಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ 'ದಿ ಆರ್ಚೀಸ್' ಚಿತ್ರದ ಮೂಲಕ ನಟಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ಮುಂಬೈ: ಬಾಲಿವುಡ್‌ ನಟಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ 'ದಿ ಆರ್ಚೀಸ್' ಚಿತ್ರದ ಮೂಲಕ ನಟಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಸುಹಾನಾ ಖಾನ್ ತಮ್ಮ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಕೋಟ್ಯಂತರ ರೂಪಾಯಿ ಆಸ್ತಿ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ.

ಸುಹಾನಾ ಖಾನ್ ಪ್ರಾಪರ್ಟಿ ಇತ್ತೀಚೆಗೆ ಮುಂಬೈನ ಪಕ್ಕದಲ್ಲಿರುವ ಅಲಿಬಾಗ್‌ನ ಹಳ್ಳಿಯೊಂದರಲ್ಲಿ ಭೂಮಿಯನ್ನು ಖರೀದಿಸಿದ್ದಾರೆ. ಇದರ ಬೆಲೆ 12.91 ಕೋಟಿ ರೂಪಾಯಿ. ಸುಹಾನಾ ಖಾನ್ ಕೋಟಿಗಟ್ಟಲೆ ಜಮೀನು ಖರೀದಿಸಿದ್ದಕ್ಕಿಂತ ಶಾರುಖ್ ಖಾನ್ ಮಗಳು ಕೃಷಿ ಭೂಮಿ ಖರೀದಿಸಿ ಕಾಗದದ ಮೇಲೆ ರೈತ ಎಂದು ಬಣ್ಣಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಮಾಹಿತಿಯ ವಹಿವಾಟುಗಳ ಬಗ್ಗೆ ಇಂಡೆಕ್ಸ್‌ಟ್ಯಾಪ್‌ ಡಾಟ್ ಕಾಮ್‌ ಹಂಚಿಕೊಂಡಿದೆ. ಅಂಜಲಿ, ರೇಖಾ ಮತ್ತು ಪ್ರಿಯಾ ಎಂಬ ಮೂವರು ಹೆಣ್ಣು ಮಕ್ಕಳಿಗೆ ಅವರ ಫೋಷಕರು ಈ ಕೃಷಿ ಭೂಮಿಯನ್ನು ಗಿಫ್ಟ್‌ ಆಗಿ ಕೊಟ್ಟಿದ್ದರಂತೆ. ಅದನ್ನು ಈಗ ಸುಹಾನಾ ಖರೀದಿಸಿದ್ದಾರೆ.

ಈಗ ಸುಹಾನಾ ಖಾನ್ ಕೃಷಿ ಭೂಮಿಯನ್ನು Deja Vu Farm Pvt Ltd ಹೆಸರಿನಲ್ಲಿ ನೋಂದಣಿ ಮಾಡಿದ್ದಾರೆ. ಇದಕ್ಕೆ ಶಾರುಖ್ ಅತ್ತೆ ಸವಿತಾ ಚಿಬ್ಬರ್ ಮತ್ತು ಹೆಂಡತಿ ತಂಗಿ ನಮಿತಾ ಚಿಬ್ಬರ್ ಡೈರೆಕ್ಟರ್ಸ್‌ ಆಗಿರಲಿದ್ದಾರೆ. ಅಲಿಬಾಗ್‌ ಟೌನ್‌ನಿಂದ 12 ನಿಮಿಷ ದೂರ ಪ್ರಯಾಣ ಮಾಡಿದರೆ ಸಿಗುವ ತಾಲ್ ಹಳ್ಳಿಯಲ್ಲಿ ಈ ಭೂಮಿ ಖರೀದಿಸಿರುವುದು. ಈ ಭೂಮಿ ಮತ್ತೊಂದು ವಿಶೇಷತೆ ಏನೆಂದರೆ ಸಮುದ್ರ ಮುಖ ಮಾಡಿದೆ, ದೊಡ್ಡ ಸ್ವಿಮಿಂಗ್ ಪೂಲ್ ಮತ್ತು ಹೆಲಿಪ್ಯಾಡ್ ಜಾಗ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ