ಡಂಕಿ ಚಿತ್ರದ ಟೀಸರ್ 
ಬಾಲಿವುಡ್

Dunki teaser: ಶಾರುಖ್​ ಖಾನ್​​ ಜನ್ಮದಿನಕ್ಕೆ 'ಡಂಕಿ' ಟೀಸರ್ ಔಟ್, ರಾಜ್‌ಕುಮಾರ್ ಹಿರಾನಿ ಮತ್ತೆ ಮ್ಯಾಜಿಕ್!

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಡಂಕಿ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು, 3 ಈಡಿಯಟ್ಸ್ ಖ್ಯಾತಿಯ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ವಲಸಿಗರ ಕುರಿತ ಕಥಾ ಹಂದರವನ್ನು ಒಳಗೊಂಡಿದೆ.

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಡಂಕಿ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು, 3 ಈಡಿಯಟ್ಸ್ ಖ್ಯಾತಿಯ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ವಲಸಿಗರ ಕುರಿತ ಕಥಾ ಹಂದರವನ್ನು ಒಳಗೊಂಡಿದೆ.

ಶಾರುಖ್ ಖಾನ್ ಅವರ ಜನ್ಮದಿನದ ನಿಮಿತ್ತ ಡಂಕಿ ಚಿತ್ರದ ಟೀಸರ್​ ಅನಾವರಣಗೊಳಿಸಲಾಗಿದೆ. ಚಿತ್ರ ತಯಾರಕರು ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮುಖೇನ ಶಾರುಖ್​ ಖಾನ್​ ಜನ್ಮದಿನವನ್ನು ವಿಶೇಷವಾಗಿಸಿದ್ದಾರೆ.

2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ 'ಡಂಕಿ' ಟೀಸರ್​ ಬಿಡುಗಡೆಗೆ ಚಿತ್ರತಯಾರಕರು ವಿಶೇಷ ಸಂದರ್ಭಕ್ಕಾಗಿ ಕಾದಿದ್ದರು. ಇದೀಗ ಶಾರುಖ್ ಖಾನ್ ಜನ್ಮ ದಿನದಂದೇ ಡಂಕಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಅಂದಹಾಗ ಚಿತ್ರದ ತಂಡ ಟೀಸರ್ ಅನ್ನು 2 ಭಾಗಗಳಲ್ಲಿ ರಿಲೀಸ್ ಮಾಡಲು ಸಿದ್ಧವಾಗಿದ್ದು, ಈ ಪೈಕಿ ಈಗ ಮೊದಲ ಟೀಸರ್ ಮಾತ್ರ ಬಿಡುಗಡೆಯಾಗಿದೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಚಿತ್ರವನ್ನು ಶಾರುಖ್​​ ಖಾನ್ ಅವರ ಬ್ಯಾನರ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ತಾಪ್ಸಿ ಪನ್ನು ಎಸ್​​​ಆರ್​ಕೆ ಜೊತೆ ಸ್ಕ್ರೀನ್​​ ಶೇರ್ ಮಾಡಿದ್ದು, ವಿಶೇಷ ಪಾತ್ರಗಳಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ