ನಾವಾಜುದ್ದೀನ್ ಸಿದ್ದಿಕಿ-ಆಲಿಯಾ ಸಿದ್ದಿಕಿ 
ಬಾಲಿವುಡ್

ದೌರ್ಜನ್ಯ ಪ್ರಕರಣದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿಗೆ ಉತ್ತರ ಪ್ರದೇಶ ಕೋರ್ಟ್ ಸಮನ್ಸ್

ನಟ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿರುವ ಕಿರುಕುಳ ಪ್ರಕರಣದಲ್ಲಿ ಅಕ್ಟೋಬರ್ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿಗೆ ವಿಶೇಷ ಪೋಕ್ಸೊ ನ್ಯಾಯಾಲಯ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಲಖನೌ: ನಟ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿರುವ ಕಿರುಕುಳ ಪ್ರಕರಣದಲ್ಲಿ ಅಕ್ಟೋಬರ್ 7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿಗೆ ವಿಶೇಷ ಪೋಕ್ಸೊ ನ್ಯಾಯಾಲಯ ಮಂಗಳವಾರ ನೋಟಿಸ್ ಜಾರಿ ಮಾಡಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ರಿತೇಶ್ ಸಚ್‌ದೇವ ಅವರು ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಪೊಲೀಸರು ಅಂತಿಮ ವರದಿಯನ್ನು ಸಲ್ಲಿಸಿದ ನಂತರ ಉತ್ತರಿಸಲು ಹಾಜರಾಗುವಂತೆ ದೂರುದಾರರಾದ ಆಲಿಯಾ ಸಿದ್ದಿಕಿ ಅವರನ್ನು ಕೇಳಿದ್ದಾರೆ.

ದೌರ್ಜನ್ಯ ಪ್ರಕರಣದಲ್ಲಿ ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ಐವರು ಆರೋಪಿಗಳಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಸರ್ಕಾರಿ ವಕೀಲ ಪ್ರದೀಪ್ ಬಲಿಯಾನ್ ತಿಳಿಸಿದ್ದಾರೆ.

ಪ್ರಾಸಿಕ್ಯೂಷನ್ ಪ್ರಕಾರ, ನವಾಜುದ್ದೀನ್ ಅವರ ಸಹೋದರ ಮಿನಾಜುದ್ದೀನ್ 2012ರಲ್ಲಿ ಕುಟುಂಬದ ಅಪ್ರಾಪ್ತ ಸದಸ್ಯರಿಗೆ ಕಿರುಕುಳ ನೀಡಿದ್ದರು. ಇದಕ್ಕೆ ಇತರರು ಬೆಂಬಲಿಸಿದರು ಎಂದು ಆರೋಪಿಸಿದೆ.

ಈ ಸಂಬಂಧ ಮುಂಬೈನಲ್ಲಿ ಆಲಿಯಾ ಎಫ್‌ಐಆರ್ ದಾಖಲಿಸಿದ್ದರು. ನಂತರ 2020ರಲ್ಲಿ ಅದನ್ನು ಬುಧಾನಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು.

ತನಿಖೆಯ ನಂತರ ಪೊಲೀಸರು ಈ ಪ್ರಕರಣದಲ್ಲಿ ನವಾಜುದ್ದೀನ್, ಆತನ ತಾಯಿ ಮೆಹರುನಿಸಾ, ಆತನ ಸಹೋದರರಾದ ಫೈಜುದ್ದೀನ್, ಅಯಾಜುದ್ದೀನ್ ಮತ್ತು ಮಿನಾಜುದ್ದೀನ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್