ಕಂಗನಾ ರಣಾವತ್ 
ಬಾಲಿವುಡ್

'ಕೃಷ್ಣಾನುಗ್ರಹವಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ': ನಟಿ ಕಂಗನಾ ರಣಾವತ್

ಕೃಷ್ಣಾನುಗ್ರಹವಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಶುಕ್ರವಾರ ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ.

ದೇವಭೂಮಿ ದ್ವಾರಕಾ: ಕೃಷ್ಣಾನುಗ್ರಹವಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಶುಕ್ರವಾರ ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ.

ಇಂದು ಬೆಳಗ್ಗೆ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ, "ಶ್ರೀ ಕೃಷ್ಣ ಕಿ ಕೃಪಾ ರಹೀ ತೊ ಲಡೆಂಗೆ (ಶ್ರೀಕೃಷ್ಣ ಆಶೀರ್ವಾದ ಮಾಡಿದ ಹೋರಾಡುತ್ತೇನೆ)" ಎಂದು ಹೇಳಿದರು.

"600 ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಭಗವಾನ್ ರಾಮನ ವಿಗ್ರಹ ಪ್ರತಿಷ್ಠಾಪನೆಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅವರು ಶ್ಲಾಘಿಸಿದರು. ಬಿಜೆಪಿ ಸರ್ಕಾರದ ಪ್ರಯತ್ನದಿಂದ, 600 ವರ್ಷಗಳ ಹೋರಾಟದ ನಂತರ ಭಾರತೀಯರಾದ ನಾವು ಈ ದಿನವನ್ನು ನೋಡುತ್ತೇವೆ. ಅತ್ಯಂತ ಸಂಭ್ರಮದಿಂದ ದೇವಾಲಯವನ್ನು ಸ್ಥಾಪಿಸುತ್ತಿದ್ದೇವೆ. ಸನಾತನ ಧರ್ಮದ ಧ್ವಜವು ಪ್ರಪಂಚದಾದ್ಯಂತ ಹಾರಬೇಕು ಎಂದು ಅವರು ಹೇಳಿದರು. 

ಇದೇ ಸಂದರ್ಭದಲ್ಲಿ ಸಮುದ್ರದಡಿಯಲ್ಲಿ ಮುಳುಗಿರುವ  ದ್ವಾರಕಾ ನಗರದ ಅವಶೇಷಗಳನ್ನು ನೋಡಲು ಯಾತ್ರಾರ್ಥಿಗಳಿಗೆ ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು. ದ್ವಾರಕಾ ದಿವ್ಯ ನಗರಿ ಎಂದು ಯಾವಾಗಲು ಹೇಳುತ್ತೇನೆ. ಇಲ್ಲಿ ಎಲ್ಲವೂ ಅದ್ಭುತವಾಗಿದೆ. ದ್ವಾರಕಾಧೀಶ ಪ್ರತಿ ಕಣದಲ್ಲಿಯೂ ಇದ್ದಾನೆ, ದೇವರ ದರ್ಶನ ಪಡೆಯಲು ಇಲ್ಲಿಗೆ ಬರಲು ಪ್ರಯತ್ನಿಸುತ್ತೇನೆ. ಕೆಲಸದಿಂದ ಸ್ವಲ್ಪ ಸಮಯ ಸಿಕ್ಕಾಗಲೆಲ್ಲಾ ಇಲ್ಲಿಗೆ ಬರುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

"ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರ ಮೇಲಿನಿಂದ ಕೂಡ ಗೋಚರಿಸುತ್ತದೆ, ನೀರಿನೊಳಗೆ ಹೋಗಿ ಅವಶೇಷಗಳನ್ನು ನೋಡಬಹುದಾದಂತಹ ಸೌಲಭ್ಯವನ್ನು ಸರ್ಕಾರ ನೀಡಬೇಕೆಂದು  ಬಯಸುತ್ತೇನೆ. ನನಗೆ ಕೃಷ್ಣ ನಗರವು ಸ್ವರ್ಗದಂತೆ" ಎಂದು ಅವರು ಹೇಳಿದರು. ತಮ್ಮ ಮುಂಬರುವ "ಎಮರ್ಜೆನ್ಸಿ"  ಮತ್ತು ತನು ವೆಡ್ಸ್ ಮನು ಭಾಗ 3" ಚಿತ್ರದ ಬಗ್ಗೆಯೂ ರಣಾವತ್ ಮಾತನಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT