ಸಿಂಗಂ ಎಗೇನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ 
ಬಾಲಿವುಡ್

'Singham Again' ಚಿತ್ರದ ದೀಪಿಕಾ ಪಡುಕೋಣೆ ಪಾತ್ರದ ಪೋಸ್ಟರ್ ಬಿಡುಗಡೆ; ಶಕ್ತಿ ಶೆಟ್ಟಿ ಅವತಾರದಲ್ಲಿ ಮಿಂಚು!

ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಎಗೇನ್ ಚಿತ್ರದ ನಿರ್ದೇಶಕರು ಭಾನುವಾರ ದೀಪಿಕಾ ಪಡುಕೋಣೆ ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ನಟಿ ಖಡಕ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಶಕ್ತಿ ಶೆಟ್ಟಿ ಎಂಬ ಹೆಸರಿನ ಅವರ ಕೈಯಲ್ಲಿ ಗನ್ ಹಿಡಿದಿದ್ದಾರೆ.

ಮುಂಬೈ: ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಎಗೇನ್ ಚಿತ್ರದ ನಿರ್ದೇಶಕರು ಭಾನುವಾರ ದೀಪಿಕಾ ಪಡುಕೋಣೆ ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ನಟಿ ಖಡಕ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಶಕ್ತಿ ಶೆಟ್ಟಿ ಎಂಬ ಹೆಸರಿನ ಅವರ ಕೈಯಲ್ಲಿ ಗನ್ ಹಿಡಿದಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರೋಹಿತ್, 'ಮಹಿಳೆಯು ಸೀತೆ ಮತ್ತು ದುರ್ಗಾ ಎರಡೂ ಅವತಾರದಲ್ಲಿ ಕಾಣಿಸಿಕೊಳ್ಳಬಲ್ಲಳು. ಈಕೆ ನಮ್ಮ ಲೇಡಿ ಸಿಂಗಂ ಶಕ್ತಿ ಶೆಟ್ಟಿ... ಈಕೆ ನಮ್ಮ ಪೊಲೀಸ್ ಪ್ರಪಂಚದ ಅತ್ಯಂತ ಹಿಂಸಾತ್ಮಕ ಅಧಿಕಾರಿ' ಎಂದು ಕರೆದಿದ್ದಾರೆ.

ಮತ್ತೊಂದು ಪೋಸ್ಟರ್‌ನಲ್ಲಿ, ಆಕೆ ಅನೇಕ ಅಪರಾಧಿಗಳ ಕುಳಿತು, ಅವರಲ್ಲಿ ಒಬ್ಬರಿಗೆ ತನ್ನ ಗನ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ.

ಅಜಯ್ ದೇವಗನ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ರೋಹಿತ್ ಶೆಟ್ಟಿ ಅವರ ಸಿಂಬಾ ಚಿತ್ರದ ಭಾಗವಾಗಿದ್ದ ರಣವೀರ್ ಸಿಂಗ್ ಕೂಡ ನಟಿಸಿದ್ದಾರೆ. ಅವರು ಇನ್‌ಸ್ಪೆಕ್ಟರ್ ಸಂಗ್ರಾಮ್ ಭಲೇರಾವ್ ಪಾತ್ರವನ್ನು ಪುನರಾವರ್ತಿಸಲಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಕೂಡ ಇದ್ದಾರೆ.

ಅಜಯ್ ದೇವಗನ್ ನಟನೆಯ ಸಿಂಗಂ ಸರಣಿಯ ಮೂರನೇ ಚಿತ್ರ ಇದಾಗಿದ್ದು, 2011ರಲ್ಲಿ ಸಿಂಗಂ ಸಿನಿಮಾ ತೆರೆಕಂಡಿತ್ತು. ನಂತರ ಸಿಂಗಮ್ ರಿಟರ್ನ್ಸ್ (2014) ನಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕರೀನಾ ಕಪೂರ್ ಮತ್ತು ರಣವೀರ್ ಸಿಂಗ್ ಮೊದಲ ಬಾರಿಗೆ ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಸಿಂಗಂ ಎಗೇನ್ ಸಿನಿಮಾ 2024ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

DA hike: ಕೇಂದ್ರ ಸರ್ಕಾರಿ ನೌಕರರಿಗೆ 'ದಸರಾ ಗಿಫ್ಟ್' ; ಶೇ. 3 ರಷ್ಟು ಹೆಚ್ಚುವರಿ ತುಟ್ಟಿ ಭತ್ಯೆ, ಕೇಂದ್ರ ಸಂಪುಟ ಅನುಮೋದನೆ

Pakistan Army ವಿರುದ್ಧ ತಿರುಗಿ ಬಿದ್ದ POK ಜನತೆ, ಸೇನಾಧಿಕಾರಿಗಳ Kidnap, ಸೇನಾ ಟ್ರಕ್ ನದಿಗೆ! Video

Asia Cup 2025: BCCI ವಾಗ್ದಂಡನೆ ಎಚ್ಚರಿಕೆಗೆ ಹೆದರಿದ Mohsin Naqvi, UAE Boardಗೆ ಭಾರತದ ಟ್ರೋಫಿ ಹಸ್ತಾಂತರ: ವರದಿ

ಕೇಂದ್ರದಿಂದ ಬರ ಪರಿಹಾರ: ಕುಮಾರಸ್ವಾಮಿ ಹೇಳಿಕೆ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ, ಹೇಳಿದ್ದೇನು?

Asia Cup 2025 ಸೋಲಿನ ಬೆನ್ನಲ್ಲೇ ಬರೆ, ಬಾಲ ಬಿಚ್ಚಿದ್ದ ಆಟಗಾರರ ಪುಡಿಗಾಸಿಗೂ PCB ಕೊಕ್ಕೆ!, NOC 'Suspension'

SCROLL FOR NEXT