ಪ್ರಿಯಾಂಕಾ-ಕರಣ್ ಜೋಹಾರ್-ಕಂಗನಾ 
ಬಾಲಿವುಡ್

ಕರಣ್ ಜೋಹರ್ ಕಾರಣಕ್ಕಾಗಿ ಪ್ರಿಯಾಂಕಾ ಚೋಪ್ರಾ ಭಾರತ ಬಿಟ್ಟು ಹೋಗಿದ್ದು?: ನಟಿ ಕಂಗನಾ ರಣಾವತ್

ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ದೇಸಿ ಹುಡುಗಿ ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. 

ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ದೇಸಿ ಹುಡುಗಿ ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. 

ಪ್ರಿಯಾಂಕಾ ಈಗ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಬಾಲಿವುಡ್‌ನಲ್ಲಿ ಮೂಲೆಗುಂಪಾಗಿದ್ದರಿಂದ ಹಾಲಿವುಡ್‌ಗೆ ಹೋದೆ ಎಂದು ನಟಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದರು. ಇದೀಗ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಗ್ಗೆ ದೊಡ್ಡ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಕಂಗನಾ ಪ್ರಕಾರ, ಪ್ರಿಯಾಂಕಾ ಅವರನ್ನು ಬಾಲಿವುಡ್‌ನಲ್ಲಿ ಕರಣ್ ಜೋಹರ್ ನಿಷೇಧಿಸಿದರು. ಈ ಕಾರಣಕ್ಕಾಗಿಯೇ ಪ್ರಿಯಾಂಕಾ ಹಾಲಿವುಡ್ ಗೆ ಹೋಗಬೇಕಾಯಿತು ಎಂದು ಹೇಳಿದ್ದಾರೆ.

ಕಂಗನಾ ರಣಾವತ್ ಅವರ ಇತ್ತೀಚಿನ ಟ್ವೀಟ್ ವೈರಲ್
ಕಂಗನಾ ಟ್ವೀಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಬಾಲಿವುಡ್ ನಲ್ಲಿ ಗುಂಪುಗೂಡಿದರು. ಅಲ್ಲದೆ ಆಕೆಯನ್ನು ಬೆದರಿಸಿ ಚಿತ್ರರಂಗದಿಂದ ಹೊರಹಾಕಲಾಯಿತು. ಸಾಕಷ್ಟು ಏಳು ಬೀಳುಗಳನ್ನು ನೋಡಿ ತನ್ನನ್ನು ತಾನು ಚಿತ್ರರಂಗದಲ್ಲಿ ಸ್ಥಾಪಿಸಿಕೊಂಡಿದ್ದ ಮಹಿಳೆ ಭಾರತ ತೊರೆಯಬೇಕಾಯಿತು. ಕರಣ್ ಜೋಹರ್ ಅವರನ್ನು ಬ್ಯಾನ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ ಎಂದರು. 

ಕರಣ್ ಜೋಹರ್ ಬಗ್ಗೆ ಕಂಗನಾ ಹೇಳಿದ್ದು ಹೀಗೆ
ಮುಂದಿನ ಟ್ವೀಟ್‌ನಲ್ಲಿ, ಶಾರುಖ್ ಅವರೊಂದಿಗಿನ ಸ್ನೇಹದಿಂದಾಗಿ ಕರಣ್ ಜೋಹರ್ ಅವರೊಂದಿಗೆ ಪ್ರಿಯಾಂಕಾ ಹೋರಾಟ ನಡೆಸಬೇಕಾದದ್ದನ್ನು ಮಾಧ್ಯಮಗಳು ಬರೆದಿದ್ದವು. ಪ್ರಿಯಾಂಕಾಗೆ ಭಾರತವನ್ನು ತೊರೆಯಬೇಕಾದಷ್ಟು ಕಿರುಕುಳ ನೀಡಿದರು ಎಂದು ಬರೆದಿದ್ದಾರೆ. ಇನ್ನು ಮತ್ತೊಂದು ಟ್ವೀಟ್ ನಲ್ಲಿ ಜುಗುಪ್ಸೆ, ಅಸೂಯೆ, ನೀಚ ಮತ್ತು ವಿಷಕಾರಿ ವ್ಯಕ್ತಿ ಚಿತ್ರರಂಗದ ಸಂಸ್ಕೃತಿ ಮತ್ತು ಪರಿಸರವನ್ನು ಹಾಳುಮಾಡಿದ್ದಾರೆ. ಶಾರುಖ್ ಖಾನ್ ದಿನಗಳಲ್ಲಿ ಹೊರಗಿನವರಿಗೆ ಎಂದಿಗೂ ಪ್ರತಿಕೂಲವಾಗಿರಲಿಲ್ಲ ಎಂದು ಟ್ವೀಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ: ಸೈರಾಂಗ್‌-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ; ಸ್ಥಳದಲ್ಲೇ 7 ಆನೆಗಳ ದಾರುಣ ಸಾವು

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

Air India Express ಪೈಲಟ್ ನಿಂದ ಸ್ಪೈಸ್ ಜೆಟ್ ಪ್ರಯಾಣಿಕನ ಮೇಲೆ ಹಲ್ಲೆ; ರಕ್ತಸ್ರಾವದಿಂದ ನರಳಿದ ಸಂತ್ರಸ್ತ

Epstein Files ಬಿಡುಗಡೆ: ಟ್ರಂಪ್ ಬಗ್ಗೆ ಹೆಚ್ಚಿನದ್ದಿಲ್ಲ; ಕ್ಲಿಂಟನ್ ಫೋಟೋಗಳು ಬಹಿರಂಗ!

ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಸಿಗದ ನಿರೀಕ್ಷಣಾ ಜಾಮೀನು: ಅಜ್ಞಾತ ಸ್ಥಳಕ್ಕೆ ತೆರಳಿದ ಬಿಜೆಪಿ ಶಾಸಕ ಭೈರತಿ ಬಸವರಾಜು?

SCROLL FOR NEXT